Divya Uruduga: ಬಿಗ್​ ಬಾಸ್ ಟ್ರೋಫಿ ಅಥವಾ ದಿವ್ಯಾ ಉರುಡುಗ; ಇದರಲ್ಲಿ ಅರವಿಂದ್​ ಆಯ್ಕೆ ಯಾವುದು? ಹೊರಬಿತ್ತು ಅಚ್ಚರಿಯ ಉತ್ತರ

Bigg Boss Kannada: ಅರವಿಂದ್​ ಕೆಪಿ ಅವರಿಗೆ ಪ್ರೇಕ್ಷಕರು ಹಲವು ಪ್ರಶ್ನೆಗಳನ್ನು ಕೇಳಿದರು. ದಿವ್ಯಾ ಉರುಡುಗ ಅಥವಾ ಬಿಗ್​ ಬಾಸ್​ ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಅವರಿಗೆ ಕೇಳಲಾಯಿತು. ಅದಕ್ಕೆ ಅವರು ತುಂಬ ಜಾಣತನದ ಉತ್ತರ ನೀಡಿದರು.

Divya Uruduga: ಬಿಗ್​ ಬಾಸ್ ಟ್ರೋಫಿ ಅಥವಾ ದಿವ್ಯಾ ಉರುಡುಗ; ಇದರಲ್ಲಿ ಅರವಿಂದ್​ ಆಯ್ಕೆ ಯಾವುದು? ಹೊರಬಿತ್ತು ಅಚ್ಚರಿಯ ಉತ್ತರ
ಅರವಿಂದ್​ ಕೆಪಿ - ದಿವ್ಯಾ ಉರುಡುಗ
Edited By:

Updated on: May 13, 2021 | 11:38 AM

ಹತ್ತು ವಾರಗಳ ಕಾಲ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದ ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಕೊರೊನಾ ಕಾರಣದಿಂದ ಅಂತ್ಯ ಕಂಡಿತು. ಅನಿರೀಕ್ಷಿತವಾಗಿ ಈ ರಿಲಿಯಾಟಿ ಶೋ ಕೊನೆಯಾಗುವಾಗ ಮನೆಯಲ್ಲಿ 11 ಜನ ಸ್ಪರ್ಧಿಗಳಿದ್ದರು. ಅದಕ್ಕೂ ಮುನ್ನವೇ ದಿವ್ಯಾ ಉರುಡುಗ ಅವರು ಅನಾರೋಗ್ಯದ ಕಾರಣದಿಂದ ಹೊರಬಂದಿದ್ದರು. ದಿವ್ಯಾ ನಿರ್ಗಮನದ ಬಳಿಕ, ಅವರನ್ನು ತುಂಬ ಹಚ್ಚಿಕೊಂಡಿದ್ದ ಅರವಿಂದ್​ ಕೆಪಿ ಕೊಂಚ ಡಲ್​ ಆದಂತೆ ಕಂಡರು. ಈಗ ಅವರು ಕೂಡ ಮನೆಯಿಂದ ಹೊರಬಂದಿದ್ದು, ದಿವ್ಯಾ ಬಗ್ಗೆ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಲೈವ್​ ಬಂದಿದ್ದ ಅರವಿಂದ್​ ಅವರಿಗೆ ಪ್ರೇಕ್ಷಕರು ಹಲವು ಪ್ರಶ್ನೆಗಳನ್ನು ಕೇಳಿದರು. ಅದರಲ್ಲಿ ದಿವ್ಯಾ ಉರುಡುಗ ಬಗ್ಗೆಯೂ ಪ್ರಶ್ನೆ ಎದುರಾಯಿತು. ದಿವ್ಯಾ ಉರುಡುಗ ಅಥವಾ ಬಿಗ್​ ಬಾಸ್​ ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಅರವಿಂದ್​ಗೆ ಕೇಳಲಾಯಿತು. ಅದಕ್ಕೆ ಅವರು ತುಂಬ ಜಾಣತನದ ಉತ್ತರ ನೀಡಿದರು.

