Kareena Kapoor: ಕರೀನಾ ಕಪೂರ್ ರಿಜೆಕ್ಟ್ ಮಾಡಿದ್ದ ಈ ಐದು ಸಿನಿಮಾಗಳು ಸೂಪರ್ ಹಿಟ್
ಯಶ್ ಸಹೋದರಿಯ ಪಾತ್ರದಲ್ಲಿ ಕರೀನಾ ನಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಇನ್ನೂ ಕೆಲವರು ಅವರು ಈ ಆಫರ್ನ ರಿಜೆಕ್ಟ್ ಮಾಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಕರೀನಾ ಕಪೂರ್ ಅವರು ಈ ಮೊದಲು ಹಲವು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದರು.
ನಟಿ ಕರೀನಾ ಕಪೂರ್ (Kareena Kapoor) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎನ್ನುವ ಸುದ್ದಿ ಸದ್ಯ ಚರ್ಚೆಯಲ್ಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಇರೋ ನಿರೀಕ್ಷೆ ಸಾಕಷ್ಟು ದೊಡ್ಡದು. ಅವರು ನಟಿಸೋತ್ತಾರೋ ಅಥವಾ ಇಲ್ಲವೋ ಎಂಬುದು ಇನ್ನೂ ಅಧಿಕೃತ ಆಗಿಲ್ಲ. ಯಶ್ ಸಹೋದರಿಯ ಪಾತ್ರದಲ್ಲಿ ಕರೀನಾ ನಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಇನ್ನೂ ಕೆಲವರು ಅವರು ಈ ಆಫರ್ನ ರಿಜೆಕ್ಟ್ ಮಾಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಕರೀನಾ ಕಪೂರ್ ಅವರು ಈ ಮೊದಲು ಹಲವು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದರು. ಆ ಸಿನಿಮಾಗಳು ಹಿಟ್ ಸಾಲಿನಲ್ಲಿ ಇವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಚೆನ್ನೈ ಎಕ್ಸ್ಪ್ರೆಸ್
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಚೆನ್ನೈ ಎಕ್ಸ್ಪ್ರೆಸ್’ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿದೆ. ಈ ಚಿತ್ರದಲ್ಲಿ ಕರೀನಾ ಕಪೂರ್ ಅವರು ನಟಿಸಬೇಕಿತ್ತು. ಆದರೆ, ಅವರು ಸಿನಿಮಾ ಆಫರ್ನ ರಿಜೆಕ್ಟ್ ಮಾಡಿದ್ದರು. ಇದಕ್ಕೆ ಸ್ಪಷ್ಟ ಕಾರಣ ಗೊತ್ತಿಲ್ಲ. ಆ ಬಳಿಕ ಅದು ದೀಪಿಕಾ ಪಡುಕೋಣೆ ಪಾಲಾಯಿತು. ಅವರಿಗೆ ಈ ಸಿನಿಮಾ ಜನಪ್ರಿಯತೆ ನೀಡಿತು.
ಹಮ್ ದಿಲ್ ದೇ ಚುಕೇ ಸನಮ್
ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಅವರ ಕೆಮಿಸ್ಟ್ರಿ ಬಗ್ಗೆ ಜನರಿಗೆ ದೊಡ್ಡ ಮಟ್ಟದ ಕ್ರೇಜ್ ಇತ್ತು. ಅವರ ನಟನೆಯ ‘ಹಮ್ ದಿಲ್ ದೇ ಚುಕೇ ಸನಮ್’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರದ ಆಫರ್ ಮೊದಲು ಕರೀನಾಗೆ ಹೋಗಿತ್ತು. ಆದರೆ, ಅವರು ನಟಿಸೋಕೆ ನೋ ಎಂದರು. ನಂತರ ಇದನ್ನು ಐಶ್ವರ್ಯಾ ಒಪ್ಪಿದರು. ಸಲ್ಲು ಹಾಗೂ ಐಶ್ವರ್ಯಾ ಮಧ್ಯೆ ಬಾಂಧವ್ಯ ಬೆಳೆಯೋಕೆ ಈ ಸಿನಿಮಾ ಸಹಕಾರಿ ಆಗಿತ್ತು.
ದಿಲ್ ದಡಕನೇ ದೋ
ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ, ಫರ್ಹಾನ್ ಅಖ್ತರ್ ಅನಿಲ್ ಕಪೂರ್ ಮೊದಲಾದವರು ನಟಿಸಿದ ‘ದಿಲ್ ದಡಕನೇ ದೋ’ ಸಿನಿಮಾಗೆ ಮೊದಲು ಕರೀನಾ ಕಪೂರ್ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಆದರೆ, ಅವರಿಗೆ ಸಿನಿಮಾದ ಪಾತ್ರ ಅಷ್ಟು ಇಷ್ಟ ಆಗಿರಲಿಲ್ಲ. ಹೀಗಾಗಿ ಅವರು ನಟಿಸೋಕೆ ನೋ ಎಂದರು
ರಾಮ್ ಲೀಲಾ
ಕಲ್ಟ್ ಕ್ಲಾಸಿಕ್ ಸಿನಿಮಾ ಎನ್ನುವ ಖ್ಯಾತಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ರಾಮ್ ಲೀಲಾ’ ಚಿತ್ರಕ್ಕೆ ಇದೆ. ಸೂಪರ್ ಹಿಟ್ ಎನಿಸಿಕೊಂಡಿರುವ ಈ ಚಿತ್ರದಲ್ಲಿ ದೀಪಿಕಾ ನಾಯಕಿ ಆಗಿ ಮಿಂಚಿದ್ದರು. ಈ ಸಿನಿಮಾದ ಆಫರ್ ದೀಪಿಕಾಗೂ ಮೊದಲು ಕರೀನಾ ಕಪೂರ್ಗೆ ನೀಡಲಾಗಿತ್ತು. ಆದರೆ, ಅವರು ಈ ಸಿನಿಮಾದಲ್ಲಿ ನಟಿಸೋಕೆ ಒಪ್ಪಲಿಲ್ಲ.
ಇದನ್ನೂ ಓದಿ: ಕರೀನಾ ಕಪೂರ್ ತಮ್ಮ ಕೂದಲ ಆರೈಕೆಗೆ ಏನು ಬಳಸುತ್ತಾರೆ ಗೊತ್ತಾ?
ಕ್ವೀನ್
ಕಂಗನಾ ರಣಾವತ್ ನಟನೆಯ ‘ಕ್ವೀನ್’ ಸಿನಿಮಾ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿರೋ ಸಿನಿಮಾ. ಈ ಚಿತ್ರವನ್ನು ಮೆಚ್ಚಿಕೊಂಡ ಅನೇಕರಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಮಾಡಲು ಕರೀನಾ ಒಪ್ಪಿರಲಿಲ್ಲ. ಆ ಬಳಿಕ ಅದು ಕಂಗನಾ ಪಾಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