ಚುನಾವಣೆ ಮುಗಿದರಾಗಿಲ್ಲ, ಫಲಿತಾಂಶವೂ ಬರಬೇಕು; ಸಿನಿಮಾದಿಂದ ದೂರವೇ ಉಳಿದ ಬಾಲಯ್ಯ

|

Updated on: May 25, 2024 | 11:55 AM

ಕಾಜಲ್ ಅಗರ್​ವಾಲ್ ಅವರು ‘ಸತ್ಯಭಾಮ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಲಾಂಚ್​ಗೆ ಬಾಲಯ್ಯ ಅವರು ಅತಿಥಿಯಾಗಿದ್ದಾರೆ. ಈ ವೇಳೆ ಅವರು ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನಾನು 50 ದಿನಗಳಿಂದ ಕ್ಯಾಮೆರಾ ಫೇಸ್ ಮಾಡಿಯೇ ಇಲ್ಲ’ ಎಂದು ಹೇಳಿದ್ದಾರೆ.

ಚುನಾವಣೆ ಮುಗಿದರಾಗಿಲ್ಲ, ಫಲಿತಾಂಶವೂ ಬರಬೇಕು; ಸಿನಿಮಾದಿಂದ ದೂರವೇ ಉಳಿದ ಬಾಲಯ್ಯ
ಬಾಲಯ್ಯ
Follow us on

ಕೆಲವು ದಿನಗಳ ಹಿಂದೆ ಆಂಧ್ರ ಪ್ರದೇಶದಲ್ಲಿ ಚುನಾವಣೆ ನಡೆದಿದೆ. ಹಾಲಿ ಶಾಸಕ, ನಟ ನಂದಮೂರಿ ಬಾಲಕೃಷ್ಣ ಅವರು ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಹಿಂದೂಪುರದಿಂದ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಈಗಾಗಲೇ ಮತದಾನ ಮುಗಿದಿದ್ದು, ಬಾಲಯ್ಯ (Balayya) ಸಿನಿಮಾ ಕೆಲಸಕ್ಕೆ ಮರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಹಾಗಾಗುತ್ತಿಲ್ಲ. ಅವರು ಎಲೆಕ್ಷನ್​ಗೆ ಮರಳೋ ಯಾವುದೇ ಆಲೋಚನೆ ಇಲ್ಲ. ಈ ಬಗ್ಗೆ ಅವರು ನೇರ ಮಾತುಗಳಲ್ಲಿ ಹೇಳಿದ್ದಾರೆ.

ಕಾಜಲ್ ಅಗರ್​ವಾಲ್ ಅವರು ‘ಸತ್ಯಭಾಮ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಲಾಂಚ್​ಗೆ ಬಾಲಯ್ಯ ಅವರು ಅತಿಥಿಯಾಗಿದ್ದಾರೆ. ಈ ವೇಳೆ ಅವರು ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನಾನು 50 ದಿನಗಳಿಂದ ಕ್ಯಾಮೆರಾ ಫೇಸ್ ಮಾಡಿಯೇ ಇಲ್ಲ’ ಎಂದು ಹೇಳಿದ್ದಾರೆ. ಇದರ ಜೊತೆಗೆ ‘NBK109’ ಸಿನಿಮಾದ ಕೆಲಸಗಳು ಆರಂಭ ಆಗಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ನಡೆದ ಬಳಿಕ ಎಲೆಕ್ಷನ್​ ರಿಸಲ್ಟ್​ಗೆ ಸ್ವಲ್ಪ ದಿನಗಳು ಬಾಕಿ ಇದ್ದವು. ಈ ಸಂದರ್ಭದಲ್ಲಿ ಬಾಲಯ್ಯ ಅವರು ಶೂಟಿಂಗ್​ನಲ್ಲಿ ಬ್ಯುಸಿ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದು ನಿಜವಾಗಿಲ್ಲ. ಚುನಾವಣಾ ಫಲಿತಾಂಶ ಬಂದ ಬಳಿಕವೇ ಅವರು ಕ್ಯಾಮೆರಾ ಎದುರಿಸೋ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಡ್ಯೂಪ್​ ಇಲ್ಲದೇ ನಾನು ಗಾಜು ಒಡೆದಿದ್ದೆ’: ‘ಲೆಜೆಂಡ್​’ ಬಗ್ಗೆ ಬಾಲಯ್ಯ ಮಾತು

ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಒಟ್ಟಾಗಿ ಆಂಧ್ರ ಪ್ರದೇಶದಲ್ಲಿ ಸರ್ಕಾರ ರಚಿಸಲಿದ್ದಾರೆ ಎನ್ನುವ ಮಾತಿದೆ. ಒಂದೊಮ್ಮೆ ಇದು ನಿಜವಾಗಿ, ಬಾಲಯ್ಯ ಚುನಾವಣೆಯಲ್ಲಿ ಗೆದ್ದರೆ ಅವರಿಗೆ ಸಚಿವ ಸ್ಥಾನ ಸಿಗಲಿದೆ. ಆಗ ಅವರು ಸಿನಿಮಾ ರಂಗದಲ್ಲಿ ಎಷ್ಟು ಆ್ಯಕ್ಟೀವ್ ಆಗಿರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.  ಬಾಲಯ್ಯ ಅವರು ಆ್ಯಕ್ಷನ್ ಸಿನಿಮಾಗಳ ಮೂಲಕವೇ ಫೇಮಸ್ ಆದವರು. ಅವರ ಮುಂದಿನ ಸಿನಿಮಾದಲ್ಲೂ ಭರ್ಜರಿ ಆ್ಯಕ್ಷನ್ ಇರಲಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.