ಚಪಾತಿ ವಿಷ್ಯಕ್ಕೆ ಜಗಳ; ಬಿಗ್ ಬಾಸ್ ಕಿಚನ್​ನಲ್ಲಿ ಕಿಚ್ಚು ಹತ್ತಿಸಿದ್ದು ಯಾರು?

| Updated By: ganapathi bhat

Updated on: Apr 05, 2022 | 12:45 PM

ಬಿಗ್ ಬಾಸ್ ಮನೆಯಲ್ಲಿ ಕಿಚನ್ ಒಂದು ಹಾಟ್ ಸ್ಪಾಟ್. ಕೆಲಸ ಮಾಡೋದು ಯಾರು? ಹೆಚ್ಚು ತಿನ್ನೋದು ಯಾರು? ಇತ್ಯಾದಿ ವಿಚಾರಗಳ ಬಗ್ಗೆ ಅಲ್ಲಿ ಚರ್ಚೆ-ವಾಗ್ವಾದಗಳು ಸಾಮಾನ್ಯ. ಬಿಗ್ ಬಾಸ್ ಸೂಚಿಸಿದ ನಿಯಮದಂತೆಯೇ ತಿನ್ನಬೇಕು. ಅಷ್ಟೂ ಜನ ಹೊಂದಿಕೊಂಡು ಇರಬೇಕು ಅನ್ನೋದು ಮತ್ತೂ ಸವಾಲಿನ ಸಂಗತಿ.

ಚಪಾತಿ ವಿಷ್ಯಕ್ಕೆ ಜಗಳ; ಬಿಗ್ ಬಾಸ್ ಕಿಚನ್​ನಲ್ಲಿ ಕಿಚ್ಚು ಹತ್ತಿಸಿದ್ದು ಯಾರು?
ಪ್ರಶಾಂತ್ ಸಂಬರಗಿ-ವೈಷ್ಣವಿ
Follow us on

ಬಿಗ್ ಬಾಸ್ ಮನೆಯಲ್ಲಿ ಎಷ್ಟು ಅನ್ಯೋನ್ಯತೆ ಇರುತ್ತದೋ ಅದಕ್ಕಿಂತ ಹೆಚ್ಚು ಗೇಮ್ ಪ್ಲಾನ್ ಇರುತ್ತೆ ಅನ್ನೋದು ದೊಡ್ಮನೆ ಅಭಿಮಾನಿಗಳ ಅಭಿಪ್ರಾಯ. ಅದಕ್ಕೇ ಅಲ್ಲಿ ಜಗಳವೂ ಹೆಚ್ಚು. ಟಾಸ್ಕ್, ಸೋಲು, ಗೆಲುವುಗಳ ನಡುವೆ ಎಲ್ಲರೂ ಪೈಪೋಟಿಗೆ ಬಿದ್ದಿರುತ್ತಾರೆ. ಆಗಾಗ ಒಬ್ಬರ ಮೇಲೊಬ್ಬರು ಆರೋಪ ಹೊರಿಸುವುದು, ಗಲಾಟೆ, ಗದ್ದಲ ಮಾಡುವುದು ಆಗುತ್ತಿರುತ್ತದೆ. ಇಂದಿನ ಸಂಚಿಕೆಯಲ್ಲೂ ಅಂಥದ್ದೊಂದು ಜಗಳ ಆಗಿದೆ ಎಂದು ವಾಹಿನಿ ಹಂಚಿಕೊಂಡಿರುವ ಪ್ರೋಮೋ ಮೂಲಕ ತಿಳಿದುಬಂದಿದೆ.

ಬಿಗ್ ಬಾಸ್ ಮನೆಯಲ್ಲಿ ಕಿಚನ್ ಒಂದು ಹಾಟ್ ಸ್ಪಾಟ್. ಕೆಲಸ ಮಾಡೋದು ಯಾರು? ಹೆಚ್ಚು ತಿನ್ನೋದು ಯಾರು? ಇತ್ಯಾದಿ ವಿಚಾರಗಳ ಬಗ್ಗೆ ಅಲ್ಲಿ ಚರ್ಚೆ-ವಾಗ್ವಾದಗಳು ಸಾಮಾನ್ಯ. ಬಿಗ್ ಬಾಸ್ ಸೂಚಿಸಿದ ನಿಯಮದಂತೆಯೇ ತಿನ್ನಬೇಕು. ಅಷ್ಟೂ ಜನ ಹೊಂದಿಕೊಂಡು ಇರಬೇಕು ಅನ್ನೋದು ಮತ್ತೂ ಸವಾಲಿನ ಸಂಗತಿ. ಈ ನಡುವೆ ಇಂದು ಕಿಚನ್​ನಲ್ಲಿ ಕಿಚ್ಚು ಹತ್ತಿಕೊಂಡಿದೆ ಎಂದು ಸುಳುಹು ಸಿಕ್ಕಿದೆ.

