World Laughter Day: ನೋವಿಗೆ ನಗುವಿನ ಔಷಧಿ ನೀಡಿದ ಚಾಪ್ಲಿನ್​ ಅವರ 5 ಬೆಸ್ಟ್​ ಸಿನಿಮಾಗಳು

ಕಷ್ಟದ ದಿನಗಳ ಬಗ್ಗೆ ಜನರಿಗೆ ತಿಳಿಸಿ ಹೇಳಲು ಕೂಡ ನಗುವನ್ನೇ ಬಳಸಿದ ಒಬ್ಬ ಮಹಾನ್​ ಕಲಾವಿದ ಚಾರ್ಲಿ ಚಾಪ್ಲಿನ್​. ಇಂದಿಗೂ ದಿ ಬೆಸ್ಟ್​ ಕಾಮಿಡಿ ಸಿನಿಮಾಗಳ ಪಟ್ಟಿಯಲ್ಲಿ ಚಾಪ್ಲಿನ್​ ಸಿನಿಮಾಗಳು ಮುಂಚೂಣಿಯ ಸ್ಥಾನ ಪಡೆದುಕೊಳ್ಳುತ್ತವೆ.

World Laughter Day: ನೋವಿಗೆ ನಗುವಿನ ಔಷಧಿ ನೀಡಿದ ಚಾಪ್ಲಿನ್​ ಅವರ 5 ಬೆಸ್ಟ್​ ಸಿನಿಮಾಗಳು
ದಿ ಕಿಡ್​ ಸಿನಿಮಾದಲ್ಲಿ ಚಾಪ್ಲಿನ್​
Follow us
ಮದನ್​ ಕುಮಾರ್​
|

Updated on: May 02, 2021 | 12:50 PM

ಇಂದು (ಮೇ 2) ವಿಶ್ವ ನಗು ದಿನ. ಸದ್ಯದ ಪರಿಸ್ಥಿತಿಯಲ್ಲಿ ಯಾರ ಮುಖದಲ್ಲೂ ನಗು ಮೂಡುವುದು ಕಷ್ಟ. ಕೊರೊನಾ ಮಹಾಮಾರಿಯಿಂದಾಗಿ ಎಲ್ಲೆಲ್ಲೂ ಶೋಕವೇ ತಾಂಡವ ಆಡುತ್ತಿದೆ. ಕಷ್ಟದ ದಿನಗಳ ಬಗ್ಗೆ ಜನರಿಗೆ ತಿಳಿಸಿ ಹೇಳಲು ಕೂಡ ನಗುವನ್ನೇ ಬಳಸಿದ ಒಬ್ಬ ಮಹಾನ್​ ಕಲಾವಿದ ಚಾರ್ಲಿ ಚಾಪ್ಲಿನ್​. ಇಂದಿಗೂ ದಿ ಬೆಸ್ಟ್​ ಕಾಮಿಡಿ ಸಿನಿಮಾಗಳ ಪಟ್ಟಿಯಲ್ಲಿ ಚಾಪ್ಲಿನ್​ ಸಿನಿಮಾಗಳು ಮುಂಚೂಣಿಯ ಸ್ಥಾನ ಪಡೆದುಕೊಳ್ಳುತ್ತವೆ. ಹತ್ತು ಹಲವು ಕಾರಣಗಳಿಗಾಗಿ ಚಾಪ್ಲಿನ್​ ಚಿತ್ರಗಳು ಜನಮೆಚ್ಚುಗೆ ಗಳಿಸಿವೆ. ಅದರಲ್ಲೂ ಈ 5 ಸಿನಿಮಾಗಳಿಗೆ ವಿಶೇಷ ಸ್ಥಾನಮಾನವಿದೆ.

1. ದಿ ಕಿಡ್​

ಈ ಸಿನಿಮಾ ತೆರೆಕಂಡಿದ್ದು 1921ರಲ್ಲಿ. ಇದು ಚಾರ್ಲಿ ಚಾಪ್ಲಿನ್​ ಅವರ ಮೊದಲ ಪೂರ್ಣಾವಧಿ ಸಿನಿಮಾ. ಇದು ಮೂಕಿ ಚಿತ್ರ. ಯಾವುದೇ ಸಂಭಾಷಣೆಗಳು ಇಲ್ಲದೇ ಬರೀ ಆಂಗಿಕ ಅಭಿನಯದಲ್ಲೇ ಜನರನ್ನು ನಕ್ಕು ನಗಿಸುವ ಈ ಸಿನಿಮಾ ಅನೇಕ ಸೂಕ್ಷ್ಮ ವಿಚಾರಗಳನ್ನು ಪ್ರೇಕ್ಷಕರಿಗೆ ತಿಳಿಸುತ್ತದೆ. ನಟನೆ ಜೊತೆಗೆ ಕಥೆ, ನಿರ್ದೇಶನ, ನಿರ್ಮಾಣವನ್ನೂ ಚಾಪ್ಲಿನ್​ ಅವರೇ ಮಾಡಿದ್ದರು. ಆ ಕಾಲಕ್ಕೆ ‘ದಿ ಕಿಡ್​’ ಭರ್ಜರಿ ಯಶಸ್ಸು ಗಳಿಸಿತ್ತು.

