‘ಎಂಜಾಯ್ ಮಾಡಿದೆವು’; ಹನಿಮೂನ್ ಫೋಟೋ ಹಂಚಿಕೊಂಡ ರಾಕುಲ್
ರಾಕುಲ್ ಪ್ರೀತ್ ಸಿಂಗ್ ಫೋಟೋಗೆ ಸುಂದರ ಕ್ಯಾಪ್ಶನ್ ನೀಡಿದ್ದಾರೆ. ‘ಸೂರ್ಯಾಸ್ತ ವೇಳೆ ಈಜು, ಶಾರ್ಕ್ ಮೀನನ್ನು ನೋಡುವುದು, ಫಿಜಾನ್ ಸಂಸ್ಕೃತಿಯನ್ನು ಎಂಜಾಯ್ ಮಾಡೋದು. ನಾವು ಎಲ್ಲವನ್ನೂ ಮಾಡಿದೆವು ಎಂದಿದ್ದಾರೆ ರಾಕುಲ್.
Updated on: May 25, 2024 | 11:01 AM

ರಾಕುಲ್ ಪ್ರೀತ್ ಸಿಂಗ್ ಅವರು ಇತ್ತೀಚೆಗೆ ವಿವಾಹ ಆಗಿದ್ದಾರೆ. ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಅವರ ವಿವಾಹ ನೆರವೇರಿದೆ. ಈಗ ಅವರು ಹನಿಮೂನ್ಗೆ ತೆರಳಿದ್ದು, ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಾಕುಲ್ ಪ್ರೀತ್ ಸಿಂಗ್ ಫೋಟೋಗೆ ಸುಂದರ ಕ್ಯಾಪ್ಶನ್ ನೀಡಿದ್ದಾರೆ. ‘ಸೂರ್ಯಾಸ್ತ ವೇಳೆ ಈಜು, ಶಾರ್ಕ್ ಮೀನನ್ನು ನೋಡುವುದು, ಫಿಜಾನ್ ಸಂಸ್ಕೃತಿಯನ್ನು ಎಂಜಾಯ್ ಮಾಡೋದು. ನಾವು ಎಲ್ಲವನ್ನೂ ಮಾಡಿದೆವು ಎಂದಿದ್ದಾರೆ ರಾಕುಲ್.

ರಾಕುಲ್ ಹಾಗೂ ಜಾಕಿ ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರು. ಈಗ ಇವರು ಮದುವೆ ಆಗಿದ್ದಾರೆ. ಅವರು ಸುಖವಾಗಿ ಸಂಸಾರ ನಡೆಸಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ರಾಕುಲ್ ಅವರು ಬಾಲಿವುಡ್ ನಟಿ. ಅವರು ಚಿತ್ರರಂಗ ಆರಂಭಿಸಿದ್ದು ಕನ್ನಡದಿಂದ ‘ಗಿಲ್ಲಿ’ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು ಅನ್ನೋದು ವಿಶೇಷ.

ರಾಕುಲ್ ಆಗಾಗ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಇರುತ್ತಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಕೋಟ್ಯಂತರ ಮಂದಿ ಫಾಲೋವರ್ಸ್ ಇದ್ದಾರೆ.

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



