ಶಕ್ತಿಮಾನ್ ಕತೆಯನ್ನೇ ಅಲ್ಲು ಅರ್ಜುನ್​ಗಾಗಿ ಹೆಣೆಯುತ್ತಿರುವ ಬಾಸಿಲ್ ಜೋಸೆಫ್?

Allu Arjun movie: ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ ಅಲ್ಲು ಅರ್ಜುನ್. ಅದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಮಲಯಾಳಂ ಸ್ಟಾರ್ ನಟ ಬಾಸಿಲ್ ಜೋಸೆಫ್ ನಿರ್ದೇಶನದ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಸಂದೀಪ್ ರೆಡ್ಡಿ ವಂಗಾ ಸಿನಿಮಾ ಅದರ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ, ಅದಾದ ಬಳಿಕ ಮತ್ತೆ ಸುಕುಮಾರ್. ಆದರೆ ಬಾಸಿಲ್ ಜೊತೆ ಅಲ್ಲು ಅರ್ಜುನ್ ನಟಿಸುತ್ತಿರುವ ಸಿನಿಮಾದ ಕತೆ ಏನು?

ಶಕ್ತಿಮಾನ್ ಕತೆಯನ್ನೇ ಅಲ್ಲು ಅರ್ಜುನ್​ಗಾಗಿ ಹೆಣೆಯುತ್ತಿರುವ ಬಾಸಿಲ್ ಜೋಸೆಫ್?
Allu Arjun Basil

Updated on: May 23, 2026 | 10:14 PM

‘ಪುಷ್ಪ 2’ (Pushpa 2) ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ಗೆ ಒಂದರ ಹಿಂದೊಂದು ದೊಡ್ಡ ದೊಡ್ಡ ನಿರ್ದೇಶಕರುಗಳ ಆಫರ್ ಬಂದಿದ್ದು, ಈಗಾಗಲೇ ಕೆಲವು ನಿರ್ದೇಶಕರುಗಳೊಟ್ಟಿಗೆ ಸಿನಿಮಾ ಒಪ್ಪಿಕೊಂಡಿದ್ದಾರೆ ಸಹ. ಇದೀಗ ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಮಲಯಾಳಂ ಸ್ಟಾರ್ ನಟ ಬಾಸಿಲ್ ಜೋಸೆಫ್ ನಿರ್ದೇಶನದ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಸಂದೀಪ್ ರೆಡ್ಡಿ ವಂಗಾ ಸಿನಿಮಾ ಅದರ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ, ಅದಾದ ಬಳಿಕ ಮತ್ತೆ ಸುಕುಮಾರ್. ಒಟ್ಟಾರೆ ಮುಂದಿನ ಕೆಲ ವರ್ಷಗಳ ಕಾಲ ಅಲ್ಲು ಅರ್ಜುನ್ ಬ್ಯುಸಿ.

ಆದರೆ ಇಷ್ಟು ಸಿನಿಮಾಗಳಲ್ಲಿ ಮಲಯಾಳಂ ನಟ ಬಾಸಿಲ್ ನಿರ್ದೇಶನ ಮಾಡಲಿರುವ ಸಿನಿಮಾ ಸಖತ್ ಕುತೂಹಲ ಮೂಡಿಸಿತ್ತು. ಏಕೆಂದರೆ ಬಾಸಿಲ್ ಅವರು ಅಲ್ಲು ಅರ್ಜುನ್​​ಗಾಗಿ ಸೂಪರ್ ಹೀರೋ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಬಾಸಿಲ್ ಅವರು ‘ಮಿನ್ನಲ್ ಮುರಲಿ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಅದು ಭಾರತದ ಅತ್ಯುತ್ತಮ ಸೂಪರ್ ಹೀರೋ ಸಿನಿಮಾಗಳಲ್ಲಿ ಒಂದಾಗಿದೆ. ಈಗ ಅದೇ ಬಾಸಿಲ್, ಅಲ್ಲು ಅರ್ಜುನ್​​ಗೆ ಸೂಪರ್ ಹೀರೋ ಸಿನಿಮಾ ನಿರ್ದೇಶಿಸಲು ಮುಂದಾಗಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ: 35 ಲಕ್ಷ ಮೌಲ್ಯದ ಟ್ಯಾಂಕರ್ ಜಪ್ತಿ, ಓರ್ವನ ಬಂಧನ!

ಆದರೆ ಬಾಸಿಲ್ ಜೋಸೆಫ್, ಅಲ್ಲು ಅರ್ಜುನ್ ಅವರಿಗೆ ಶಕ್ತಿಮಾನ್ ಕತೆಯನ್ನು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದಕ್ಕೆ ಕಾರಣವೆಂದರೆ ಬಾಸಿಲ್ ಜೋಸೆಫ್, ಬಾಲಿವುಡ್ ನಟ ರಣ್ವೀರ್ ಸಿಂಗ್ ಜೊತೆಗೆ ‘ಶಕ್ತಿಮಾನ್’ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಆ ಸಿನಿಮಾ ರದ್ದಾದ ಬಳಿಕ ಬಾಸಿಲ್ ಜೋಸೆಫ್, ಅಲ್ಲು ಅರ್ಜುನ್ ಜೊತೆ ಸಿನಿಮಾ ಘೋಷಿಸಿದರು. ಅದೂ ಸೂಪರ್ ಹೀರೋ ಸಿನಿಮಾ ಹಾಗಾಗಿ ಅದು ಶಕ್ತಿಮಾನ್ ಕತೆಯೇ ಆಗಿರಬೇಕು ಎಂಬ ಅನುಮಾನ ಅಭಿಮಾನಿಗಳಿಗೆ ಇತ್ತು. ಆದರೆ ಅದು ಸುಳ್ಳಾಗಿದೆ. ಬಾಸಿಲ್ ಅವರು, ಅಲ್ಲು ಅರ್ಜುನ್​​ಗಾಗಿ ಶಕ್ತಿಮಾನ್ ಕತೆಯನ್ನು ಸಿನಿಮಾ ಮಾಡುತ್ತಿಲ್ಲವಂತೆ.

ಬಾಸಿಲ್ ಅವರು ಅಲ್ಲು ಅರ್ಜುನ್​​ಗೆ ಯಾವ ರೀತಿಯ ಕತೆಯನ್ನು ಸಿನಿಮಾ ಮಾಡಲಿದ್ದಾರೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಆದರೆ ಅದೊಂದು ಸೂಪರ್ ಹೀರೋ ಮಾದರಿಯ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ‘ಶಕ್ತಿಮಾನ್’ಗಾಗಿ ಮಾಡಿದ್ದ ಕತೆಯನ್ನೇ ಬೇರೊಬ್ಬ ಸೂಪರ್ ಹೀರೋ ರೀತಿ ಬಾಸಿಲ್ ಪ್ರೆಸೆಂಟ್ ಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ‘ಶಕ್ತಿಮಾನ್’ ಪಾತ್ರದ ಮೇಲೆ ಈಗಾಗಲೇ ಬೇರೊಬ್ಬ ನಿರ್ಮಾಪಕರ ಹಕ್ಕಿದೆ. ಎಲ್ಲದಕ್ಕೂ ಸಮಯ ಉತ್ತರ ನೀಡಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us