AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಕನ್ನಡ: ಆಲೂಗಡ್ಡೆಗಾಗಿ ಕಿತ್ತಾಡಿಕೊಂಡ ಮನೆ ಮಂದಿ

Bigg Boss Kannada: ಬಿಗ್​​ಬಾಸ್ ಮನೆಯಲ್ಲಿ ಜಗಳಗಳು ನಡೆಯುತ್ತಲೇ ಇರುತ್ತವೆ. ಟಾಸ್ಕ್ ಕಾರಣಕ್ಕೆ, ನಾಮಿನೇಷನ್ ಕಾರಣಕ್ಕೆ ಇನ್ನೂ ಏನೇನೋ ಕಾರಣಗಳಿಗೆ ಬಿಗ್​​ಬಾಸ್ ಮನೆಯಲ್ಲಿ ಜಗಳ ನಡೆದಿವೆ. ಈ ಸೀಸನ್​​ನಲ್ಲೂ ಅವೆಲ್ಲ ಮುಂದುವರೆದಿವೆ. ಕಳೆದ ಕೆಲ ಸೀಸನ್​​ಗಳಂತೆ ಈ ವಾರವೂ ಸಹ ಮನೆಯಲ್ಲಿ ಊಟದ ವಿಚಾರವಾಗಿ ಜಗಳ ನಡೆದಿವೆ. ಅದರಲ್ಲೂ ಆಲೂಗಡ್ಡೆಗಾಗಿ ಈ ವಾರ ಜೋರು ಜಗಳ ನಡೆದಿದೆ.

ಬಿಗ್​​ಬಾಸ್ ಕನ್ನಡ: ಆಲೂಗಡ್ಡೆಗಾಗಿ ಕಿತ್ತಾಡಿಕೊಂಡ ಮನೆ ಮಂದಿ
Bigg Boss House
ಮಂಜುನಾಥ ಸಿ.
|

Updated on: Dec 06, 2025 | 11:00 PM

Share

ಬಿಗ್​​ಬಾಸ್ (Bigg Boss) ಮನೆಯಲ್ಲಿ ಜಗಳಗಳು ಸಾಮಾನ್ಯ. ಜಗಳ ನಡೆಯದ ದಿನಗಳೇ ಇಲ್ಲವೇನೋ ಎಂಬಷ್ಟು ಬಿಗ್​​ಬಾಸ್ ಮನೆಯಲ್ಲಿ ಜಗಳಗಳು ನಡೆಯುತ್ತವೆ. ಟಾಸ್ಕ್ ಕಾರಣಕ್ಕೆ, ನಾಮಿನೇಷನ್ ಕಾರಣಕ್ಕೆ ಇನ್ನೂ ಏನೇನೋ ಕಾರಣಗಳಿಗೆ ಬಿಗ್​​ಬಾಸ್ ಮನೆಯಲ್ಲಿ ಜಗಳ ನಡೆದಿವೆ. ಈ ಸೀಸನ್​​ನಲ್ಲೂ ಅವೆಲ್ಲ ಮುಂದುವರೆದಿವೆ. ಕಳೆದ ಕೆಲ ಸೀಸನ್​​ಗಳಂತೆ ಈ ವಾರವೂ ಸಹ ಮನೆಯಲ್ಲಿ ಊಟದ ವಿಚಾರವಾಗಿ ಜಗಳ ನಡೆದಿವೆ. ಅದರಲ್ಲೂ ಆಲೂಗಡ್ಡೆಗಾಗಿ ಈ ವಾರ ಜೋರು ಜಗಳ ನಡೆದಿದೆ.

ರಘು, ಸೂರಜ್ ಇನ್ನೂ ಕೆಲವರು ಈ ವಾರ ಅಡುಗೆ ಮನೆ ಕೆಲಸ ವಹಿಸಿಕೊಂಡಿದ್ದರು. ಧ್ರುವಂತ್ ಮತ್ತು ಅಶ್ವಿನಿ ಅವರು ಪ್ರತ್ಯೇಕವಾಗಿ ತಾವು ಬೇರೆ ಮಾಡಿಕೊಳ್ಳುವುದಾಗಿ ಹೇಳಿ ಅದಕ್ಕಾಗಿ ಹಿಟ್ಟು ಇನ್ನಿತರೆಗಳನ್ನು ಕೇಳಿದರು. ಆದರೆ ಅಡುಗೆ ಮಾಡುತ್ತಿದ್ದ ರಘುಗೆ ಇದು ಸರಿ ಹೋಗಲಿಲ್ಲ. ಆಗ ರಘು ಮತ್ತು ಧ್ರುವಂತ್ ಪರಸ್ಪರ ವಾಗ್ವಾದ ಮಾಡಿದರು. ಆದರೆ ಯಾವಾಗ ಈ ಜಗಳಕ್ಕೆ ರಜತ್ ಎಂಟ್ರಿ ಆಯ್ತೋ ಜಗಳ ತೀರ ಹೆಚ್ಚಾಯ್ತು.

