ವೇದಿಕೆ ಮೇಲೆ ನಟಿಯ ಸೊಂಟ ಮುಟ್ಟಿದ ಹೀರೋ, ಛೀ ಎಂದ ನೆಟ್ಟಿಗರು

Actor Pawan Singh: ಭೋಜ್​​ಪುರಿ ಚಿತ್ರರಂಗದಲ್ಲಿ ನಟಿಯರನ್ನು ಅಶ್ಲೀಲವಾಗಿ ತೋರಿಸುವುದು ದಶಕಗಳಿಂದಲೂ ನಡೆದು ಬಂದಿದೆ. ಇದೀಗ ಭೋಜ್​ಪುರಿ ಚಿತ್ರರಂಗದ ಜನಪ್ರಿಯ ನಟನೊಬ್ಬ ತುಂಬಿದ ಸಭೆಯಲ್ಲಿ ವೇದಿಕೆ ಮೇಲೆಯೇ ನಟಿಯ ಸೊಂಟಕ್ಕೆ ಕೈ ಹಾಕಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಛೀ-ಥೂ ಎಂದಿದ್ದಾರೆ.

ವೇದಿಕೆ ಮೇಲೆ ನಟಿಯ ಸೊಂಟ ಮುಟ್ಟಿದ ಹೀರೋ, ಛೀ ಎಂದ ನೆಟ್ಟಿಗರು
Pawan Singh

Updated on: Aug 29, 2025 | 6:21 PM

ಭಾರತೀಯ ಸಿನಿಮಾಗಳಲ್ಲಿ ಮಹಿಳೆಯರನ್ನು ಗ್ಲಾಮರ್​ಗಾಗಿ, ಭೋಗದ ವಸ್ತುಗಳ ರೀತಿಯಲ್ಲಿ ತೋರಿಸುವುದು ದಶಕಗಳಿಂದಲೂ ನಡೆಯುತ್ತಲೇ ಬಂದಿದೆ. ಭಾರತೀಯ ಚಿತ್ರರಂಗ ಸಂಪೂರ್ಣವಾಗಿ ಪುರುಷ ಪ್ರಧಾನ ಚಿತ್ರರಂಗ. ಇಲ್ಲಿ ನಾಯಕಿಯರನ್ನು ಶೋಪೀಸ್​ ಗಳಂತೆ ಬಳಸಲಾಗುತ್ತದೆಯಷ್ಟೆ. ಸಿನಿಮಾಗಳಲ್ಲಿ ಮಾತ್ರವಲ್ಲ ಸಿನಿಮಾದ ಹೊರಗೂ ಸಹ ಅವರ ದೇಹಕ್ಕೆ ಮಾತ್ರವೇ ಬೆಲೆ ಕೊಡಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ, ಚಿತ್ರರಂಗದ ಸ್ಟಾರ್ ನಟನೊಬ್ಬ ವೇದಿಕೆ ಮೇಲೆ ನಾಯಕಿಯ ಸೊಂಟಕ್ಕೆ ಕೈ ಹಾಕಿರುವುದು.

ಭೋಜ್​​ಪುರಿ ಚಿತ್ರರಂಗ ಭಾರತದ ಜನಪ್ರಿಯ ಚಿತ್ರರಂಗಗಳಲ್ಲಿ ಒಂದು. ಭಾರತದ ಚಿತ್ರರಂಗಗಳಲ್ಲಿಯೇ ಅತಿ ಹೆಚ್ಚು ಪುರುಷ ಪ್ರಧಾನ ಚಿತ್ರರಂಗವೆಂದರೆ ಅದು ಭೋಜ್​​ಪುರಿ ಚಿತ್ರರಂಗ. ದಕ್ಷಿಣದ ಸಿನಿಮಾಗಳನ್ನು ಭೋಜ್​​ಪುರಿ ಭಾಷೆಯಲ್ಲಿ ರೀಮೇಕ್ ಮಾಡಿ, ಕಡ್ಡಾಯವಾಗಿ ಐಟಂ ಹಾಡುಗಳನ್ನಿಟ್ಟು ಸಿನಿಮಾಗಳನ್ನು ಮಾಡಲಾಗುತ್ತದೆ ಈ ಚಿತ್ರರಂಗದಲ್ಲಿ.

