‘ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು’; ‘ಗಜಪಡೆ’ ಪೋಸ್ಟ್ ಬಗ್ಗೆ ಅಶ್ವಿನಿ ಪರೋಕ್ಷ ಮಾತು

| Updated By: ರಾಜೇಶ್ ದುಗ್ಗುಮನೆ

Updated on: Apr 06, 2024 | 2:22 PM

ಪಿಆರ್​ಕೆ ಸ್ಟುಡಿಯೋ ಅಡಿಯಲ್ಲಿ  ‘ಓ2’ ಸಿನಿಮಾ ನಿರ್ಮಾಣ ಮಾಡಿದ್ದಾರೆ ಅವರು. ಈ ಚಿತ್ರದ ಸುದ್ದಿಗೋಷ್ಠಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಹೋಟೆಲ್ ಒಂದರಲ್ಲಿ ನಡೆದಿದೆ. ಈ ವೇಳೆ ಅಶ್ವಿನಿ ಮಾತನಾಡಿದ್ದಾರೆ.

‘ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು’; ‘ಗಜಪಡೆ’ ಪೋಸ್ಟ್ ಬಗ್ಗೆ ಅಶ್ವಿನಿ ಪರೋಕ್ಷ ಮಾತು
ಪುನೀತ್-ಅಶ್ವಿನಿ
Follow us on

ಪುನೀತ್ ರಾಜ್​ಕುಮಾರ್ (Puneeth Rajkumar) ಪತ್ನಿ ಹಾಗೂ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಸದ್ಯ ಸುದ್ದಿಯಲ್ಲಿದ್ದಾರೆ. ‘ಗಜಪಡೆ’ ಹೆಸರಿನ ಟ್ವಿಟರ್ ಖಾತೆ ಮೂಲಕ ವ್ಯಕ್ತಿಯೋರ್ವ ಅಶ್ವಿನಿ ಅವರ ಬಗ್ಗೆ ತುಂಬಾನೇ ಕೀಳುಮಟ್ಟದ ಪದ ಬಳಕೆ ಮಾಡಿದ್ದ. ಇದು ದರ್ಶನ್ ಅಭಿಮಾನಿಯ ಖಾತೆ ಎಂದು ಹೇಳಲಾಗುತ್ತಿದೆ. ಈ ವಿಚಾರ ತನಿಖೆ ಬಳಿಕವೇ ಗೊತ್ತಾಗಬೇಕಿದೆ. ಈಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

ಪುನೀತ್ ನಿಧನದ ನಂತರ ಪಿಆರ್​ಕೆ ಸ್ಟುಡಿಯೋ ಜವಾಬ್ದಾರಿಯನ್ನು ಅಶ್ವಿನಿ ಅವರೇ ತೆಗೆದುಕೊಂಡಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಪಿಆರ್​ಕೆ ಸ್ಟುಡಿಯೋ ಅಡಿಯಲ್ಲಿ  ‘ಓ2’ ಸಿನಿಮಾ ನಿರ್ಮಾಣ ಮಾಡಿದ್ದಾರೆ ಅವರು. ಈ ಚಿತ್ರದ ಸುದ್ದಿಗೋಷ್ಠಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಹೋಟೆಲ್ ಒಂದರಲ್ಲಿ ನಡೆದಿದೆ. ಈ ವೇಳೆ ಅಶ್ವಿನಿ ಮಾತನಾಡಿದ್ದಾರೆ.

ಇದನ್ನೂ ಓದಿ: Exclusive: ಅಶ್ವಿನಿ ಪುನೀತ್ ಕುರಿತ ಪೋಸ್ಟ್ ನೋಡಿ ಬೇಸರಗೊಂಡ ದರ್ಶನ್; ಕೊಟ್ಟ ಸೂಚನೆ ಏನು?

‘ಪಾಸಿಟಿವ್ ಮತ್ತು ನೆಗೆಟಿವ್​ನ ಹೇಗೆ ತೆಗೆದುಕೊಳ್ಳುತ್ತಿರಿ’ ಎನ್ನುವ ಪ್ರಶ್ನೆಯನ್ನು ಮಾಡಲಾಗಿದೆ. ಇದಕ್ಕೆ ಅವರು ನೇರ ಉತ್ತರ ನೀಡಿದ್ದಾರೆ. ‘ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ’ ಎಂದಿದ್ದಾರೆ ಅವರು. ಈ ಮೂಲಕ ಸಾಕಷ್ಟು ಚರ್ಚೆ ಆದ ಘಟನೆಗೆ ಪರೋಕ್ಷವಾಗಿ ಅವರು ಉತ್ತರಿಸಿದ್ದಾರೆ. ಪಿಆರ್​​ಕೆ ಅಡಿಯಲ್ಲಿ ಸಿದ್ಧವಾಗುತ್ತಿದ್ದ ಸಿನಿಮಾಗಳಿಗೆ ಪುನೀತ್ ಅವರು ಕಥೆ ಕೇಳಿ ಫೈನಲ್ ಮಾಡುತ್ತಿದ್ದರು. ‘ಒ2’ ಚಿತ್ರದವರೆಗೂ ಅಪ್ಪು ಕಥೆಯನ್ನು ಕೇಳಿದ್ದರು. ಇನ್ಮುಂದೆ ನನ್ನ ಮತ್ತು ನನ್ನ ಟೀಮ್ ನಿರ್ಧಾರ ಇರುತ್ತದೆ’ ಎಂದು ಅವರು ಹೇಳಿದ್ದಾರೆ.

ಅಪ್ಪು ರೀ-ರಿಲೀಸ್

ಈ ವರ್ಷ ಪುನೀತ್ ರಾಜ್​ಕುಮಾರ್ ಬರ್ತ್​​ಡೇ ಪ್ರಯುಕ್ತ ‘ಜಾಕಿ’ ಸಿನಿಮಾ ರಿಲೀಸ್ ಆಗಿತ್ತು. ಅನೇಕರು ‘ಅಪ್ಪು’ ಚಿತ್ರನ್ನು ಮರು ಬಿಡುಗಡೆ ಮಾಡಲು ಕೋರಿಕೊಂಡಿದ್ದರು. ಈ ಬಗ್ಗೆ ಅವರು ಮಾತನಾಡಿದ್ದಾರೆ. 2025ರ ಪುನೀತ್ ಬರ್ತ್​ಡೇಗೆ (ಮಾರ್ಚ್ 17) ‘ಅಪ್ಪು’ ಮತ್ತೆ ಬಿಡುಗಡೆ ಆಗಲಿದೆಯಂತೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಪುನೀತ್ ಹೀರೋ ಆಗಿ ಎಂಟ್ರಿ ಕೊಟ್ಟಿದ್ದು ‘ಅಪ್ಪು’ ಸಿನಿಮಾ ಮೂಲಕ. ಅವರ ಜನಪ್ರಿಯತೆಯನ್ನು ಸಿನಿಮಾ ಹೆಚ್ಚಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