ರಣಬೀರ್ ಕಪೂರ್ ನಟನೆಯ ‘ಯೇ ಜವಾನಿ ಹೇ ದೀವಾನಿ’ ಸಿನಿಮಾ ತೆರೆಕಂಡು 8 ವರ್ಷಗಳು ಕಳೆದಿವೆ. 2013ರಲ್ಲಿ ತೆರೆಗೆ ಬಂದ ಈ ಚಿತ್ರಕ್ಕೆ ಅಯಾನ್ ಮುಖರ್ಜಿ ನಿರ್ದೇಶನ ಇತ್ತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇಂದಿಗೂ ಸಿನಿಮಾವನ್ನು ಕಣ್ತುಂಬಿಕೊಂಡು ಆನಂದಿಸುವವರ ಸಂಖ್ಯೆ ದೊಡ್ಡದಿದೆ. ಈ ಚಿತ್ರ ತೆರೆಕಂಡ ನಂತರದಲ್ಲಿ ರಣಬೀರ್ ಮನಸ್ಸು ಬದಲಾಯಿತಂತೆ. ಈ ಬಗ್ಗೆ ರಣಬೀರ್ ಹೇಳಿಕೊಂಡಿದ್ದಾರೆ.
‘ಯೇ ಜವಾನಿ ಹೇ ದೀವಾನಿ’ ಸಿನಿಮಾದಲ್ಲಿ ರಣಬೀರ್, ದೀಪಿಕಾ, ಕಲ್ಕಿ ಕೊಚ್ಲಿನ್, ಆದಿತ್ಯ ರಾಯ್ ಕಪೂರ್ ಮುಖ್ಯಭೂಮಿಕೆ ನಿರ್ವಹಿಸಿದ್ದರು. ರಣಬೀರ್ ಬನ್ನಿ ಆಗಿ ಕಾಣಿಸಿಕೊಂಡಿದ್ದರು. ಮದುವೆ, ಮಕ್ಕಳು, ಕೆಲಸ ಎನ್ನುವ ಜಂಜಾಟವಿಲ್ಲದೆ ಬದುಕುವ ವ್ಯಕ್ತಿ ಬನ್ನಿ. ಆತ ಜೀವನದಲ್ಲಿ ಹೊಸತನ್ನು ಹುಡುಕುವ ವ್ಯಕ್ತಿ. ಈ ಪಾತ್ರ ಅನೇಕರ ಮೇಲೆ ಪ್ರಭಾವ ಬೀರಿತ್ತು.
ಈ ಸಿನಿಮಾ ರಿಲೀಸ್ ಆಗುವಾಗ ರಣಬೀರ್ ವಯಸ್ಸು 30. ಆಗಲೇ ಅವರು ಮದುವೆ ಆಗಿ, ಮಕ್ಕಳನ್ನು ಮಾಡಿಕೊಂಡು ಸಿಂಪಲ್ ಆಗಿ ಜೀವನ ನಡೆಸುವ ಆಲೋಚನೆಯಲ್ಲಿದ್ದರು. ಆಗ ಅವರಿಗೆ ಸಿಕ್ಕಿದ್ದು ನಿರ್ದೇಶಕ ಅಯಾನ್. ಅವರು,ಮದುವೆ ಮಕ್ಕಳನ್ನು ಇಷ್ಟು ಬೇಗ ಮಾಡಿಕೊಳ್ಳದೆ, ಜಗತ್ತನ್ನು ನೋಡಬೇಕೆನ್ನುವ ಕಿವಿಮಾತು ಹೇಳಿದ್ದರು. ಇದನ್ನು ಗಂಭೀರವಾಗಿ ಸ್ವೀಕರಿಸಿದ ರಣಬೀರ್ ಹಾಗೆಯೇ ಮಾಡಿದರು. ಹೀಗಾಗಿ, ಆ ಸಂದರ್ಭದಲ್ಲಿ ಅವರು ಮದುವೆಯಿಂದ ಸ್ವಲ್ಪ ವರ್ಷ ದೂರ ಇರುವ ಆಲೋಚನೆಗೆ ಬಂದರು.
ಆಲಿಯಾ ಭಟ್-ರಣಬೀರ್ ಕಳೆದ ಮೂರು ವರ್ಷಗಳಿಂದ ರಿಲೇಶನ್ ಶಿಪ್ನಲ್ಲಿದ್ದಾರೆ. ಇತ್ತೀಚೆಗೆ ಇಬ್ಬರೂ ಮಾಲ್ಡೀವ್ಸ್ಗೆ ತೆರಳಿ ಟ್ರೋಲ್ ಆಗಿದ್ದರು. ‘ಬ್ರಹ್ಮಾಸ್ತ್ರ’ ಸಿನಿಮಾ ಮೂಲಕ ಅಯಾನ್ ಹಾಗೂ ರಣಬೀರ್ ಮತ್ತೆ ಒಂದಾಗಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ಹಿಂದೆ ಬಿದ್ದಿವೆ. ಇನ್ನು, ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಪ್ರೇಕ್ಷಕರು ಕಾತುರರಾಗಿದ್ದಾರೆ. ರಣಬೀರ್ ಹಾಗೂ ಆಲಿಯಾ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ ಇದಾಗಿದೆ. 2022ರ ವೇಳೆಗೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಆಲಿಯಾ ಭಟ್ ವಿಚಾರಕ್ಕೆ ದೀಪಿಕಾ ಪಡುಕೋಣೆ- ಸಂಜಯ್ ಲೀಲಾ ಬನ್ಸಾಲಿ ನಡುವೆ ಕೋಲ್ಡ್ ವಾರ್!
Published On - 5:51 pm, Tue, 1 June 21