ಬಿಜೆಪಿ ನಾಯಕರುಗಳೂ ಆಗಿರುವ ಮನೋಜ್ ತಿವಾರಿ, ರವಿ ಕಿಶನ್ ಅವರುಗಳು ಇದೇ ಚಿತ್ರರಂಗದರು. ಭೋಜ್​​ಪುರಿ ಸಿನಿಮಾಗಳ ಜನಪ್ರಿಯ ನಾಯಕ ಪವನ್ ಸಿಂಗ್, ಇತ್ತೀಚೆಗೆ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ನಟಿಯ ಸೊಂಟಕ್ಕೆ ಕೈ ಹಾಕಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪವನ್ ಸಿಂಗ್ ನಟನೆಯ ‘ಸಯ್ಯಾ ಸೇವಾ ಕರೆ’ ಹೆಸರಿನ ಹಾಡು ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಾಡಿನಲ್ಲಿ ನಟಿಸಿರುವ ನಟಿ ಅಂಜಲಿ ರಾಘವ್ ಸಹ ವೇದಿಕೆಯಲ್ಲಿದ್ದರು. ಸೀರೆಯುಟ್ಟು ಕಾರ್ಯಕ್ರಮದಲ್ಲಿ ನಟಿ ಅಂಜಲಿ ಭಾಗವಹಿಸಿದ್ದರು. ವೇದಿಕೆ ಮೇಲೆ ನಟಿ ಮಾತನಾಡುತ್ತಿರುವಾಗ ಪಕ್ಕದಲ್ಲಿ ನಿಂತು ಆಕೆಯ ಸೊಂಟವನ್ನೇ ನೋಡುತ್ತಿದ್ದ ಪವನ್ ಸಿಂಗ್, ಸೊಂಟ ಮುಟ್ಟಲು ಆರಂಭಿಸಿದ. ಕೂಡಲೇ ನಟಿ ನಟನತ್ತ ನೋಡಿದರು. ಆದರೆ ಪವನ್ ಅಷ್ಟಕ್ಕೇ ನಿಲ್ಲಲಿಲ್ಲ, ಏನನ್ನೋ ಅಳಿಸುವಂತೆ ಮಾಡುತ್ತಾ ಪದೇ ಪದೇ ಸೊಂಟವನ್ನು ಮುಟ್ಟಿದ್ದಾರೆ. ಈ ಘಟನೆ ವಿಡಿಯೋನಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ:ಪವನ್​ ಕಲ್ಯಾಣ್​ರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ನಿಂತು ಹೋಯಿತೇ?

ಪವನ್ ಸಿಂಗ್, ನಟಿಯರೊಟ್ಟಿಗೆ ಕೆಟ್ಟದಾಗಿ ವರ್ತಿಸಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಸಹನಟಿ ಅರಕಾ ಸಿಂಗ್ ಎಂಬುವರು ಪವನ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ, ಬೆದರಿಕೆಯ ಆರೋಪವನ್ನು ಮಾಡಿದ್ದರು. ಪವನ್ ಸಿಂಗ್, ನಟಿಯರ ಬಗ್ಗೆ ಕೀಳು ಕಮೆಂಟ್ ಮಾಡಿರುವ, ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಹಾಡುಗಳನ್ನು ಮಾಡಿರುವ ಬಗ್ಗೆಯೂ ಈ ಹಿಂದೆ ಆರೋಪಗಳನ್ನು ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಸಹ ನಟ ಪವನ್ ಸಿಂಗ್ ಮತ್ತು ಇನ್ನೂ ಮೂವರ ವಿರುದ್ಧ ಎಫ್​ಐಆರ್ ದಾಖಲು ಮಾಡುವಂತೆ ವಾರಣಾಸಿ ನ್ಯಾಯಾಲಯ ಆದೇಶ ಮಾಡಿದೆ. ಹೋಟೆಲ್ ಉದ್ಯಮಿಯೊಬ್ಬನಿಗೆ ಲಾಭದ ಆಸೆ ತೋರಿಸಿ ತನ್ನ ‘ಬಾಸ್’ ಸಿನಿಮಾಕ್ಕೆ ಕೋಟ್ಯಂತರ ಬಂಡವಾಳ ಹೂಡುವಂತೆ ಮಾಡಿ ಆ ನಂತರ ಹಣ ಕೊಡದೆ ಬೆದರಿಕೆ ಹಾಕಿರುವ ಆರೋಪ ಪವನ್ ಸಿಂಗ್ ಮೇಲಿದೆ.

ಪವನ್ ಸಿಂಗ್ ಬಿಜೆಪಿ ಸದಸ್ಯರೂ ಆಗಿದ್ದು 2024 ರಲ್ಲಿ ಲೋಕಸಭೆ ಚುನಾವಣೆಗೆ ಸೀಟು ನೀಡಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಪಶ್ಚಿಮ ಬಂಗಾಳದ ಅಸಾನ್ಸೋಲ್ ಕ್ಷೇತ್ರದಿಂದ ಸ್ಪರ್ಧಿಸದೆ ಬಿಹಾರದ ಕರಟಕ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನಪ್ಪಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