ರಾಮನ ಪಾತ್ರದಲ್ಲಿ ಈ ರೀತಿ ಕಾಣ್ತಾರಾ ರಣಬೀರ್​ ಕಪೂರ್​? ಫೋಟೋ ವೈರಲ್​

ಸೋಶಿಯಲ್​ ಮೀಡಿಯಾ ಖಾತೆಯೊಂದರಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ. ರಾಮನ ಪಾತ್ರ ಮಾಡಲಿರುವ ನಟ ರಣಬೀರ್​ ಕಪೂರ್​ ಅವರು ಬಿಲ್ಲು-ಬಾಣ ಹಿಡಿದು ಆಕ್ರಮಣ ಮಾಡುತ್ತಿರುವ ದೃಶ್ಯ ಇದರಲ್ಲಿದೆ. ಅಂದಹಾಗೆ, ಇದು ಚಿತ್ರತಂಡದಿಂದ ಬಂದ ಅಧಿಕೃತ ಪೋಸ್ಟರ್​ ಅಲ್ಲ. ಹಾಗಿದ್ದರೂ ಕೂಡ ಇದನ್ನು ನೋಡಿ ಫ್ಯಾನ್ಸ್​ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ರಾಮನ ಪಾತ್ರದಲ್ಲಿ ಈ ರೀತಿ ಕಾಣ್ತಾರಾ ರಣಬೀರ್​ ಕಪೂರ್​? ಫೋಟೋ ವೈರಲ್​
ರಣಬೀರ್​ ಕಪೂರ್​
Follow us
ಮದನ್​ ಕುಮಾರ್​
|

Updated on: Apr 07, 2024 | 5:07 PM

ನಟ ರಣಬೀರ್​ ಕಪೂರ್​ (Ranbir Kapoor) ಅವರು ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಹಲವು ಬಗೆಯ ಪಾತ್ರಗಳ ಮೂಲಕ ಅವರು ಸೈ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆ ಆದ ‘ಅನಿಮಲ್​’ ಚಿತ್ರದಿಂದ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಈಗ ಅವರಿಗೆ ಇನ್ನೊಂದು ದೊಡ್ಡ ಅವಕಾಶ ಸಿಕ್ಕಿರುವುದು ಗೊತ್ತೇ ಇದೆ. ನಿತೇಶ್​ ತಿವಾರಿ ನಿರ್ದೇಶನ ಮಾಡಲಿರುವ ರಾಮಾಯಣ (Ramayan) ಕಥೆಯಾಧಾರಿತ ಸಿನಿಮಾದಲ್ಲಿ ರಣಬೀರ್​ ಕಪೂರ್​ ಅವರಿಗೆ ರಾಮನ (Lord Rama) ಪಾತ್ರ ನೀಡಲಾಗಿದೆ. ಇನ್ನೂ ಅವರ ಫಸ್ಟ್​ ಲುಕ್​ ಬಿಡುಗಡೆ ಆಗಿಲ್ಲ. ಅಷ್ಟರಲ್ಲಾಗಲೇ ಕೆಲವು ಪೋಸ್ಟರ್​ಗಳು ವೈರಲ್​ ಆಗುತ್ತಿವೆ.

ಇದು ಕೃತಕ ಬುದ್ಧಿಮತ್ತೆಯ ಕಾಲ. ಎಲ್ಲ ಬಗೆಯ ಕಲ್ಪನೆಗೂ ಇಲ್ಲಿ ರೂಪ ಸಿಗುತ್ತದೆ. ರಣಬೀರ್​ ಕಪೂರ್​ ಅವರು ರಾಮನ ಪಾತ್ರದಲ್ಲಿ ಹೇಗೆ ಕಾಣಬಹುದು ಎಂಬುದನ್ನು ಎಐ ಮೂಲಕ ಕಲ್ಪಿಸಿಕೊಳ್ಳಲಾಗುತ್ತಿದೆ. ಸೋಶಿಯಲ್​ ಮೀಡಿಯಾ ಖಾತೆಯೊಂದರಲ್ಲಿ ಈ ರೀತಿಯ ಒಂದು ಫೋಟೋ ಹಂಚಿಕೊಳ್ಳಲಾಗಿದೆ. ರಣಬೀರ್​ ಕಪೂರ್​ ಅವರು ಬಿಲ್ಲು ಬಾಣ ಹಿಡಿದು ಆಕ್ರಮಣ ಮಾಡುತ್ತಿರುವ ದೃಶ್ಯ ಇದರಲ್ಲಿದೆ. ಇದು ಅಧಿಕೃತ ಪೋಸ್ಟರ್​ ಅಲ್ಲ. ಆದರೂ ಕೂಡ ಇದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

View this post on Instagram

A post shared by Filmy Entity (@filmyentity)

ಮುಂಬೈನಲ್ಲಿ ಈ ಸಿನಿಮಾದ ಶೂಟಿಂಗ್​ ಈಗಾಗಲೇ ಶುರುವಾಗಿದೆ. ಕೈಕೇಯಿ ಪಾತ್ರ ಮಾಡುತ್ತಿರುವ ಲಾರಾ ದತ್ತ ಹಾಗೂ ದಶರಥನ ಪಾತ್ರ ಮಾಡುತ್ತಿರುವ ಅರುಣ್​ ಗೋವಿಲ್​ ಅವರ ಫೋಟೋಗಳು ‘ರಾಮಾಯಣ’ ಸಿನಿಮಾದ ಶೂಟಿಂಗ್​ ಸೆಟ್​ನಿಂದ ಲೀಕ್​ ಆಗಿವೆ. ಇಷ್ಟರಮೇಲೆ ಚಿತ್ರತಂಡದವರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ. ಹಲವು ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ:  ‘ರಾಮಾಯಣ’ ಧಾರಾವಾಹಿ ನಟ ಅರುಣ್​ ಗೋವಿಲ್​ಗೆ ಬಿಜೆಪಿ ಟಿಕೆಟ್​

ಪಾತ್ರವರ್ಗದ ಬಗ್ಗೆ ‘ರಾಮಾಯಣ’ ಚಿತ್ರತಂಡದವರು ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ. ಆದರೂ ಅನೇಕ ಸುದ್ದಿಗಳು ಹರಿದಾಡುತ್ತಿವೆ. ರಾಮನಾಗಿ ರಣಬೀರ್​ ಕಪೂರ್ ನಟಿಸಿದರೆ, ಸೀತೆಯಾಗಿ ಸಾಯಿ ಪಲ್ಲವಿ ಬಣ್ಣ ಹಚ್ಚುತ್ತಾರೆ ಎನ್ನಲಾಗಿದೆ. ರಾವಣನಾಗಿ ಯಶ್ ಅಭಿನಯಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ. ಸನ್ನಿ ಡಿಯೋಲ್​ ಅವರು ಆಂಜನೇಯನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ಮಾಧ್ಯಮಗಳು ಪ್ರಕಟ ಮಾಡಿವೆ. ಪಾತ್ರವರ್ಗ ಬಗ್ಗೆ ಶೀಘ್ರದಲ್ಲೇ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಲಿ ಎಂಬುದು ಸಿನಿಪ್ರಿಯರ ಬಯಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