ಬಿಗ್ಬಾಸ್ ಕನ್ನಡ 12: ಉತ್ತಮ ಸ್ಪರ್ಧಿಯೇ ಹೊರಕ್ಕೆ, ಒಳ್ಳೆಯವರಿಗಿದು ಕಾಲವಲ್ಲ ಬಿಡಿ
Bigg Boss Kannada 12: ಬಿಗ್ಬಾಸ್ ಮನೆ ಒಳ್ಳೆಯವರಿಗಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತರರಿಗೆ ಮನನೋಯಿಸದೆ, ಅನವಶ್ಯಕ ಮಾತುಗಳನ್ನಾಡದೆ, ಅನವಶ್ಯಕ ಜಗಳ ಮಾಡದೆ, ಎಲ್ಲರನ್ನೂ ಗೌರವಿಸುತ್ತಾ, ನಾಟಕೀಯತೆ ಪ್ರದರ್ಶಿಸದೆ ಜಂಟಲ್ಮನ್ ಗೇಮ್ ಆಡುತ್ತಿದ್ದ ಒಳ್ಳೆಯ ಸ್ಪರ್ಧಿ ಈ ವಾರ ಮನೆಯಿಂದ ಹೊರಗೆ ಹೋಗಿದ್ದಾರೆ.

ಜೋರಾಗಿ ಗದ್ದಲ ಮಾಡುವವರಿಗೆ, ಸುಖಾ ಸುಮ್ಮನೆ ಜಗಳ ಮಾಡುವವರಿಗೆ, ನಾಟಕೀಯತೆ ಪ್ರದರ್ಶಿಸುವವರಿಗೆ, ಎಲ್ಲ ಭಾವನೆಗಳನ್ನು ಅತಿಯಾಗಿ ತೋರ್ಪಡಿಸಿಕೊಳ್ಳುವವರಿಗೆ, ಸುಖಾ ಸುಮ್ಮನೆ ಮಾತನಾಡುವವರಿಗಷ್ಟೆ ಬಿಗ್ಬಾಸ್ (Bigg Boss) ಮನೆಯಲ್ಲಿ ಪ್ರಾಮುಖ್ಯತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಶಾಂತವಾಗಿದ್ದು, ಪರಿಸ್ಥಿತಿಗೆ ತಕ್ಕಂತೆ ವರ್ತಿಸುತ್ತಾ, ಇತರರಿಗೆ ಮನನೋಯಿಸದೆ, ಅನವಶ್ಯಕ ಮಾತುಗಳನ್ನಾಡದೆ, ಅನವಶ್ಯಕ ಜಗಳ ಮಾಡದೆ, ಎಲ್ಲರಿಗೂ ಗೌರವಿಸುತ್ತಾ, ನಾಟಕೀಯತೆ ಪ್ರದರ್ಶಿಸದೆ ಜಂಟಲ್ಮನ್ ಗೇಮ್ ಆಡುತ್ತಿದ್ದ ಒಳ್ಳೆಯ ಸ್ಪರ್ಧಿ ಈ ವಾರ ಮನೆಯಿಂದ ಹೊರಗೆ ಹೋಗಿದ್ದಾರೆ. ಆ ಮೂಲಕ ಬಿಗ್ಬಾಸ್ ಮನೆ ಒಳ್ಳೆಯವರಿಗಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಆರಂಭದಿಂದಲೂ ತಮ್ಮ ಒಳ್ಳೆಯತನದಿಂದ ಸೆಳೆದಿದ್ದ ಅಭಿಷೇಕ್ ಅವರು ಈ ವಾರ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಅಭಿಷೇಕ್ ಅವರು ಈ ವಾರ ಚೆನ್ನಾಗಿ ಆಟವಾಡಿ ಎರಡನೇ ಬಾರಿ ಕ್ಯಾಪ್ಟನ್ ಸಹ ಆಗಿದ್ದರು. ಆದರೆ ಗಿಲ್ಲಿ ಮಾಡಿದ ತರ್ಲೆ ಕೆಲಸದಿಂದ ಅವರ ಕ್ಯಾಪ್ಟೆನ್ಸಿ ಹೋಗಿದ್ದು ಮಾತ್ರವಲ್ಲದೆ. ಈಗ ಅವರು ಬಿಗ್ಬಾಸ್ ಮನೆಯಿಂದಲೇ ಹೊರಗೆ ಹೋಗಿದ್ದಾರೆ.
