
ಬಿಗ್ಬಾಸ್ (Bigg Boss) ಮನೆಯಲ್ಲಿ ಜಗಳಗಳು ಸಾಮಾನ್ಯ. ಜಗಳ ನಡೆಯದ ದಿನಗಳೇ ಇಲ್ಲವೇನೋ ಎಂಬಷ್ಟು ಬಿಗ್ಬಾಸ್ ಮನೆಯಲ್ಲಿ ಜಗಳಗಳು ನಡೆಯುತ್ತವೆ. ಟಾಸ್ಕ್ ಕಾರಣಕ್ಕೆ, ನಾಮಿನೇಷನ್ ಕಾರಣಕ್ಕೆ ಇನ್ನೂ ಏನೇನೋ ಕಾರಣಗಳಿಗೆ ಬಿಗ್ಬಾಸ್ ಮನೆಯಲ್ಲಿ ಜಗಳ ನಡೆದಿವೆ. ಈ ಸೀಸನ್ನಲ್ಲೂ ಅವೆಲ್ಲ ಮುಂದುವರೆದಿವೆ. ಕಳೆದ ಕೆಲ ಸೀಸನ್ಗಳಂತೆ ಈ ವಾರವೂ ಸಹ ಮನೆಯಲ್ಲಿ ಊಟದ ವಿಚಾರವಾಗಿ ಜಗಳ ನಡೆದಿವೆ. ಅದರಲ್ಲೂ ಆಲೂಗಡ್ಡೆಗಾಗಿ ಈ ವಾರ ಜೋರು ಜಗಳ ನಡೆದಿದೆ.
ರಘು, ಸೂರಜ್ ಇನ್ನೂ ಕೆಲವರು ಈ ವಾರ ಅಡುಗೆ ಮನೆ ಕೆಲಸ ವಹಿಸಿಕೊಂಡಿದ್ದರು. ಧ್ರುವಂತ್ ಮತ್ತು ಅಶ್ವಿನಿ ಅವರು ಪ್ರತ್ಯೇಕವಾಗಿ ತಾವು ಬೇರೆ ಮಾಡಿಕೊಳ್ಳುವುದಾಗಿ ಹೇಳಿ ಅದಕ್ಕಾಗಿ ಹಿಟ್ಟು ಇನ್ನಿತರೆಗಳನ್ನು ಕೇಳಿದರು. ಆದರೆ ಅಡುಗೆ ಮಾಡುತ್ತಿದ್ದ ರಘುಗೆ ಇದು ಸರಿ ಹೋಗಲಿಲ್ಲ. ಆಗ ರಘು ಮತ್ತು ಧ್ರುವಂತ್ ಪರಸ್ಪರ ವಾಗ್ವಾದ ಮಾಡಿದರು. ಆದರೆ ಯಾವಾಗ ಈ ಜಗಳಕ್ಕೆ ರಜತ್ ಎಂಟ್ರಿ ಆಯ್ತೋ ಜಗಳ ತೀರ ಹೆಚ್ಚಾಯ್ತು.
ಅದರಲ್ಲೂ ಆಲುಗಡ್ಡೆಯ ವಿಚಾರವಾಗಿ ಜಗಳ ಜೋರಾಗಿ ನಡೆಯಿತು. ನೀವು ಇಂದು ಆಲೂಗಡ್ಡೆ ತಿಂದು ಖಾಲಿ ಮಾಡಿದರೆ ನಾಳೆ ನಾವು ತಿನ್ನಬೇಕು ಎಂದುಕೊಂಡಾಗ ಇರುವುದಿಲ್ಲ’ ಎಂದು ಧ್ರುವಂತ್ ಮತ್ತು ಅಶ್ವಿನಿ ಹೇಳಿದರು. ಆಗ ರಜತ್, ಮುಚ್ಕೊಂಡು ಅಡ್ಜಸ್ಟ್ ಮಾಡ್ಕೊಳ್ಳಿ ಎಂದರು. ಇದು ಧ್ರುವಂತ್ಗೆ ಇಷ್ಟವಾಗಲಿಲ್ಲ. ಅವರು ಏರಿದ ದನಿಯಲ್ಲಿ ಜಗಳ ಮಾಡಿ, ಎಲ್ಲವನ್ನೂ ಪ್ರತ್ಯೇಕವಾಗಿ ಇಟ್ಟುಬಿಡಿ, ಅವರವರ ಪಾಲು ಅವರವರಿಗೆ ಕೊಟ್ಟು ಬಿಡಿ ಎಂದರು.
