ಸಿನಿಮಾ ಅಥವಾ ವೆಬ್ ಸೀರಿಸ್ (Web Series) ವಿಚಾರ ಬಂದಾಗ ಕಲಾವಿದರು ತಮಗೆ ಸಿಕ್ಕ ಪಾತ್ರಕ್ಕೆ ಸಂಪೂರ್ಣವಾಗಿ ನ್ಯಾಯ ಒದಗಿಸಬೇಕಾಗುತ್ತದೆ. ತೆರೆಮೇಲೆ ಬೋಲ್ಡ್ ಪಾತ್ರಗಳನ್ನು ಮಾಡಿ ಗಮನ ಸೆಳೆದ ಅನೇಕರಿದ್ದಾರೆ. ಹಾಗಂತ ಶೂಟಿಂಗ್ ಮಾಡುವಾಗ ಅವರು ಇದನ್ನು ಇಷ್ಟಪಟ್ಟು ಮಾಡಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಪಾತ್ರಕ್ಕೆ ನ್ಯಾಯ ಒದಗಿಸಬೇಕು ಅನ್ನೋದು ಮಾತ್ರ ಅವರ ತಲೆಯಲ್ಲಿರುತ್ತದೆ. ಅದೇ ರೀತಿ ಅನೇಕ ಸೆಲೆಬ್ರಿಟಿಗಳು ಲೆಸ್ಬಿಯನ್ ಪಾತ್ರ ಮಾಡಿ ಗಮನ ಸೆಳೆದವರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವಿರ.
ಭೂಮಿ ಪಡ್ನೇಕರ್ ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ‘ಬಧಾಯಿ ದೋ’ ಸಿನಿಮಾದಲ್ಲಿ ಅವರು ಲೆಸ್ಬಿಯನ್ ಹುಡುಗಿಯ ಪಾತ್ರ ಮಾಡಿದ್ದರು. ಲೆಸ್ಬಿಯನ್ ಹುಡುಗಿ ಗೇ ವ್ಯಕ್ತಿಯನ್ನು ಮದುವೆ ಆಗುತ್ತಾಳೆ. ಈ ರೀತಿಯಲ್ಲಿ ಕಥೆ ಸಾಗುತ್ತದೆ.
ಶೆಫಾಲಿ ಶಾ ಹಾಗೂ ಕೃತಿ ಕುಲ್ಹಾರಿ ಅವರು ‘ಹ್ಯೂಮನ್’ ವೆಬ್ ಸೀರೀಸ್ನಲ್ಲಿ ನಟಿಸಿದ್ದಾರೆ. ಇದು ಹಾಟ್ಸ್ಟಾರ್ನಲ್ಲಿ ಪ್ರಸಾರ ಆಗಿದೆ. ಈ ಸೀರಿಸ್ನಲ್ಲಿ ಲೆಸ್ಬಿಯನ್ ರಿಲೇಶನ್ಶಿಪ್ ಬಗ್ಗೆಯೂ ಇದೆ. ಇಬ್ಬರೂ ನಟಿಯರು ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡಿದ್ದರು. ಬೋಲ್ಡ್ ದೃಶ್ಯ ನೋಡಿ ಫ್ಯಾನ್ಸ್ ಅಚ್ಚರಿಗೊಂಡಿದ್ದರು.
ಸೋನಮ್ ಕಪೂರ್ ಅವರು ‘ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಗಾ’ ಸಿನಿಮಾದಲ್ಲಿ ನಟಿಸಿದ್ದರು. ಅವರು ಲೆಸ್ಬಿಯನ್ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ನಟನೆ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದರು.
ಲವ್ಲಿ ಮಸಾಜ್ ಪಾರ್ಲರ್ ಉಲ್ಲು ಆ್ಯಪ್ನಲ್ಲಿ ಪ್ರಸಾರ ಕಂಡ ಸೀರೀಸ್. ಈ ವೆಬ್ ಸೀರಿಸ್ನಲ್ಲಿ ಹಲವು ವಿಚಾರಗಳನ್ನು ಹೇಳಲಾಗಿದೆ. ಇದು ಲೆಸ್ಬಿಯನ್ ಕುರಿತ ಸೀರಿಸ್.
ಹುಮಾ ಖುರೇಷಿ ಅವರು ‘ದೇದ್ ಇಷ್ಕಿಯಾ’ ಸಿನಿಮಾದಲ್ಲಿ ಲೆಸ್ಬಿಯನ್ ಪಾತ್ರ ಮಾಡಿದ್ದರು. ಅವರ ಪಾತ್ರ ಎಲ್ಲರ ಗಮನ ಸೆಳೆದೊತ್ತು.
‘ಫೈರ್’ ಸಿನಿಮಾದಲ್ಲಿ ಹೋಮೋ ಸೆಕ್ಷುವಾಲಿಟಿ ಬಗ್ಗೆ ಹೇಳಲಾಗಿದೆ. ಶಬಾನಾ ಆಜ್ಮಿ ಅವರು ಈ ಸಿನಿಮಾದಲ್ಲಿ ನಟಿಸಿದ್ದರು. ಅವರು ಈ ಪಾತ್ರ ಮಾಡಿದ್ದಕ್ಕೆ ಸಾಕಷ್ಟು ಟೀಕೆ ಎದುರಿಸಬೇಕಾಯಿತು.
ಇದನ್ನೂ ಓದಿ: ವೆಬ್ ಸೀರಿಸ್ ಆರಂಭಕ್ಕೂ ಮೊದಲೇ ಬಂತು 120 ಕೋಟಿ ರೂಪಾಯಿ ಡೀಲ್; ಆರ್ಯನ್ ಖಾನ್ ನಿರ್ಧಾರವೇ ಬೇರೆ
ಆಲಿಯಾ ಮುಖರ್ಜಿ ನಟನೆಯ ‘ಟ್ವಿಸ್ಟೆಡ್’ ಹೆಸರಿನ ಸೀರಿಸ್ ಇದೆ. ಇದೊಂದು ಮರ್ಡರ್ ಮಿಸ್ಟರಿ ಕಥೆ. ಇದರಲ್ಲಿ ಲೆಸ್ಬಿಯನ್ ಕಥೆ ಕೂಡ ಇದೆ. ಇದು ಜಿಯೋ ಸಿನಿಮಾದಲ್ಲಿ ಪ್ರಸಾರ ಕಂಡಿದೆ.
ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರೋ ಮಾಧುರಿ ದೀಕ್ಷಿತ್ ಅವರು ‘ಮಜಾ ಮಾ’ ಸಿನಿಮಾದಲ್ಲಿ ಲೆಸ್ಬಿಯನ್ ಹುಡುಗಿಯ ಪಾತ್ರ ಮಾಡಿ ಗಮನ ಸೆಳೆದಿದ್ದರು. ಅವರು ಪಲ್ಲವಿ ಪಟೇಲ್ ಹೆಸರಿನ ಪಾತ್ರ ಮಾಡಿದ್ದರು. ಅಮೇಜಾನ್ ಪ್ರೈಮ್ ಮೂಲಕ ಈ ಸಿನಿಮಾ ರಿಲೀಸ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