AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಮನ ಸೆಳೆಯುತ್ತಿದೆ ‘ಇರುಮುಡಿ’ ಸಿನಿಮಾ, ‘ಟಾಕ್ಸಿಕ್’ಗೆ ಠಕ್ಕರ್?

Ravi Teja movie: ರವಿತೇಜ, ತೆಲುಗಿನಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವ ಸ್ಟಾರ್ ನಟ. ಮಾಸ್ ಮಹಾರಾಜ ಎಂದೇ ಕರೆಸಿಕೊಳ್ಳುವ ರವಿತೇಜ ಇತ್ತೀಚೆಗೆ ಯಾಕೋ ತುಸು ಮಂಕಾಗಿದ್ದಾರೆ. ವಿಶೇಷವಾಗಿ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಕನೆಕ್ಟ್ ಆಗುವಲ್ಲಿ ಎಡವುತ್ತಿದ್ದಾರೆ. ಅವರ ನಟನೆಯ ಹಲವು ಸಿನಿಮಾಗಳು ಒಂದರ ಹಿಂದೊಂದು ಫ್ಲಾಪ್ ಆದವು. ಆದರೆ ಇದೀಗ ರವಿತೇಜ ‘ಇರುಮುಡಿ’ ಹೆಸರಿನ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಸಿನಿಮಾದ ಟ್ರೈಲರ್ ಸಖತ್ ಗಮನ ಸೆಳೆದಿದೆ.

ಗಮನ ಸೆಳೆಯುತ್ತಿದೆ ‘ಇರುಮುಡಿ’ ಸಿನಿಮಾ, ‘ಟಾಕ್ಸಿಕ್’ಗೆ ಠಕ್ಕರ್?
Ravi Teja
ಮಂಜುನಾಥ ಸಿ.
|

Updated on: Aug 14, 2026 | 7:21 PM

Share

ರವಿತೇಜ, ತೆಲುಗಿನಲ್ಲಿ (Telugu) ದಶಕಗಳಿಂದ ಕೆಲಸ ಮಾಡುತ್ತಿರುವ ಸ್ಟಾರ್ ನಟ. ಮಾಸ್ ಮಹಾರಾಜ ಎಂದೇ ಕರೆಸಿಕೊಳ್ಳುವ ರವಿತೇಜ ಇತ್ತೀಚೆಗೆ ಯಾಕೋ ತುಸು ಮಂಕಾಗಿದ್ದಾರೆ. ವಿಶೇಷವಾಗಿ ಹೊಸ ತಲೆಮಾರಿನ ಪ್ರೇಕ್ಷಕರಿಗೆ ಕನೆಕ್ಟ್ ಆಗುವಲ್ಲಿ ಎಡವುತ್ತಿದ್ದಾರೆ. ಅವರ ನಟನೆಯ ಹಲವು ಸಿನಿಮಾಗಳು ಒಂದರ ಹಿಂದೊಂದು ಫ್ಲಾಪ್ ಆದವು. ಆದರೆ ಇದೀಗ ರವಿತೇಜ ‘ಇರುಮುಡಿ’ ಹೆಸರಿನ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಸಿನಿಮಾದ ಟ್ರೈಲರ್ ಸಖತ್ ಗಮನ ಸೆಳೆದಿದೆ.

‘ಇರುಮುಡಿ’ ಹೆಸರೇ ಹೇಳುವಂತೆ ಅಯ್ಯಪ್ಪ ಸ್ವಾಮಿಯ ಕುರಿತಾದ ಕತೆ. ಸಿನಿಮಾದ ಪೋಸ್ಟರ್​​ಗಳಲ್ಲಿ ಸಹ ರವಿತೇಜ ಇರುಮುಡಿ ಹೊತ್ತಿರುವ ಜೊತೆಗೆ ಅವರ ಮಗಳು ಸಹ ಇರುವ ಪೋಸ್ಟರ್​​ಗಳು ಬಿಡುಗಡೆ ಆಗಿದ್ದವು. ಇದು ಮಲಯಾಳಂನ ‘ಮಲಿಕಾಪುರಂ’ ಸಿನಿಮಾದ ರೀಮೇಕ್ ಎಂದುಕೊಳ್ಳಲಾಗಿತ್ತು. ಆದರೆ ಸಿನಿಮಾದ ಟ್ರೈಲರ್ ಬಿಡುಗಡೆ ಆದ ಬಳಿಕ ಸಿನಿಮಾ ಕೇವಲ ಅಯ್ಯಪ್ಪ ಸ್ವಾಮಿ, ಇರುಮುಡಿ ಬಗ್ಗೆ ಮಾತ್ರವೇ ಅಲ್ಲದೆ, ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಕತೆ ಎಂಬುದು ತಿಳಿಯುತ್ತಿದೆ.