ಇದನ್ನೂ ಓದಿ:‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್ ಎದುರೇ ಧ್ರುವಂತ್-ರಜತ್ ಜಗಳ
ಕಾವ್ಯಾ ನಡುವೆ ಬಂದು, ಈಗಾಗಲೇ ಈರುಳ್ಳಿಯನ್ನು ಕ್ಯಾಪ್ಟನ್ ರೂಮಿನಲ್ಲಿ ಇಟ್ಟಿದ್ದೀರಿ, ಹಾಗೆಯೇ ಇನ್ನು ಮುಂದೆ ಆಲೂಗಡ್ಡೆ, ಟಮೆಟೊ, ಇನ್ನಿತರೆಗಳನ್ನೂ ಸಹ ಎಲ್ಲರಿಗೂ ಪಾಲು ಮಾಡಿಬಿಡುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಧ್ರುವಂತ್ ಸಹ ಹಾಗೆಯೇ ಹೇಳಿದರು. ಬಳಿಕ ಅದಕ್ಕೂ ಕೊಂಕು ತೆಗೆದ ರಜತ್, ಬಿಗ್ಬಾಸ್ಗೆ ಹೇಳಿ ತಕ್ಕಡಿ ತರಿಸಿಕೊಂಡು, ಅಕ್ಕಿಯನ್ನು ಅಳೆದು ಕೊಟ್ಟುಬಿಡೋಣ ಎಂದರು. ಆಗ ಧ್ರುವಂತ್ ಅದು ಸಹ ಸರಿ, ಅದರಲ್ಲಿ ಗಂಜಿ ಮಾಡಿಕೊಂಡು ಕುಡಿಯುತ್ತೇನೆ ನಿಮ್ಮಂಥಹವರಿಂದ ಮಾತು ಕೇಳುವುದಕ್ಕಿಂತಲೂ ಅದು ಲೇಸು’ ಎಂದರು.
ಬಳಿಕ ಅಶ್ವಿನಿ ಹಾಗೂ ರಘು ಅವರಿಗೂ ಸಹ ಇದೇ ವಿಷಯವಾಗಿ ಜೋರಾಗಿ ಜಗಳ ಆಯ್ತು. ಅಡುಗೆ ಮಾಡಿ ಹಾಕಲು ನಮಗೇನು ತೆವಲ? ಎಂದು ರಘು ಹೇಳಿದ ಮಾತು ಅಶ್ವಿನಿಯನ್ನು ಕೆರಳಿಸಿತು. ಆಗಲೂ ಸಹ ಅನವಶ್ಯಕವಾಗಿ ಮಧ್ಯೆ ಸೇರಿಕೊಂಡ ರಜತ್, ಅಲ್ಲಿಯೂ ಸಹ ಅಶ್ವಿನಿ ಜೊತೆ ಜಗಳಕ್ಕೆ ನಿಂತರು. ‘ಅವಳು-ಯಾವಳು’ ಎಂದೆಲ್ಲ ಮಾತನಾಡಿದರು ಸಹ. ಒಟ್ಟಾರೆ ಆಲೂಗಡ್ಡೆಗಾಗಿ ಮನೆಯಲ್ಲಿ ರಣರಂಗವೇ ನಡೆದು ಹೋಯ್ತು.
ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