ಬಿಗ್ ಬಾಸ್ ಮನೆಯಲ್ಲಿ ನಾಲ್ಕನೇ ವಾರದ ಎಲಿಮಿನೇಷನ್ ಪೂರ್ಣಗೊಂಡಿದೆ. ಮನೆಯಲ್ಲಿರುವ 14 ಸದಸ್ಯರ ಪೈಕಿ 13 ಜನ ಎಲಿಮಿನೇಷ ಆಗಿದ್ದರು. ಈ ಪೈಕಿ ಚಂದ್ರಕಲಾ ಮೋಹನ್ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ನಾಲ್ಕನೇ ಸ್ಪರ್ಧಿಯಾಗಿ ಅವರು ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.
ಎಲಿಮಿನೆಷನ್ಗೆ ನಾಮಿನೇಟ್ ಮಾಡಲು ಪ್ರತಿ ಬಾರಿ ಸ್ಪರ್ಧಿಗಳಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಈ ಅವಕಾಶವನ್ನು ಬಿಗ್ ಬಾಸ್ ಕಿತ್ತುಕೊಂಡಿದ್ದರು. ಕ್ಯಾಪ್ಟನ್ ಆಗಿದ್ದ ಅರವಿಂದ್ ಕೆ.ಪಿ. ಅವರನ್ನು ಹೊರತುಪಡಿಸಿ ಉಳಿದ 13 ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದರು. ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಚಂದ್ರಕಲಾ, ವೈಷ್ಣವಿ, ಶುಭಾ ಪೂಂಜಾ, ಪ್ರಶಾಂತ್ ಸಂಬರಗಿ, ರಾಜೀವ್, ಮಂಜು ಪಾವಗಡ, ವಿಶ್ವ, ರಘು ಗೌಡ, ಶಮಂತ್ ಬ್ರೋ ಗೌಡ, ಶಂಕರ್ ಅಶ್ವತ್ಥ್ ಡೇಂಜರ್ ಜೋನ್ನಲ್ಲಿದ್ದರು.
ಮಂಜು ಪಾವಗಡ. ದಿವ್ಯಾ ಉರುಡುಗ, ಶುಭಾ, ನಿಧಿ, ವೈಷ್ಣವಿ, ದಿವ್ಯಾ ಸುರೇಶ್, ರಘು, ರಾಜೀವ್ ಶನಿವಾರವೇ ಸೇಫ್ ಆಗಿದ್ದರು. ಭಾನುವಾರ ಪ್ರಶಾಂತ್ ಸಂಬರಗಿ, ವಿಶ್ವ, ಶಮಂತ್ ಬ್ರೋ ಗೌಡ, ಶಂಕರ್ ಅಶ್ವತ್ಥ್ ಸೇಫ್ ಆದರು, ನಂತರ ಚಂದ್ರಕಲಾ ಬಿಗ್ ಬಾಸ್ ಮನೆಯಿಂದ ಹೊರ ಬಂದರು.
ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಚಂದ್ರಕಲಾ ಮೋಹನ್ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎರಡನೇ ಹಿರಿಯ ಸ್ಪರ್ಧಿ ಆಗಿದ್ದರು. ಚಂದ್ರಕಲಾ ಯಾರ ಜತೆಯೂ ಬೆರೆಯುತ್ತಿರಲಿಲ್ಲ. ಹೀಗಾಗಿ, ಅವರು ಮನೆಯವರ ಜತೆ ಹೆಚ್ಚು ಕನೆಕ್ಟ್ ಆಗಿಲ್ಲ. ಈ ಕಾರಣಕ್ಕೆ ಅವರಿಗೆ ಕಡಿಮೆ ಮತ ಬಿದ್ದಿದೆ.
ಇದನ್ನೂ ಓದಿ: Bigg Boss Elimination: ಬಿಗ್ ಬಾಸ್ನಿಂದ ಹೊರಬಿದ್ದ ಚಂದ್ರಕಲಾ ಮೋಹನ್? ಎಲಿಮಿನೇಷನ್ಗೆ ಆ ಒಂದು ವರ್ತನೆಯೇ ಕಾರಣ