‘ರೀ ಅದು ಎಣ್ಣೆ ಅಲ್ಲ, ಗ್ರಾಫಿಕ್ಸ್ ಬಾಟಲಿ’; ಬಾಲಯ್ಯ ವಿವಾದ ಮುಚ್ಚಿಹಾಕಲು ನಿರ್ಮಾಪಕ ಕೊಟ್ಟ ಉತ್ತರವಿದು

|

Updated on: May 31, 2024 | 7:07 AM

‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಘಟನೆ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಅವರು ಸಿಟ್ಟಲ್ಲಿ ಅಂಜಲಿ ಅವರನ್ನು ತಳ್ಳಿದ್ದರು. ಅಂಜಲಿ ಇದನ್ನು ಹಾಸ್ಯ ರೂಪದಲ್ಲೇ ಸ್ವೀಕರಿಸಿದ್ದಾರೆ. ಆದರೆ, ನೆಟ್ಟಿಗರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

‘ರೀ ಅದು ಎಣ್ಣೆ ಅಲ್ಲ, ಗ್ರಾಫಿಕ್ಸ್ ಬಾಟಲಿ’; ಬಾಲಯ್ಯ ವಿವಾದ ಮುಚ್ಚಿಹಾಕಲು ನಿರ್ಮಾಪಕ ಕೊಟ್ಟ ಉತ್ತರವಿದು
ಬಾಲಕೃಷ್ಣ
Follow us on

ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್​ನಲ್ಲಿ ಬಾಲಯ್ಯ ಅವರು ನಟಿ ಅಂಜಲಿ ಅವರನ್ನು ತಳ್ಳಿದ್ದರು. ಅದಕ್ಕೂ ಮೊದಲು ಬಾಲಯ್ಯ ಕಾಲ ಕೆಳಗೆ ಆಲ್ಕೋಹಾಲ್​ ಇದೆ ಎನ್ನಲಾದ ಬಾಟಲಿ ಒಂದು ಕಾಣಿಸಿತ್ತು. ಬಾಲಯ್ಯ ಅವರು ಕುಡಿದಿದ್ದರಿಂದಲೇ ಈ ರೀತಿ ಆಗಿದೆ ಎಂದು ಅನೇಕರು ಮಾತನಾಡಿಕೊಂಡಿದ್ದರು. ಈಗ ‘ಗ್ಯಾಂಗ್ ಆಫ್ ಗೋದಾವರಿ’ ಸಿನಿಮಾದ ನಿರ್ಮಾಪಕರು ಈ ವಿವಾದದಿಂದ ತಪ್ಪಿಸಿಕೊಳ್ಳಲು ಹಾರಿಕೆ ಉತ್ತರ ನೀಡಿದ್ದಾರೆ. ‘ಅದು ಗ್ರಾಫಿಕ್ಸ್ ಬಾಟಲಿ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಘಟನೆ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಅವರು ಸಿಟ್ಟಲ್ಲಿ ಅಂಜಲಿ ಅವರನ್ನು ತಳ್ಳಿದ್ದರು. ಅಂಜಲಿ ಇದನ್ನು ಹಾಸ್ಯ ರೂಪದಲ್ಲೇ ಸ್ವೀಕರಿಸಿದ್ದಾರೆ. ಆದರೆ, ನೆಟ್ಟಿಗರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬಾಲಯ್ಯ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ‘ಕುಡಿದ ಏಟಲ್ಲಿ ಈ ರೀತಿ ಮಾಡಿದರು’ ಎನ್ನುವ ಆರೋಪ ಬಂತು. ಈ ಘಟನೆಯಿಂದ ಎಚ್ಚೆತ್ತಿರುವ ಸಿನಿಮಾದ ನಿರ್ಮಾಪಕ ನಾಗ ವಂಶಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ವೇದಿಕೆ ಮೇಲೇ ನಟಿಯನ್ನು ತಳ್ಳಿದ ಬಾಲಯ್ಯ; ಶಾಕಿಂಗ್ ವಿಡಿಯೋ ವೈರಲ್

‘ಆ ಬಾಟಲಿಯನ್ನು ಗ್ರಾಫಿಕ್ಸ್ ಮೂಲಕ ಸೇರಿಸಲಾಗಿದೆ. ನಿಜವಾಗಿ ಅಲ್ಲಿ ಯಾವುದೇ ಬಾಟಲಿ ಇರಲಿಲ್ಲ’ ಎಂದಿದ್ದಾರೆ ನಾಗ ವಂಶಿ. ಈ ಮಾತನ್ನು ಕೇಳಿ ಫ್ಯಾನ್ಸ್ ನಕ್ಕು ನಕ್ಕು ಸುಸ್ತಾಗಿದ್ದಾರೆ. ‘ಸುಳ್ಳು ಹೇಳಿದರೂ ಎಲ್ಲರೂ ನಂಬುವಂತ ಸುಳ್ಳನ್ನು ಹೇಳಬೇಕು’ ಎನ್ನುವ ಕಿವಿಮಾತನ್ನು ಕೆಲವರು ಹೇಳಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಶೋಭಿತಾ-ನಾಗ ಚೈತನ್ಯ ಪ್ರೀತಿ ವಿಚಾರಕ್ಕೆ ಇಂದೇ ಸಿಗಲಿದೆ ಸ್ಪಷ್ಟನೆ

#sobhitadhulipal #Nagachaitanya

ಶೋಭಿತಾ-ನಾಗ ಚೈತನ್ಯ ಪ್ರೀತಿ ವಿಚಾರಕ್ಕೆ ಇಂದೇ ಸಿಗಲಿದೆ ಸ್ಪಷ್ಟನೆ

ಕೆಲವರು ಬಾಲಯ್ಯ ಅವರು ನಡೆದುಕೊಂಡ ರೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಬಾಲಯ್ಯ ಹಾಗೂ ಅಂಜಲಿ ಈ ಮೊದಲು ಒಟ್ಟಾಗಿ ನಟಿಸಿದ್ದಾರೆ. ಅವರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಈ ಕಾರಣಕ್ಕೆ ಅವರು ತಳ್ಳಿದ್ದಾರೆ. ಗಂಭೀರವಾಗಿ ತಳ್ಳಿದ್ದರೆ ಅಂಜಲಿ ಏಕೆ ನಗುತ್ತಿದ್ದರು’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅಂದಹಾಗೆ, ಬಾಲಯ್ಯ ಅವರ ಕಾಲ ಅಡಿಯಲ್ಲಿ ಎರಡು ನೀರಿನ ಬಾಟಲಿ ಇತ್ತು. ಒಂದು ಬಾಟಲಿಯಲ್ಲಿ ನೀರು ಹಾಗೂ ಮತ್ತೊಂದು ಬಾಟಲಿಯಲ್ಲಿ ಮದ್ಯದ ರೀತಿಯ ದ್ರವ ಇತ್ತು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:02 am, Fri, 31 May 24