ಕೇವಲ 10 ಗಂಟೆಯಲ್ಲಿ ಸಿದ್ಧವಾಯ್ತು ಸಿನಿಮಾ; ಭಾರತ ಚಿತ್ರರಂಗದಲ್ಲೇ ಹೊಸ ದಾಖಲೆ

|

Updated on: Apr 14, 2021 | 6:48 PM

ಬೆಳಗ್ಗೆ 9 ಗಂಟೆಯಿಂದ 11:30ರವರೆಗೆ ಸಿನಿಮಾದ ಕತೆ ನಡೆಯಲಿದೆ. ಅಂದರೆ, ಸಿನಿಮಾದ ಅವಧಿ ಕೇವಲ ಒಂದೂವರೆ ಗಂಟೆ.

ಕೇವಲ 10 ಗಂಟೆಯಲ್ಲಿ ಸಿದ್ಧವಾಯ್ತು ಸಿನಿಮಾ; ಭಾರತ ಚಿತ್ರರಂಗದಲ್ಲೇ ಹೊಸ ದಾಖಲೆ
ಅದ್ಭುತಂ ಸಿನಿಮಾದ ಪೋಸ್ಟರ್
Follow us on

ಒಂದು ಸಿನಿಮಾ ಸಿದ್ಧವಾಗಬೇಕು ಎಂದರೆ ಅದಕ್ಕೆ ನಿರ್ದೇಶಕರು, ಕಲಾವಿದರು, ತಂತ್ರಜ್ಞರು ವರ್ಷಾನುಗಟ್ಟಲೆ ಶ್ರಮವಹಿಸುತ್ತಾರೆ. ಕೆಲ ಸಿನಿಮಾಗಳು ಸಿದ್ಧಗೊಳ್ಳೋಕೆ ಎರಡು ಮೂರು ವರ್ಷ ತೆಗೆದುಕೊಂಡ ಉದಾಹರಣೆ ಕೂಡ ಇದೆ. ಅದೇ ರೀತಿ ಕಡಿಮೆ ಅವಧಿಯಲ್ಲಿ ಸಿನಿಮಾ ರೆಡಿ ಆಗಿದ್ದೂ ಇದೆ. ಈಗ ಮಲಯಾಳಂ ಭಾಷೆಯಲ್ಲಿ ಸಿದ್ಧವಾದ ಹೊಸ ಸಿನಿಮಾ ಕೇವಲ 10 ಗಂಟೆಯಲ್ಲಿ ಶೂಟಿಂಗ್​ ಪೂರ್ಣಗೊಳಿಸಿ, ಎಡಿಟಿಂಗ್​ ಕೂಡ ಆಗಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಯಾವ ಸಿನಿಮಾ ಕೂಡ ಸಿದ್ಧಗೊಂಡಿರಲಿಲ್ಲ.

ಅದ್ಭುತಂ ಅನ್ನೋದು ಸಿನಿಮಾದ ಹೆಸರು. ಟರ್ಮಿನಲ್ ಇಲ್​ನೆಸ್​ನಿಂದ ಬಳಲುತ್ತಿರುವ ವ್ಯಕ್ತಿಯೋರ್ವ ದಯಾಮರಣ ಪಾಲಿಸಿ ಎಂದು ಸುಪ್ರೀಂಕೋರ್ಟ್​ ಮೊರೆ ಹೋಗುತ್ತಾನೆ. ಕೋರ್ಟ್​ ಇದಕ್ಕೆ ಒಪ್ಪಿಗೆ ನೀಡುತ್ತದೆ. ಈ ಬೆಳವಣಿಗೆ ನಂತರ ಏನಾಗುತ್ತದೆ ಎನ್ನುವುದು ಸಿನಿಮಾದ ಕತೆ. ಬೆಳಗ್ಗೆ 9 ಗಂಟೆಯಿಂದ 11:30ರವರೆಗೆ ಸಿನಿಮಾದ ಕತೆ ನಡೆಯಲಿದೆ. ಅಂದರೆ, ಸಿನಿಮಾದ ಅವಧಿ ಕೇವಲ ಒಂದೂವರೆ ಗಂಟೆ. ಸಿನಿಮಾವನ್ನು ಎರಡೂವರೆಗಂಟೆಯಲ್ಲಿ ಶೂಟ್​ ಮಾಡಲಾಗಿದ್ದು,

ಸುರೇಶ್​ ಗೋಪಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್​ ಕಲಾವಿದರು ಕೂಡ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಸಿನಿಮಾ ಇಷ್ಟು ಬೇಗ ಮೂಡಿ ಬರೋಕೆ ಪ್ರತಿ ಕಲಾವಿದರಿಗೂ ಸಾಕಷ್ಟು ಟ್ರೇನಿಂಗ್​ ನೀಡಲಾಗಿತ್ತು. ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಸಿನಿಮಾ ಶೂಟ್​ ಮಾಡಲಾಗಿದೆ.

ಲಿಮ್ಕಾ ದಾಖಲೆ ಪುಸ್ತಕದಲ್ಲಿ ಅದ್ಭುತಂ ಸಿನಿಮಾದ ಹೆಸರು ಸೇರಿದೆ. ಅತಿ ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಸಿದ್ಧವಾದ ಸಿನಿಮಾ ಎನ್ನುವ ದಾಖಲೆಯನ್ನು ಅದ್ಭುತಂ ಪಡೆದುಕೊಂಡಿದೆ. ಶೀಘ್ರವೇ ಈ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬರಲಿದೆ. ಈ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಪ್ರೇಕ್ಷಕರದ್ದು.

ಇದನ್ನೂ ಓದಿ: ಸೋಷಿಯಲ್ ಮೀಡಿಯಾ, ಒಟಿಟಿ, ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ನಿಯಮ: ನೀವು ತಿಳಿಯಬೇಕಾದ 10 ಅಂಶಗಳು

Yuvarathnaa Collections: ಸಾಲುಸಾಲು ತೊಂದರೆ ಎದುರಿಸಿದರೂ ಯುವರತ್ನಗೆ ಒಳ್ಳೆಯ ಕಲೆಕ್ಷನ್; ಸಿನಿಮಾದ ಒಟ್ಟು ಗಳಿಕೆ ಎಷ್ಟು?