ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ

ಈ ವಾರ ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ಅರವಿಂದ್ ಕೆಪಿ, ಶಮಂತ್​ ಬ್ರೋ ಗೌಡ, ಶಂಕರ್​ ಅಶ್ವತ್ಥ್​, ಪ್ರಶಾಂತ್​ ಸಂಬರಗಿ ನಾಮಿನೇಟ್​ ಲಿಸ್ಟ್​ನಲ್ಲಿದ್ದಾರೆ.

ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ
ಸುದೀಪ್​

Updated on: Apr 04, 2021 | 6:06 PM

ಐದನೇ ವಾರ ಬಿಗ್​ ಬಾಸ್​ ಮನೆಯಿಂದ ಓರ್ವ ಸದಸ್ಯ ಹೊರ ಹೋಗುವ ಸಮಯ ಸಮೀಪಿಸಿದೆ. ಭಾನುವಾರ (ಏಪ್ರಿಲ್ 4) ನಡೆಯುವ ಎಲಿಮಿನೇಷನ್​ನಲ್ಲಿ 14 ಸದಸ್ಯರ ಪೈಕಿ ಒಬ್ಬರ ಜರ್ನಿ ಅಂತ್ಯವಾಗಲಿದೆ. ಹಾಗಾದರೆ, ಈ ವಾರ ಯಾರು ಮನೆಯಿಂದ ಎಲಿಮಿನೇಟ್​ ಆಗುತ್ತಾರೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮನೆಯ ಹಿರಿಯ ಸ್ಪರ್ಧಿ ಶಂಕರ್​ ಅಶ್ವತ್ಥ್​ಗೆ ಅತಿ ಹೆಚ್ಚು ಮತಗಳು ಬೀಳುವ ಮೂಲಕ ಅವರು ಮೊದಲು ನಾಮಿನೇಟ್​ ಆಗಿದ್ದರು. ಅವರು ಅಷ್ಟಾಗಿ ಮಾತನಾಡುತ್ತಿಲ್ಲ, ಟಾಸ್ಕ್​ ಚೆನ್ನಾಗಿ ಆಡ್ತಾರೆ ಆದರೆ, ಜಾಸ್ತಿ ಬೆರೆಯುವುದಿಲ್ಲ, ನಾಟಕ ಮಾಡುತ್ತಾರೆ, ಅವರ ಆರೋಗ್ಯ ಸರಿಯಿಲ್ಲ ಎನ್ನುವ ಕಾರಣ ನೀಡಿ ಮನೆ ಮಂದಿ ಅವರ ಹೆಸರನ್ನು ತೆಗೆದುಕೊಂಡಿದ್ದರು. ಶಮಂತ್​ ಕೂಡ ಈ ವಾರ ನಾಮಿನೇಟ್​ ಆಗಿದ್ದರು. ಅವರು ಎಲ್ಲರೊಡನೆ ಬೆರೆಯುತ್ತಿಲ್ಲ ಎನ್ನುವ ಆರೋಪವನ್ನು ಮಾಡಿದರು. ಪ್ರಶಾಂತ್​ ಸಂಬರಗಿ ಎಲ್ಲರ ಜತೆ ಮನಸ್ತಾಪ ಮಾಡಿಕೊಳ್ಳುತ್ತಾರೆ, ಅವರು ಕೆಲಸ ಮಾಡುವುದಿಲ್ಲ, ಬಿಗ್​ ಬಾಸ್​ ಮನೆಗೆ ಮುಳ್ಳು ಎನ್ನುವ ಆರೋಪವನ್ನು ಮನೆ ಮಂದಿ ಮಾಡಿದ್ದರು. ಮನೆಯ ಸ್ಟ್ರಾಂಗ್​ ಕಂಟೆಸ್ಟೆಂಟ್​ ಎನಿಸಿರುವ ಅರವಿಂದ್​ ಕೆಪಿ ಮೇಲೂ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿದೆ. ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಕೂಡ ಬಿಗ್​ ಬಾಸ್​ ಮನೆಯಲ್ಲಿ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದಾರೆ.

ಹೀಗಾಗಿ ಈ ವಾರ ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ಅರವಿಂದ್ ಕೆಪಿ, ಶಮಂತ್​ ಬ್ರೋ ಗೌಡ, ಶಂಕರ್​ ಅಶ್ವತ್ಥ್​, ಪ್ರಶಾಂತ್​ ಸಂಬರಗಿ ನಾಮಿನೇಟ್​ ಲಿಸ್ಟ್​ನಲ್ಲಿದ್ದಾರೆ. ಪ್ರಶಾಂತ್​ ಸಂಬರಗಿ, ಅರವಿಂದ್ ಕೆಪಿ ಮನೆಯಲ್ಲಿರುವ ಸ್ಟ್ರಾಂಗ್ ಕಂಟೆಸ್ಟೆಂಟ್​ಗಳು. ಇವರು ಆಟದಲ್ಲಿ ನೂರಕ್ಕೆ ನೂರು ಪರ್ಸೆಂಟ್ ಎಫರ್ಟ್​ ಹಾಕುತ್ತಿದ್ದಾರೆ. ಶುಭಾ, ನಿಧಿ ಕೂಡ ಮನೆಯಲ್ಲಿ ಒಳ್ಳೆಯ ಟಿಆರ್​ಪಿ ಹೊಂದಿದ್ದಾರೆ. ಹೀಗಾಗಿ ಈ ನಾಲ್ವರು ಸೇಫ್​ ಆಗೋದು ಬಹುತೇಕ ಖಚಿತ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

ಇನ್ನು ಉಳಿದವರು ಶಮಂತ್​ ಹಾಗೂ ಶಂಕರ್​ ಅಶ್ವತ್ಥ್​. ಈ ಬಾರಿ ಇಬ್ಬರೂ ಟಾಸ್ಕ್​ಗಳಲ್ಲಿ ಅಷ್ಟಾಗಿ ಉತ್ತಮ ಕಾಂಪಿಟೇಷನ್​ ನೀಡಿಲ್ಲ. ಶಂಕರ್​ ಅಶ್ವತ್ಥ್​ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಅವರದೇ ತಂಡದವರು ಬೇಸರ ಹೊರ ಹಾಕಿದ್ದರು. ಹೀಗಾಗಿ, ಈ ವಾರ ಶಮಂತ್​ ಜಸ್ಟ್​ ಸೇಫ್​ ಆಗಿದ್ದು, ಶಂಕರ್​ ಮನೆಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Bigg Boss Kannada: ದಿವ್ಯಾ ಎದುರಲ್ಲೇ ಕಳಚಿತು ಬಿಗ್ ಬಾಸ್ ಸ್ಪರ್ಧಿಗಳ ಮುಖವಾಡ! ಇವರೆಲ್ಲ ಮಾಡಿದ್ದು ಸರಿಯೇ?

ವೈಲ್ಡ್​ ಕಾರ್ಡ್​ ಎಂಟ್ರಿ ಬೇಡ; ಬಿಗ್​ ಬಾಸ್​ ಮನೆಯಲ್ಲಿ ಹೊಸ ಬೇಡಿಕೆ ಇಟ್ಟ ಸ್ಪರ್ಧಿಗಳು

Published On - 3:19 pm, Sat, 3 April 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us