ಅದರಲ್ಲೂ ಆಲುಗಡ್ಡೆಯ ವಿಚಾರವಾಗಿ ಜಗಳ ಜೋರಾಗಿ ನಡೆಯಿತು. ನೀವು ಇಂದು ಆಲೂಗಡ್ಡೆ ತಿಂದು ಖಾಲಿ ಮಾಡಿದರೆ ನಾಳೆ ನಾವು ತಿನ್ನಬೇಕು ಎಂದುಕೊಂಡಾಗ ಇರುವುದಿಲ್ಲ’ ಎಂದು ಧ್ರುವಂತ್ ಮತ್ತು ಅಶ್ವಿನಿ ಹೇಳಿದರು. ಆಗ ರಜತ್, ಮುಚ್ಕೊಂಡು ಅಡ್ಜಸ್ಟ್ ಮಾಡ್ಕೊಳ್ಳಿ ಎಂದರು. ಇದು ಧ್ರುವಂತ್​ಗೆ ಇಷ್ಟವಾಗಲಿಲ್ಲ. ಅವರು ಏರಿದ ದನಿಯಲ್ಲಿ ಜಗಳ ಮಾಡಿ, ಎಲ್ಲವನ್ನೂ ಪ್ರತ್ಯೇಕವಾಗಿ ಇಟ್ಟುಬಿಡಿ, ಅವರವರ ಪಾಲು ಅವರವರಿಗೆ ಕೊಟ್ಟು ಬಿಡಿ ಎಂದರು.

ಇದನ್ನೂ ಓದಿ:‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್ ಎದುರೇ ಧ್ರುವಂತ್-ರಜತ್ ಜಗಳ

ಕಾವ್ಯಾ ನಡುವೆ ಬಂದು, ಈಗಾಗಲೇ ಈರುಳ್ಳಿಯನ್ನು ಕ್ಯಾಪ್ಟನ್ ರೂಮಿನಲ್ಲಿ ಇಟ್ಟಿದ್ದೀರಿ, ಹಾಗೆಯೇ ಇನ್ನು ಮುಂದೆ ಆಲೂಗಡ್ಡೆ, ಟಮೆಟೊ, ಇನ್ನಿತರೆಗಳನ್ನೂ ಸಹ ಎಲ್ಲರಿಗೂ ಪಾಲು ಮಾಡಿಬಿಡುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಧ್ರುವಂತ್ ಸಹ ಹಾಗೆಯೇ ಹೇಳಿದರು. ಬಳಿಕ ಅದಕ್ಕೂ ಕೊಂಕು ತೆಗೆದ ರಜತ್, ಬಿಗ್​ಬಾಸ್​​ಗೆ ಹೇಳಿ ತಕ್ಕಡಿ ತರಿಸಿಕೊಂಡು, ಅಕ್ಕಿಯನ್ನು ಅಳೆದು ಕೊಟ್ಟುಬಿಡೋಣ ಎಂದರು. ಆಗ ಧ್ರುವಂತ್ ಅದು ಸಹ ಸರಿ, ಅದರಲ್ಲಿ ಗಂಜಿ ಮಾಡಿಕೊಂಡು ಕುಡಿಯುತ್ತೇನೆ ನಿಮ್ಮಂಥಹವರಿಂದ ಮಾತು ಕೇಳುವುದಕ್ಕಿಂತಲೂ ಅದು ಲೇಸು’ ಎಂದರು.

ಬಳಿಕ ಅಶ್ವಿನಿ ಹಾಗೂ ರಘು ಅವರಿಗೂ ಸಹ ಇದೇ ವಿಷಯವಾಗಿ ಜೋರಾಗಿ ಜಗಳ ಆಯ್ತು. ಅಡುಗೆ ಮಾಡಿ ಹಾಕಲು ನಮಗೇನು ತೆವಲ? ಎಂದು ರಘು ಹೇಳಿದ ಮಾತು ಅಶ್ವಿನಿಯನ್ನು ಕೆರಳಿಸಿತು. ಆಗಲೂ ಸಹ ಅನವಶ್ಯಕವಾಗಿ ಮಧ್ಯೆ ಸೇರಿಕೊಂಡ ರಜತ್, ಅಲ್ಲಿಯೂ ಸಹ ಅಶ್ವಿನಿ ಜೊತೆ ಜಗಳಕ್ಕೆ ನಿಂತರು. ‘ಅವಳು-ಯಾವಳು’ ಎಂದೆಲ್ಲ ಮಾತನಾಡಿದರು ಸಹ. ಒಟ್ಟಾರೆ ಆಲೂಗಡ್ಡೆಗಾಗಿ ಮನೆಯಲ್ಲಿ ರಣರಂಗವೇ ನಡೆದು ಹೋಯ್ತು.

ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ರೋಡ್​​ಶೋ ವೇಳೆ ಮೀನು  ಹಿಡಿದು ಕುಣಿದ ಪಟಾಕಿ ರಕ್ಷಿತಾ
ರೋಡ್​​ಶೋ ವೇಳೆ ಮೀನು  ಹಿಡಿದು ಕುಣಿದ ಪಟಾಕಿ ರಕ್ಷಿತಾ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
2 ಓವರ್​ಗಳ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಫ್ಘಾನ್ ಸ್ಪಿನ್ನರ್
2 ಓವರ್​ಗಳ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಫ್ಘಾನ್ ಸ್ಪಿನ್ನರ್