Bigg Boss Kannada Winner Hanumantha: ಬಿಗ್ ಬಾಸ್ ವಿನ್ನರ್ ಹನುಮಂತ

| Updated By: ರಾಜೇಶ್ ದುಗ್ಗುಮನೆ

Updated on: Jan 27, 2025 | 12:11 AM

Bigg Boss Kannada Winner Hanumantha: ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಯಾರು ಎಂದು ಘೋಷಣೆ ಆಗಿದೆ. ‘ಬಿಗ್ ಬಾಸ್’ ಫಿನಾಲೆಯಲ್ಲಿ ತ್ರಿವಿಕ್ರಂ ಹಾಗೂ ಹನುಮಂತ ಅವರು ಫಿನಾಲೆ ಹಂತದಲ್ಲಿ ಇದ್ದರು. ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಂನ ಅಕ್ಕ ಪಕ್ಕ ನಿಲ್ಲಿಸಿದರು. ಈ ವೇಳೆ ‘ವಿನ್ನರ್ ಹನುಮಂತ’ ಎಂದು ಸುದೀಪ್ ಕೈ ಎತ್ತಿದರು.

Bigg Boss Kannada Winner Hanumantha: ಬಿಗ್ ಬಾಸ್ ವಿನ್ನರ್ ಹನುಮಂತ
Hanumantha

Bigg Boss Kannada Winner Hanumantha: ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಯಾರು ಎಂಬುದು ರಿವೀಲ್ ಆಗಿದೆ. ಕಳೆದ 117 ದಿನಗಳಿಂದ ನಡೆದುಕೊಂಡು ಬರುತ್ತಿದ್ದ ಬಿಗ್ ಬಾಸ್ ಇಂದು (ಜನವರಿ 26) ಕೊನೆ ಆಗಿದೆ. ಈ ಬಾರಿ ಮೋಕ್ಷಿತಾ ಪೈ, ರಜತ್, ಮಂಜು, ತ್ರಿವಿಕ್ರಂ ಹಾಗೂ ಹನುಮಂತ ಇದ್ದರು. ಹನುಮಂತ ಅವರಿಗೆ ಕಪ್ ಒಲಿದಿದೆ.

LIVE NEWS & UPDATES

The liveblog has ended.
  • 27 Jan 2025 12:01 AM (IST)

    ರನ್ನರ್ ಅಪ್ ಸ್ಥಾನ ಪಡೆದುಕೊಂಡ ತ್ರಿವಿಕ್ರಮ್

    ಸರಳತೆ ಮೂಲಕವೇ ಸೌಂಡು ಮಾಡಿದ್ದ ಹನುಮಂತ ಅವರು ಬಿಗ್​ ಬಾಸ್ ವಿನ್ನರ್ ಪಟ್ಟ ಪಡೆದರು. ತ್ರಿವಿಕ್ರಮ್ ಅವರು ರನ್ನರ್​ ಅಪ್​ ಆಗಿದ್ದಾರೆ.

  • 26 Jan 2025 11:25 PM (IST)

    ಎರಡನೇ ರನ್ನರ್​ ಅಪ್​ ಆದ ರಜತ್

    50ನೇ ದಿನಗಳ ಬಳಿಕ ಬಿಗ್​ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ರಜತ್​ ಎರಡನೇ ರನ್ನರ್​ ಅಪ್​ ಆಗಿ ಮನೆಯಿಂದ ಹೊರಬಂದಿದ್ದಾರೆ. ವೈಲ್ಡ್ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿದ್ದರೂ ರಜನ್​​​ ತನ್ನ ನೇರ ನುಡಿಯಿಂದಲೇ ಸಾಕಷ್ಟು ಜನಮನ್ನಣೆ ಗಳಿಸಿದ್ದರು.

  • 26 Jan 2025 11:17 PM (IST)

    ಬಿಗ್​ ಬಾಸ್​ ಮನೆಯೊಳಗೆ ಕಿಚ್ಚ ಸುದೀಪ್

    ಟಾಪ್ 3 ಸ್ಪರ್ಧಿಗಳಾದ ರಜತ್​​, ವಿಕ್ರಮ್​ ಹಾಗೂ ಹನುಮಂತ ಅವರನ್ನು ಕರೆತರಲು ದೊಡ್ಮನೆ ಒಳಗೆ ಸುದೀಪ್ ಬಂದಿದ್ದಾರೆ. ​

  • 26 Jan 2025 11:05 PM (IST)

    ರಜತ್ ಕಿಶನ್‌ ಬಿಗ್ ಬಾಸ್ ಜರ್ನಿ

    50 ದಿನಗಳ ನಂತರ ಬಿಗ್​ ಬಾಸ್​ ಮನೆಗೆ ಎಂಟ್ರಿಕೊಟ್ಟಿದ್ದ ರಜತ್ ಲಕ್ಷಾಂತರ ಜನರ ಮನಗೆದ್ದು ಟಾಪ್​​ 3ಯಲ್ಲಿ ಜಾಗ ಪಡೆದುಕೊಂಡಿದ್ದಾರೆ. ಲೇಟಾಗಿ ಬಂದ್ರೂ ಎಲ್ಲರನ್ನೂ ಎಂಟರ್‌ಟೈನ್ ಮಾಡಿದ ರಜತ್ ಕಿಶನ್‌ ಅವರ ಬಿಗ್ ಬಾಸ್ ಜರ್ನಿ ವಿಡಿಯೋ ಇಲ್ಲಿದೆ ನೋಡಿ.

