ಒಂಬತ್ತನೇ ವಾರ ಬಿಗ್ ಬಾಸ್ ಮನೆ ಸಾಕಷ್ಟು ಕುತೂಹಲಗಳಿಗೆ ಕಾರಣವಾಯಿತು. ಘಟಾನುಘಟಿ ಎನಿಸಿಕೊಂಡ ಸ್ಪರ್ಧಿಗಳೇ ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ, ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಪ್ರತಿವಾರ ನಾಮಿನೇಷನ್ ಪ್ರಕ್ರಿಯೆ ಸೋಮವಾರವೇ ನಡೆಯುತ್ತಿತ್ತು. ಆದರೆ, ಈ ವಾರ ವಿಳಂಬವಾಗಿದೆ. ಶುಕ್ರವಾರ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಹೀಗಾಗಿ ವೀಕ್ಷಕರಿಗೆ ಮತ ಹಾಕಲು ಕಡಿಮೆ ಸಮಯ ಸಿಕ್ಕಿದೆ. ಇದರಿಂದಲೂ ಈ ಬಾರಿಯ ಎಲಿಮಿನೇಷನ್ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ.
ಈ ಬಾರಿ ನಾಮಿನೇಷನ್ ಲಿಸ್ಟ್ನಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ., ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಇದ್ದಾರೆ. ಇವರಲ್ಲಿ ಮನೆಯಿಂದ ಹೊರ ಹೋಗೋದು ಯಾರು ಅನ್ನೋದು ಸದ್ಯದ ಪ್ರಶ್ನೆ.
ಈ ಬಾರಿಯ ನಾಮಿನೇಷನ್ನಲ್ಲಿ ಮಂಜುಗೆ ಹೆಚ್ಚು ವೋಟ್ ಬಿದ್ದಿದೆ. ಆದರೆ, ಅವರ ಟಿಆರ್ಪಿ ಕಡಿಮೆ ಆಗಿಲ್ಲ. ಹೀಗಾಗಿ, ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದು ಅನುಮಾನವೇ. ಅರವಿಂದ್ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟಂಟ್ ಎನಿಸಿಕೊಂಡಿದ್ದಾರೆ. ಅವರು ಫೈನಲ್ ವರೆಗೂ ಇರುತ್ತಾರೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.
ಚಕ್ರವರ್ತಿ ಚಂದ್ರಚೂಡ್ ಕ್ಯಾಪ್ಟನ್ ಆಗಿದ್ದಾರೆ. ಈ ಮೂಲಕ ಅವರು ಸ್ಟ್ರಾಂಗ್ ಎಂದು ಗುರುತಿಸಿಕೊಂಡಿದ್ದಾರೆ. ಪ್ರಶಾಂತ್ ಸಂಬರಗಿ ಕಳೆದವಾರದ ಎಲಿಮಿನೆಷನ್ನಲ್ಲಿ ಜಸ್ಟ್ ಮಿಸ್ ಆಗಿದ್ದರು. ಈ ವಾರ ಅವರು ಬಚಾವ್ ಆಗಬಹುದು ಎನ್ನಲಾಗುತ್ತಿದೆ. ಈಗ ಉಳಿದಿದ್ದು, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್. ಇವರಲ್ಲಿ ಈ ವಾರ ಒಬ್ಬರು ಮನೆಯಿಂದ ಹೊರ ಹೋಗಬಹುದು ಎಂಬುದು ಪ್ರೇಕ್ಷಕರ ಅಭಿಪ್ರಾಯ. ಕೆಲವರು ಈ ವಾರ ಎಲಿಮಿನೇಷನ್ ಇಲ್ಲ ಎಂದು ಕೂಡ ಹೇಳುತ್ತಿದ್ದಾರೆ. ಇದಕ್ಕೆ ಇಂದು (ಮೇ 2) ರಾತ್ರಿ ಉತ್ತರ ಸಿಗಲಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯವರಿಗೆ ಬೇಡವಾದರಾ ಮಂಜು? ಎಲ್ಲರ ಅಸಲಿಮುಖ ಬಯಲು
ಸುದೀಪ್ ಗುಣಮುಖ ಆಗಿದ್ದರೂ ಯಾಕೆ ಬಿಗ್ ಬಾಸ್ ನಡೆಸಿಕೊಡುತ್ತಿಲ್ಲ? ಜನರ ಪ್ರಶ್ನೆಗೆ ಇಲ್ಲಿದೆ ಕಿಚ್ಚನ ಉತ್ತರ