ಬ್ರಿಟಿಷ್ ಆಸ್ಕರ್ ಎಂದು ಕರೆಸಿಕೊಳ್ಳುವ ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಆರ್ಟ್ (BAFTA) ಅಥವಾ ಬಾಫ್ಟಾ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ಒಟಿಟಿ ಸಿನಿಮಾ ದಿ ವೈಟ್ ಟೈಗರ್ಗೆ ನಿರಾಸೆ ಆಗಿದೆ. ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿ ಅಗಲಿರುವ ರಿಷಿ ಕಪೂರ್ ಹಾಗೂ ಇರ್ಫಾನ್ ಖಾನ್ಗೆ ಗೌರವ ಸೂಚಿಸಿರುವುದು ವಿಶೇಷ.
ಭಾನುವಾರ (ಮಾರ್ಚ್ 12) ಲಂಡನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಫ್ಟಾ 2021 ಪ್ರಶಸ್ತಿ ನೀಡಲಾಗಿದೆ. ಪ್ರಿಯಾಂಕಾ ಚೋಪ್ರಾ, ರಾಜ್‌ಕುಮಾರ್ ರಾವ್, ಆದರ್ಶ್ ಗೌರವ್ ನಟಿಸಿದ್ದ ‘ದಿ ವೈಟ್ ಟೈಗರ್’ ಸಿನಿಮಾ ಬಾಫ್ಟಾ ಪ್ರಶಸ್ತಿಯ ಕೆಲವು ನಾಮನಿರ್ದೇಶನಗೊಂಡಿತ್ತು. ಈ ಸಿನಿಮಾದ ನಟನೆಗೆ ಆದರ್ಶ್ ಗೌರವ್ ಅವರು ಅತ್ಯುತ್ತಮ ನಟ ವಿಭಾಗದ ಅಂತಿಮ ಸುತ್ತಿಗೆ ಆಯ್ಕೆ ಆಗಿದ್ದರು . ಆದರೆ, ಈ ಪ್ರಶಸ್ತಿ ಆಂಥೊನಿ ಹಾಪ್ಕಿನ್ಸ್ (ದಿ ಫಾದರ್) ಪಾಲಾಗಿದೆ.
ಅತ್ಯುತ್ತಮ ಸ್ಕ್ರೀನ್ ಪ್ಲೇ ಅಳವಡಿಕೆ ಪ್ರಶಸ್ತಿ ವಿಭಾಗದಲ್ಲೂ ವೈಟ್ ಟೈಗರ್ ಅಂತಿಮ ಸುತ್ತಿಗೆ ಹೋಗಿತ್ತು. ಅಂತಿಮವಾಗಿ ಈ ಪ್ರಶಸ್ತಿ ದಿ ಫಾದರ್ಗೆ ಸಂದಿದೆ. ಎರಡೂ ವಿಭಾಗದಲ್ಲಿ ಈ ಪ್ರಶಸ್ತಿ ಸಿಕ್ಕಿದೆ. ಇನ್ನು, ರಿಷಿ ಕಪೂರ್ ಹಾಗೂ ಇರ್ಫಾನ್ ಖಾನ್ ಅವರನ್ನು ಸಮಾರಂಭದಲ್ಲಿ ನೆನಪಿಸಿಕೊಳ್ಳಲಾಗಿದೆ, ಈ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ.
ಪ್ರಶಸ್ತಿ ಪಟ್ಟಿ:
ಅತ್ಯುತ್ತಮ ಸಿನಿಮಾ: ನೋಮಡ್‌ಲ್ಯಾಂಡ್
ಅತ್ಯುತ್ತಮ ನಟ: ಆ್ಯಂಥೋನಿ ಹಾಪ್ಕಿನ್ಸ್ (ದಿ ಪಾಧರ್)
ಅತ್ಯುತ್ತಮ ಬ್ರಿಟಿಷ್ ಸಿನಿಮಾ: (ಪ್ರಾಮಿಸಿಂಗ್ ಯಂಗ್ ವುಮನ್)
ಅತ್ಯುತ್ತಮ ನಟಿ: ಫ್ರಾನ್ಸಿಸ್ ಮೆಕ್‌ಡೋರ್ಮಂಡ್ (ನೋಮಡ್‌ಲ್ಯಾಂಡ್)
ಅತ್ಯುತ್ತಮ ನಿರ್ದೇಶಕ: ಚ್ಲೋ ಜಾವ್ (ನೋಮಡ್‌ಲ್ಯಾಂಡ್)
ಇದನ್ನೂ ಓದಿ: ಆಸ್ಕರ್ ರೇಸ್ನಲ್ಲಿ ಪ್ರಿಯಾಂಕಾ ಚೋಪ್ರಾ ಸಿನಿಮಾ! ಹಾಲಿವುಡ್ ಮಂದಿ ಎದುರು ‘ದಿ ವೈಟ್ ಟೈಗರ್’ ಪೈಪೋಟಿ
Published On - 9:36 pm, Mon, 12 April 21