AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss 8: ರಾಜೀವ್​ ವಿರುದ್ಧ ಮನೆಯವರು ಹೊರಿಸಿದ ಈ ಆರೋಪವನ್ನು ಕಿಚ್ಚ ಸುದೀಪ್​ ಕೂಡ ಒಪ್ಪಿಕೊಂಡ್ರು!

Bigg Boss Rajeev: ಬಿಗ್​ ಬಾಸ್​ನಲ್ಲಿ ವೀಕೆಂಡ್​ ವೇಳೆ ಒಂದು ಚರ್ಚೆ ನಡೆದಿತ್ತು. ಈ ವೇಳೆ ಮನೆ ಮಂದಿಯೆಲ್ಲ ರಾಜೀವ್​ ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದರು. ಇದನ್ನು ರಾಜೀವ್​ ಮಾತ್ರ ಒಪ್ಪಿಕೊಂಡಿಲ್ಲ!

Bigg Boss 8: ರಾಜೀವ್​ ವಿರುದ್ಧ ಮನೆಯವರು ಹೊರಿಸಿದ ಈ ಆರೋಪವನ್ನು ಕಿಚ್ಚ ಸುದೀಪ್​ ಕೂಡ ಒಪ್ಪಿಕೊಂಡ್ರು!
ಬಿಗ್​ ಬಾಸ್​ ಮನೆಯಲ್ಲಿ ರಾಜೀವ್​
ರಾಜೇಶ್ ದುಗ್ಗುಮನೆ
| Edited By: |

Updated on:Mar 29, 2021 | 11:15 AM

Share

ಬಿಗ್​ ಬಾಸ್​ ಮನೆಯಲ್ಲಿ ರಾಜೀವ್​ ಬೆಳಗ್ಗೆ ಬೇಗ ಏಳುತ್ತಾರೆ. ಅಷ್ಟೇ ಅಲ್ಲ, ಫಿಟ್​ನೆಸ್​ಗೆ ಅವರು ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ. ಬೆಳಗೆದ್ದು ಡಂಬೆಲ್ಸ್​ ಎತ್ತುತ್ತಾರೆ. ಬಿಗ್​ ಬಾಸ್​ ಮನೆಯಲ್ಲೇ ಸಣ್ಣ ಜಿಮ್​ ಓಪನ್​ ಮಾಡಿಕೊಂಡಿದ್ದಾರೆ. ಹೀಗಿರುವಾಗಲೇ ಅವರ ವಿರುದ್ಧ ಒಂದು ದೊಡ್ಡ ಆರೋಪ ಒಂದು ಕೇಳಿ ಬಂದಿದೆ! ಬಿಗ್​ ಬಾಸ್​ ಮನೆಯಲ್ಲಿ ರಾಜೀವ್​​ ಬಾಡಿ ತೋರಿಸಿಕೊಂಡು ಓಡಾಡುತ್ತಾರಂತೆ. ಬಿಗ್​ ಬಾಸ್​ನಲ್ಲಿ ವೀಕೆಂಡ್​ ವೇಳೆ ಒಂದು ಚರ್ಚೆ ನಡೆದಿತ್ತು. ರಾಜೀವ್​ ಶೋ ಆಫ್​ ಮಾಡೋಕೆ ಶರ್ಟ್​ಲೆಸ್​ ಆಗಿ ಓಡಾಡುತ್ತಾರೆ ಎಂದು ಮನೆ ಮಂದಿಯೆಲ್ಲ ಆರೋಪ ಮಾಡಿದರು. ಇದನ್ನು ರಾಜೀವ್​ ಮಾತ್ರ ಒಪ್ಪಿಕೊಂಡಿಲ್ಲ! ಆದರೆ, ಮನೆ ಮಂದಿಯೆಲ್ಲ ಹೌದು ಎಂದರು!

ಮೊನ್ನೆ ಟಾಸ್ಕ್​ ನಡೆಯುತ್ತಿತ್ತು. ಈ ವೇಳೆ ರಾಜೀವ್​ ಶರ್ಟ್​ ತೆಗೆದು ಸ್ಲೀವ್​ಲೆಸ್​ ಡ್ರೆಸ್​ ಹಾಕಿಕೊಂಡು ಬಂದಿದ್ದರು. ಇವರೇಕೆ ಡ್ರೆಸ್​ ಬದಲಾಯಿಸಿಕೊಂಡು ಬಂದರು ಎಂಬುದು ನಂಗೆ ಗೊತ್ತಾಗಿಲ್ಲ. ಆಮೇಲೆ ಗೊತ್ತಾಗಿದ್ದು ಅವರಿಗೆ ಬೈಸೆಪ್ಸ್​ ತೋರಿಸಬೇಕು ಎಂದಿತ್ತು! ಈ ಕಾರಣಕ್ಕೆ ಅವರು ಡ್ರೆಸ್​ ಬದಲಾಯಿಸಿಕೊಂಡು ಬಂದಿದ್ದರು ಎಂದರು ನಿಧಿ.

ಇಷ್ಟೇ ಅಲ್ಲ, ರಘು ಕೂಡ ಇದೇ ರೀತಿಯ ಆರೋಪ ಮಾಡಿದರು. ರಾಜೀವ್ ನೀರು ಕುಡಿಯುವಾಗ ಕೈಯನ್ನು ಎತ್ತಿ ತೋರಿಸುತ್ತಾರೆ. ಈ ಮೂಲಕ ಅವರು ಬೈಸೆಪ್ಸ್​  ಇದೆ ಎಂದು ತೋರಿಸೋ ಪ್ರಯತ್ನ ಮಾಡುತ್ತಾರೆ ಎಂದರು. ಅಷ್ಟೇ ಅಲ್ಲ, ಪಪ್ಪಾಯ ಕಟ್ ಮಾಡುವಾಗಲೂ ಹೀಗೆ ಮಾಡಲಾಗುತ್ತದೆ ಎನ್ನುವ ಆರೋಪ ಕೇಳಿ ಬಂತು.

ಇನ್ನು, ಮಂಜು ಕೂಡ ಇದೇ ಆರೋಪ ಮಾಡಿದರು. ಅವರು ನಿತ್ಯ ನನ್ನ ಬಳಿ ಬಂದು ಅವರ ತೊಡೆಯ ಮಸಲ್ಸ್​ ಬಗ್ಗೆ ಮಾತನಾಡುತ್ತಾರೆ. ತಮ್ಮ ತೊಡೆ ಹಾಗಾಗಿದೆ ಹೀಗಾಗಿದೆ ಎನ್ನುತ್ತಿರುತ್ತಾರೆ ಎಂದರು. ಈ ಎಲ್ಲಾ ವಿಚಾರಗಳನ್ನು ಕೇಳಿಸಿಕೊಂಡ ಕಿಚ್ಚ ಸುದೀಪ್,​ ‘ನಾನು ಕೂಡ ಒಪ್ಪಿಕೊಳ್ಳುತ್ತೇನೆ’ ಎಂದರು.

ಇದನ್ನೂ ಓದಿ: BBK8 Elimination: ಬಿಗ್​ ಬಾಸ್​ ಮನೆಯಿಂದ ಚಂದ್ರಕಲಾ ಮೋಹನ್ ಎಲಿಮಿನೇಟ್​

ಒಂದು ವಾರ ಅರವಿಂದ್ ಜತೆ ಮಾತಾಡ್ಬಾರದು; ದಿವ್ಯಾ ಉರುಡುಗಗೆ ಸುದೀಪ್​ ಹೊಸ ಕಂಡೀಷನ್​!

Published On - 7:19 am, Mon, 29 March 21

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?