ಈ ವಾರ ಸಾಕಷ್ಟು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಗಿಲ್ಲಿ, ಕಾವ್ಯಾ, ಅಶ್ವಿನಿ, ಧ್ರುವಂತ್, ಧನುಶ್, ಸೂರಜ್, ಮಾಳು, ರಾಶಿಕಾ, ಸ್ಪಂದನಾ ಅವರುಗಳು ಈ ವಾರ ನಾಮಿನೇಟ್ ಆಗಿದ್ದರು. ಎಲ್ಲರೂ ಸೇಫ್ ಆಗಿ ಕೊನೆಯದಾಗಿ ಸೂರಜ್, ಮಾಳು ಮತ್ತು ಅಭಿಷೇಕ್ ಮಾತ್ರವೇ ಉಳಿದುಕೊಂಡರು. ಅವರು ಮೂವರನ್ನೂ ಆಕ್ಟಿವಿಟಿ ರೂಂಗೆ ಕಳಿಸಲಾಯ್ತು. ಮೂವರ ಮುಂದೆ ಸೂಟ್ಕೇಸ್ ಇಡಲಾಗಿತ್ತು. ಸೂಟ್ಕೇಸ್ನಲ್ಲಿ ಅವರ ಎವಿಕ್ಷನ್ಗೆ ಸಂಬಂಧಿಸಿದ ಬೋರ್ಡ್ ಇಡಲಾಗಿತ್ತು. ಅಭಿಷೇಕ್ ಅವರ ಸೂಟ್ಕೇಸ್ನಲ್ಲಿ ‘ದಿ ಎಂಡ್’ ಎಂದು ಬರೆದಿತ್ತು. ಅಲ್ಲಿಗೆ ಅಭಿಷೇಕ್ ಅವರ ಆಟ ಅಂತ್ಯವಾಯ್ತು.
ಇದನ್ನೂ ಓದಿ:ಆ ಒಂದು ಆರೋಪಕ್ಕೆ ಬಿಗ್ಬಾಸ್ ವೇದಿಕೆ ಮೇಲೆ ಉತ್ತರ ನೀಡಿದ ಕಿಚ್ಚ
ಅಭಿಷೇಕ್ ಅವರು ಬಿಗ್ಬಾಸ್ ಸೀಸನ್ 12ರ ಜಂಟಲ್ಮ್ಯಾನ್ ಆಗಿದ್ದರು. ಚೆನ್ನಾಗಿ ಟಾಸ್ಕ್ ಆಡುತ್ತಿದ್ದರು. ಮನೆಯ ನಿಯಮಗಳನ್ನು ಮೀರುತ್ತಿರಲಿಲ್ಲ. ಯಾರೊಟ್ಟಿಗೂ ಜಗಳ ಮಾಡುತ್ತಿರಲಿಲ್ಲ. ಯಾರ ಬಗ್ಗೆಯೂ ವಿನಾ ಕಾರಣ ಮಾತನಾಡುತ್ತಿರಲಿಲ್ಲ. ಯಾರ ಬೆನ್ನ ಹಿಂದೆಯೂ ನಿಂದನೆ ಮಾಡುತ್ತಿರಲಿಲ್ಲ. ದರ್ಪ ತೋರಿಸುತ್ತಿರಲಿಲ್ಲ, ಹಾಸ್ಯದ ಹೆಸರಲ್ಲಿ ತೇಜೋವಧೆ ಮಾಡುತ್ತಿರಲಿಲ್ಲ. ಒಟ್ಟಾರೆ ಒಬ್ಬ ಜಂಟಲ್ಮ್ಯಾನ್ ರೀತಿ ಬಿಗ್ಬಾಸ್ ಮನೆಯಲ್ಲಿದ್ದರು. ಆದರೆ ಅದೇ ಅವರಿಗೆ ಮುಳುವಾಯ್ತು. ಅಭಿಷೇಕ್ ಅವರು ಹೊರಗೆ ಬಂದ ಮೇಲೂ ಸಹ ಸುದೀಪ್ ಅವರು, ‘ನೀವೊಬ್ಬ ಒಳ್ಳೆಯ ವ್ಯಕ್ತಿ’ ಎಂದು ಬೆನ್ನುತಟ್ಟಿದರು. ಅಲ್ಲದೆ, ನೀವು ಹೊರಗೆ ಇದ್ದಂತೆ ಬಿಗ್ಬಾಸ್ ಮನೆಯಲ್ಲಿ ಇದ್ದಿರಿ ಬಹುಷಃ ಹಾಗೆ ಇರಬಾರದಿತ್ತೇನೋ ಎಂದರು. ಏನೇ ಆಗಲಿ ಒಬ್ಬ ಒಳ್ಳೆಯ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