‘ದಿವ್ಯಾ ಉರುಡುಗ ಈಗಾಗಲೇ ನನ್ನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಮತ್ತೆ ನಾನು ಅವರನ್ನು ಆಯ್ಕೆ ಮಾಡಬೇಕಾಗಿಲ್ಲ. ನನ್ನ ಆಯ್ಕೆ ಬಿಗ್​ ಬಾಸ್​ ಆಗಿರುತ್ತದೆ. ಅಲ್ಲಿ ಎಲ್ಲರೂ ಬಂದಿದ್ದು ಕೂಡ ಬಿಗ್​ ಬಾಸ್​ ಗೆಲ್ಲೋದಕ್ಕೆ. ಅಲ್ಲಿ ಯಾರನ್ನೂ ಫ್ರೆಂಡ್ಸ್​ ಮಾಡಿಕೊಳ್ಳೋಕೆ ಅಲ್ಲ ಅಂತಾನೇ ನಾನು ಒಳಗಡೆ ಹೋಗಿದ್ದು. ಆಟ ಆಡುವಾಗ ಅದು ನಿಮಗೆ ಗೊತ್ತಾಗುತ್ತದೆ. ಆದರೆ ದಿವ್ಯಾ ಉರುಡುಗ ನನ್ನನ್ನು ಆಯ್ಕೆ ಮಾಡಿಕೊಂಡರು’ ಎಂದು ಅರವಿಂದ್​ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಒಮ್ಮೆ ದಿವ್ಯಾ ಅಡುಗೆ ಮಾಡಿದ್ದರು. ಅದನ್ನು ಸವಿದು ಅರವಿಂದ್​ ತುಂಬ ಖುಷಿಪಟ್ಟಿದ್ದರು. ಹಾಗಾಗಿ ನೀವು ಉಡುಪಿಯಲ್ಲಿ ಒಂದು ಹೋಟೆಲ್​ ಶುರು ಮಾಡಿದರೆ ಒಳ್ಳೆಯದು ಎಂದು ಅರವಿಂದ್​ ಸಲಹೆ ನೀಡಿದ್ದರಂತೆ. ಆ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಅದನ್ನು​ ಲೈವ್​ನಲ್ಲಿ ಅವರು ತೆರೆದಿಟ್ಟರು. ‘ಹೊರಗೆ ಬಂದ ಬಳಿಕ ದಿವ್ಯಾಗೆ ಫೋನ್​ ಮಾಡಿದ್ದೆ. ಅವರು ಚೇತರಿಸಿಕೊಂಡಿದ್ದಾರೆ. ನಾರ್ಮಲ್​ ಆಗೋಕೆ ಇನ್ನೂ ಸ್ವಲ್ಪ ದಿನ ಬೇಕು. ದಿವ್ಯಾ ಕೊಟ್ಟ ರಿಂಗ್​ ಕೈಯಲ್ಲೇ ಇದೆ. ಅದನ್ನು ಯಾವಾಗಲೂ ತೆಗೆಯೋದಿಲ್ಲ’ ಎಂದು ಅರವಿಂದ್​ ಹೇಳಿದ್ದಾರೆ.

ಇದನ್ನೂ ಓದಿ:

ಬಿಗ್ ಬಾಸ್ ಮನೆ ಸೇರಿ ಕ್ಯಾಶ್​ ಪ್ರೈಜ್​ಗಿಂತ ಹೆಚ್ಚಿನದ್ದನ್ನೇ ಸಂಪಾದಿಸಿದ್ದಾರೆ ದಿವ್ಯಾ ಉರುಡುಗ

ನಂಗೆ ಒಂಥರಾ ಆಗ್ತಿದೆ; ಅರವಿಂದ್​ ಮಾಡಿದ ಸೇವೆ ನೋಡಿ ದಿವ್ಯಾ ಉರುಡುಗ ನಾಚಿ ನೀರಾದರು

Published On - 10:49 am, Thu, 13 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us