  • 26 Jan 2025 10:20 PM (IST)

    ಅಮ್ಮನ ನೆನೆದು ಕಿಚ್ಚ ಸುದೀಪ್ ಭಾವುಕ

    ಕಟ್ಟ ಕಡೆಯ ಬಿಗ್ ಬಾಸ್ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಅವರು ಸ್ವಲ್ಪ ಎಮೋಷನಲ್ ಆಗಿದ್ದಾರೆ. ಇದಲ್ಲದೇ ಅಮ್ಮನ ನೆನೆದು ಕಿಚ್ಚ ಸುದೀಪ್​ ಕಣ್ಣೀರು ಹಾಕಿದ್ದಾರೆ.

  • 26 Jan 2025 09:45 PM (IST)

    ಕಿಚ್ಚನೇ ಕರೆತರ್ತಾರೆ

    ಉಳಿದ ಮೂರು ಸ್ಪರ್ಧಿಗಳು ದೊಡ್ಮನೆಯಿಂದ ಸುದೀಪ್ ಅವರೇ ಕರೆದು ತರೋದಾಗಿ ಹೇಳಿದ್ದಾರೆ. ವೇದಿಕೆ ಮೇಲೆ ಈ ಮೂವರನ್ನು ವೇದಿಕೆ ಮೇಲೆ ಕಿಚ್ಚನೇ ಕರೆತರಲಿದ್ದಾರೆ.

  • 26 Jan 2025 09:44 PM (IST)

    ದೊಡ್ಮನೆಯಿಂದ ಮೋಕ್ಷಿತಾ ಔಟ್

    ದೊಡ್ಮನೆಯಿಂದ ಮೋಕ್ಷಿತಾ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಟಾಪ್ ಐದರಲ್ಲಿ ಇದ್ದ ಏಕೈಕ ಮಹಿಳಾ ಸ್ಪರ್ಧಿ ಆಗಿತ್ತು. ಅವರಿಗೆ ಬಿದ್ದ ವೋಟ್ ಎಷ್ಟು ಎಂಬುದು ರಿವೀಲ್ ಆಗಿಲ್ಲ.

  • 26 Jan 2025 07:59 PM (IST)

    ವೇದಿಕೆಯ ಮೇಲೆ ತಮ್ಮನ್ನು ತಾವೇ ನೋಡಿ ಬಿದ್ದು ಬಿದ್ದು ನಕ್ಕ ಬಿಗ್ ಬಾಸ್ ಮನೆ ಮಂದಿ

    ಬಿಗ್ ಬಾಸ್ ಮನೆ ಮಂದಿಯಂತೆ ಗಿಚ್ಚಿ ಗಿಲಿಗಿಲಿ ಸ್ಪರ್ಧಿಗಳು ಅಭಿನಯಿಸಿದ್ದಾರೆ. ಗಿಚ್ಚಿ ಗಿಲಿಗಿಲಿ ಸ್ಪರ್ಧಿಗಳ ಅವತಾರ ಕಂಡು ಬಿಗ್​ ಬಾಸ್​​​ ಮನೆ ಮಂದಿಯೆಲ್ಲ ನಕ್ಕು ನಕ್ಕು ಸುಸ್ತಾಗಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

  • 26 Jan 2025 07:47 PM (IST)

    ಮಂಜುಗೆ ಬಿಗ್ ಬಾಸ್ ಮನೆಯಲ್ಲಿ ಕಾಟ ಕೊಟ್ಟಿದ್ದು ಈ ಸ್ಪರ್ಥಿ

    ಉಗ್ರಂ ಮಂಜು ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಕಾಟ ಕೊಟ್ಟಿದ್ದು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸುದೀಪ್​ ಅವರ ಕೇಳಿದ ಪ್ರಶ್ನೆಗೆ ಮಂಜು ಉತ್ತರಿಸಿದ್ದು, ಚೈತ್ರಾ ಕುಂದಾಪುರ ಅವರು ನನಗೆ ಹೆಚ್ಚು ಕಾಟ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

  • 26 Jan 2025 06:21 PM (IST)