ಪ್ರಶಾಂತ್ ಸಂಬರಗಿ ಮತ್ತು ಬ್ರೋ ಗೌಡ ಕಿಚನ್​ನಲ್ಲಿ ಚಪಾತಿ ತಿನ್ನುತ್ತಿದ್ದರು. ಚಹಾ ಜೊತೆಗೆ ಚಪಾತಿ ತಿನ್ನುತ್ತಿದ್ದಾರೆ ಎಂದು ಆರಂಭದ ಅಸ್ಪಷ್ಟ ಸಂಭಾಷಣೆ ಕೇಳಿದರೆ ತಿಳಿದುಬರುತ್ತದೆ. ಹಾಗೇ ಅವರಿಬ್ಬರು ತಿನ್ನುತ್ತಾ, ಮಾತನಾಡುತ್ತಾ ಇರುವಂತೆ ಆ ಕಡೆಯಿಂದ ರಾಜೀವ್ ಅವರನ್ನು ತಡೆದಿದ್ದಾರೆ. ವೈಷ್ಣವಿ ಕೂಡ ಪ್ರಶಾಂತ್ ಸಂಬರಗಿ, ಬ್ರೋ ಗೌಡ ವಿಚಾರಕ್ಕೆ ಆಕ್ಷೇಪಿಸಿದಂತೆ ಕಾಣುತ್ತಿದೆ.

ಎಲ್ಲರಿಗೂ ಊಟ ಮಾಡ್ಬೇಕಾಗುತ್ತೆ. ಎಲ್ಲಾರ್ಗೂ ಹೊಟ್ಟೆ ಇದೆ. ಎಲ್ಲರಿಗೂ ಸಮಾನವಾಗಿ ಊಟ ಸಿಗಬೇಕು ಎಂದು ವೈಷ್ಣವಿ ವೈಲೆಂಟ್ ಆಗಿದ್ದಾರೆ. ಆ ಬಳಿಕ ರಾಜೀವ್, ಪ್ರಶಾಂತ್ ನಿಂಗೆ ಹೊಟ್ಟೆ ಹಸಿವಾಗ್ತಿದ್ಯಾ ಎಂದು ಕೇಳಿದ್ದಾರೆ. ಅದಕ್ಕೆ ಪ್ರಶಾಂತ್ ಸಂಬರಗಿ, ಇಲ್ಲಪ್ಪಾ ನಾನ್ ಟೀ ಕುಡಿತಾ ಇದ್ದೀನಿ ಎಂದು ಉತ್ತರಿಸಿದ್ದಾರೆ.

ರಾಜೀವ್ ಮುಂದುವರಿದು, ಎಲ್ಲರೂ ತಿಂತಾ ಇರೋದಾ? ಒಂದ್ ಸೆನ್ಸ್ ಬೇಡ್ವಾ ಎಂದು ಕೇಳಿದ್ದಾರೆ. ಈ ಮಾತಿಗೆ ಸಂಬರಗಿ ರಾಂಗ್ ಆದಂತೆ ಕಂಡುಬಂದಿದ್ದಾರೆ. ಮಂಜು ಪಾವಗಡ ಕೂಡ ಸಂಬರಗಿಗೆ ಪ್ರಶ್ನೆ ಮಾಡಿರುವುದು ಕೇಳಿಬಂದಿದೆ. ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ ಏನಾಗಿದೆ ಎಂದು ಸರಿಯಾಗಿ ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ: ಬೇರೆ ಬೇರೆ ತಂಡದಲ್ಲಿದ್ರೂ ದಿವ್ಯಾ-ದಿವ್ಯಾ ಹೊಸ ಗೇಮ್ ಪ್ಲಾನ್; ರೋಲ್ ಮಾಡೆಲ್ ಆಗೋ ಆಸೆಯಲ್ಲಿ ದಿವ್ಯಾ ಉರುಡುಗ

ಇದನ್ನೂ ಓದಿ: Viral Video: ಅಭಿಮಾನಿಯ ಫೋನ್ ಕಿತ್ತುಕೊಂಡ ನಟ ಅಜಿತ್; ಚುನಾವಣಾ ಮತಗಟ್ಟೆಯಲ್ಲಿ ನಡೆದಿದ್ದೇನು?

(Bigg Boss Kannada 8 Kitchen Fight between Prashanth Sambargi Vaishnavi Gowda Rajeev Manju Pavagada)

Published On - 9:38 pm, Tue, 6 April 21