Yuvarathnaa Collections: ಸಾಲುಸಾಲು ತೊಂದರೆ ಎದುರಿಸಿದರೂ ಯುವರತ್ನಗೆ ಒಳ್ಳೆಯ ಕಲೆಕ್ಷನ್; ಸಿನಿಮಾದ ಒಟ್ಟು ಗಳಿಕೆ ಎಷ್ಟು?
ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ಪುನೀತ್ ನಟನೆಯ 'ಯುವರತ್ನ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್ನಲ್ಲಿ ಯುವರತ್ನ ಮೊದಲ ದಿನ 7-10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ.

ರಾಜ್ಕುಮಾರ್ ನಟನೆಯ ಯುವರತ್ನ ಸಿನಿಮಾ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಕೆ ಮಾಡಿಕೊಂಡಿತ್ತು. ಆದರೆ, ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಆಸನ ಮಿತಿ ಹೇರಿದ್ದರಿಂದ ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ ಚಿತ್ರ ಒಟಿಟಿ ಹಾದಿ ಹಿಡಿದಿತ್ತು. ಹಾಗಾದರೆ, ಈ ಸಿನಿಮಾ ಒಂದು ವಾರದಲ್ಲಿ ಒಟ್ಟು ಗಳಿಕೆ ಮಾಡಿದ್ದೆಷ್ಟು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ಪುನೀತ್ ನಟನೆಯ ‘ಯುವರತ್ನ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ದಿನ ಮುಂಜಾನೆ 6 ಗಂಟೆಯಿಂದಲೇ ಯುವರತ್ನ ಪ್ರದರ್ಶನ ಕಂಡಿತ್ತು. ಪರಿಣಾಮ ಬಾಕ್ಸ್ ಆಫೀಸ್ನಲ್ಲಿ ಯುವರತ್ನ ಮೊದಲ ದಿನ 7-10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ.
ನಂತರ ಒಂದು ವಾರಗಳ ಕಾಲ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಕೊರೊನಾ ಎರಡನೆ ಅಲೆ, ಆಸನ ಮಿತಿ ಚಾಲೆಂಜ್ಗಳನ್ನು ಎದುರಿಸಿ ಯುವತ್ನ ಸಿನಿಮಾ 30 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ರಿಲೀಸ್ ಆದ ಪ್ರಮುಖ ಮೂರನೇ ಚಿತ್ರ ಇದಾಗಿದೆ. ಧ್ರುವ ಸರ್ಜಾ ನಟನೆಯ ಪೊಗರು ಚಿತ್ರ ಬಾಕ್ಸ್ ಆಫೀಸ್ನಲ್ಲಿ 45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು, ಭಾರೀ ಜನಮನ್ನಣೆ ಪಡೆದಿದ್ದ ರಾಬರ್ಟ್ ಸಿನಿಮಾ 105 ಕೋಟಿ ರೂಪಾಯಿ ಬಾಚಿಕೊಂಡಿದೆ.
ಅಮೆಜಾನ್ ಪ್ರೈಮ್ಗೆ ಒಳ್ಳೆಯ ಬೆಲೆಗೆ ಯುವರತ್ನ ಸೇಲ್ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ. ಈ ಮೊದಲು ಕೆಜಿಎಫ್ ಚಾಪ್ಟರ್ 1 ಸಿನಿಮಾ 18 ಕೋಟಿಗೆ ಮಾರಾಟವಾಗಿತ್ತು. ಈ ದಾಖಲೆಯನ್ನು ಯುವರತ್ನ ಮುರಿದು ಹಾಕಿದೆ. ಬರೋಬ್ಬರಿ 20 ಕೋಟಿಗೆ ಯುವರತ್ನ ಸಿನಿಮಾ ಹಕ್ಕನ್ನು ಪ್ರೈಮ್ ಪಡೆದುಕೊಂಡಿದೆ ಎನ್ನಲಾಗಿದೆ.
ಪುನೀತ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ರಾಮ್ ಕಾಂಬಿನೇಷನ್ನಲ್ಲಿ ಮೂಡಿಬಂದ ರಾಜಕುಮಾರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಾದ ನಾಲ್ಕು ವರ್ಷಗಳ ನಂತರದಲ್ಲಿ ಇದೇ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ ಚಿತ್ರ ಯುವರತ್ನ. ಧನಂಜಯ್, ಪ್ರಕಾಶ್ ರಾಜ್ ಮೊದಲಾದವರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Yuvarathnaa Collection: ಯುವರತ್ನ ಬಾಕ್ಸ್ ಆಫೀಸ್ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