    ಚೈತ್ರಾ ಕಂಡು ಶಾಕ್​ ಆದ ರಜತ್​

    ಗ್ರ್ಯಾಂಡ್​​ ಫಿನಾಲೆ ವೇದಿಕೆಗೆ ಬಿಗ್​ ಬಾಸ್​​ ಸೀಸನ್​ 11ರ ಮಾಜಿ ಸ್ಪರ್ಧಿಗಳು ಬಂದಿದ್ದು, ಅವರ ಪೈಕಿ ಚೈತ್ರಾ ಕುಂದಾಪುರ ಅವರು ತಮ್ಮ ಲುಕ್​​ ಮೂಲಕ ಗಮನ ಸೆಳೆದಿದ್ದಾರೆ. ಚೈತ್ರಾ ಅವರ ಕಾಸ್ಟೂಮ್​ ಹಾಗೂ ಮೇಕಪ್​ ಕಂಡು ರಜತ್​ ಹಾಗೂ ಮನೆಯೊಳಗಿನ ಸ್ಪರ್ಧಿಗಳು ಶಾಕ್​ ಆಗಿದ್ದಾರೆ. ಜೊತೆಗೆ ಸುದೀಪ್​ ಅವರು ಕೂಡ ಚೈತ್ರಾಳ ಕಾಲೆಳೆದಿದ್ದಾರೆ.

  • 26 Jan 2025 06:13 PM (IST)

    ಹಿರಿಯ ನಟ ಅನಂತ್ ನಾಗ್ ಬಗ್ಗೆ ಸುದೀಪ್ ಮಾತು

    ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆ ಆಗಿದ್ದು, ಬಿಗ್​ ಬಾಸ್​​ ಗ್ರ್ಯಾಂಡ್​​ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್​ ಅವರು ಅನಂತ್​ ನಾಗ್​​ ಅವರಿಗೆ ಶುಭ ಹಾರೈಸಿದ್ದಾರೆ.

  • 26 Jan 2025 06:08 PM (IST)

    ಫಿನಾಲೆ ವೇದಿಕೆಗೆ ಕಿಚ್ಚನ ಗ್ರ್ಯಾಂಡ್ ಎಂಟ್ರಿ

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಗೆ ಕಿಚ್ಚ ಸುದೀಪ್​​ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಗ್ರ್ಯಾಂಡ್ ಫಿನಾಲೆಯ ಎರಡನೇ ದಿನವಾದ ಇಂದು ಬಿಗ್​ ಬಾಸ್​​​ ವಿಜೇತರು ಯಾರು ಎಂಬುದು ಘೋಷಣೆಯಾಗಲಿದೆ.

  • 26 Jan 2025 04:31 PM (IST)

    ಹನುಮಂತನ ಮಾತಿಗೆ ನಕ್ಕು ನಕ್ಕು ಸುಸ್ತಾದ ಕಿಚ್ಚ

    ಬಿಗ್​ ಬಾಸ್​​ ಸ್ಪರ್ಧಿಗಳ ಪೈಕಿ ಯಾರ‍್ಯಾರು ಯಾವ ತರ ಎಂದು ಕಿಚ್ಚ ಸುದೀಪ್​ ಅವರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಜಾಣ್ಮೆಯಿಂದ ಹನುಮಂತ ಉತ್ತರಿಸಿದ್ದು, ಹನುಮಂತನ ಉತ್ತರ ಕೇಳಿ ಕಿಚ್ಚ ಸುದೀಪ್​ ನಕ್ಕು ನಕ್ಕು ಸುಸ್ತಾಗಿದ್ದಾರೆ. ಕಲರ್ಸ್​​ ಕನ್ನಡದ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.

  • 26 Jan 2025 04:11 PM (IST)

    ಭವ್ಯಾಳ ಜರ್ನಿಯ ವಿಡಿಯೋ ಹಂಚಿಕೊಂಡ ಬಿಗ್​​ ಬಾಸ್​​​

    ನಿನ್ನೆ ಟಾಪ್​ 6 ಫೈನಲಿಸ್ಟ್​​ ಪೈಕಿ ಭವ್ಯ ಅವರು ಮನೆಯಿಂದ ಹೊರ ಬಂದಿದ್ದಾರೆ. ನಗು-ಅಳು-ಗೆಲುವು ಎಲ್ಲಾ ಭಾವನೆಗಳನ್ನೂ ಹೊತ್ತು ಹೊರಬಂದ ಭವ್ಯಾ ಅವರ ಬಿಗ್‌ ಬಾಸ್ ಜರ್ನಿಯ ಬಗ್ಗೆ ಕಲರ್ಸ್​​ ಕನ್ನಡದ ಅಧಿಕೃತ​​ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.

  • 26 Jan 2025 03:50 PM (IST)

    ಸುದೀಪ್ ಸಿದ್ಧತೆ

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಗೆ ಕ್ಷಣಗಣೆ ಆರಂಭ ಆಗಿದೆ. ಸುದೀಪ್ ಸಿದ್ಧತೆ ಹೇಗಿದೆ ಎಂಬ ವಿಡಿಯೋನ ಕಲರ್ಸ್ ಹಂಚಿಕೊಂಡಿದೆ.

Published On - 3:44 pm, Sun, 26 January 25

Follow us on