ಟ್ರೈಲರ್​​ನಲ್ಲಿರುವಂತೆ ನಾಯಕ ಅಯ್ಯಪ್ಪನ ಪರಮ ಭಕ್ತ, ಆದರೆ ಮಾಲೆ ಧರಿಸದಾಗ ಮದ್ಯ ಸೇವಿಸುವ, ಜಗಳ ಮಾಡುವ ವ್ಯಕ್ತಿ. ಆದರೆ ಮಗಳೆಂದರೆ ಆತನಿಗೆ ಪ್ರಾಣ. ಆದರೆ ಆ ಊರಿನಲ್ಲಿ ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯಲು ಆರಂಭವಾಗುತ್ತವೆ. ತನ್ನ ಮಗಳನ್ನು ಉಳಿಸಿಕೊಳ್ಳಲು ಹಾಗೂ ಊರಿನ ಎಲ್ಲ ಹೆಣ್ಣು ಮಕ್ಕಳನ್ನು ಅತ್ಯಾಚಾರಿಗಳಿಂದ ಸಂರಕ್ಷಿಸಿಕೊಳ್ಳಲು ಹೋರಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ:ಒಟಿಟಿಗೆ ಬಂತು ರಶ್ಮಿಕಾ, ಶಾಹಿದ್ ಕಪೂರ್, ಕೃತಿ ಸನನ್ ನಟನೆಯ ‘ಕಾಕ್‌ಟೇಲ್ 2’ ಸಿನಿಮಾ

‘ಇರುಮುಡಿ’ ಸಿನಿಮಾನಲ್ಲಿ ಅಯ್ಯಪ್ಪನ ಭಕ್ತಿ, ಮಾಲಧಾರಣೆ ಒಂದು ವಿಷಯವೇ ಹೊರತು ಇಡೀ ಸಿನಿಮಾ ಅದರ ಬಗ್ಗೆಯೇ ಇಲ್ಲ ಎಂಬುದನ್ನು ಟ್ರೈಲರ್ ಹೇಳುತ್ತಿದೆ. ಟ್ರೈಲರ್ ಬಿಡುಗಡೆ ಬಳಿಕ ‘ಇರುಮುಡಿ’ ಸಿನಿಮಾ ಟ್ರೆಂಡ್ ಆಗುತ್ತಿದ್ದು, ಸಿನಿಮಾದ ಪ್ರೀ ರಿಲೀಸ್ ಆಗಸ್ಟ್ 16 ರಂದು ನಡೆಯಲಿದ್ದು, ಅಯ್ಯಪ್ಪ ಮಾಲಧಾರಿಗಳು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ. ಆ ಕಾರ್ಯಕ್ರಮಕ್ಕೆ ರಾಮ್ ಚರಣ್ ಮುಖ್ಯ ಅತಿಥಿಯಾಗಿ ಬರುವ ಸಾಧ್ಯತೆಯೂ ಇದೆ.

‘ಇರುಮುಡಿ’ ಸಿನಿಮಾ ಆಗಸ್ಟ್ 21 ರಂದು ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಬಾಲಿವುಡ್ ಸಿನಿಮಾಗಳು ಸಹ ‘ಟಾಕ್ಸಿಕ್’ ಎದುರು ಸ್ಪರ್ಧೆ ಬೇಡವೆಂದು ರಿಲೀಸ್ ಮುಂದೂಡಿಕೆ ಮಾಡಿಕೊಳ್ಳುತ್ತಿರುವಾಗ ‘ಇರುಮುಡಿ’ ಸಿನಿಮಾ ಹಿಂಜರಿಕೆ ಇಲ್ಲದೆ ರಿಲೀಸ್​​ಗೆ ರೆಡಿ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us