2. ಗೋಲ್ಡ್​ ರಶ್​

1925ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಚಿನ್ನ ಹುಡುಕುವ ಸಲುವಾಗಿ ಮುಗಿ ಬೀಳುವ ಜನರ ಕಥೆ ಈ ಸಿನಿಮಾದಲ್ಲಿದೆ. ಚಿನ್ನದ ಆಸೆಗಾಗಿ ಬಂದಿರುವ ಇತರೆ ಜನರ ನಡುವೆ ಕಥಾನಾಯಕ ಕೂಡ ಸೇರಿಕೊಳ್ಳುತ್ತಾನೆ. ವಿಪರೀತ ಹಿಮ ಬೀಳುವ ಪ್ರದೇಶವಾದ್ದರಿಂದ ಒಂದು ಮನೆಯಲ್ಲಿ ಆಶ್ರಯ ಪಡೆಯುವುದು ಅನಿವಾರ್ಯ ಆಗುತ್ತದೆ. ಆ ಮನೆಯಲ್ಲಿ ನಡೆಯುವ ವಿಲಕ್ಷಣ ಘಟನೆಗಳು ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ನಗು ಉಕ್ಕಿಸುತ್ತವೆ.

3. ಸಿಟಿ ಲೈಟ್ಸ್​

1931ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಕಣ್ಣಿಲ್ಲದ ಹುಡುಗಿಯ ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ ಕಥಾನಾಯಕ. ಆ ಹುಡುಗಿ ತನ್ನ ಅಜ್ಜಿ ಜೊತೆಯಲ್ಲಿ ವಾಸಿಸುತ್ತಿರುತ್ತಾಳೆ. ಅವರದ್ದು ಕಷ್ಟದ ಬದುಕು. ಅಜ್ಜಿ ಮತ್ತು ಮೊಮ್ಮಗಳ ಬದುಕಿಗೆ ಆಸರೆ ಆಗಲಿ ಎಂದು ಕಷ್ಟಪಟ್ಟು ಹಣ ಸಂಪಾದನೆ ಮಾಡಲು ಕಥನಾಯಕ ಮಾಡುವ ಎಲ್ಲ ಪ್ರಯತ್ನಗಳು ವಿಫಲ ಆಗುತ್ತವೆ. ಆ ಮೂಲಕ ಪ್ರೇಕ್ಷಕರಲ್ಲಿ ನಕ್ಕಿ ನಗಿಸುತ್ತವೆ. ಕೊನೆಯಲ್ಲಿ ಆತನ ಕಾರ್ಯ ಯಶಸ್ವಿ ಆಗುತ್ತದೆ.

4. ಮಾಡರ್ನ್​ ಟೈಮ್ಸ್

ಚಾಪ್ಲಿನ್​ ವೃತ್ತಿಜೀವನದ ಅತಿ ಜನಪ್ರಿಯ ಸಿನಿಮಾಗಳಲ್ಲಿ ಇದೂ ಒಂದು. ಇದು ಚಾಪ್ಲಿನ್​ ನಟಿಸಿದ ಕೊನೆಯ ಮೂಕಿ ಸಿನಿಮಾ. 1936ರಲ್ಲಿ ತೆರೆಕಂಡ ಈ ಚಿತ್ರದ ಬಳಿಕ ಅವರು ಡೈಲಾಗ್​ ಇರುವ ಸಿನಿಮಾಗಳನ್ನು ಮಾಡಿದರು. ಹೆಸರೇ ಸೂಚಿಸುವಂತೆ ಆಧುನಿಕತೆಗೆ ಒಗ್ಗಿಕೊಳ್ಳಲು ಮನುಷ್ಯರು ಮಾಡುವ ಪ್ರಯತ್ನಗಳ ಬಗ್ಗೆ ಸಿನಿಮಾ ಮಾತನಾಡುತ್ತದೆ. ಫ್ಯಾಕ್ಟರಿ ಕೆಲಸಗಾರನಾಗಿ, ನಿರುದ್ಯೋಗಿಯಾಗಿ ಚಾಪ್ಲಿನ್​ ಅದ್ಭುತವಾಗಿ ನಟಿಸಿದ್ದಾರೆ. ಗಂಭೀರವಾದ ವಿಷಯಗಳನ್ನು ಅವರು ಕಾಮಿಡಿ ಮೂಲಕ ಈ ಸಿನಿಮಾದಲ್ಲಿ ಹೇಳಿದ್ದಾರೆ.

5. ದಿ ಗ್ರೇಟ್​ ಡಿಕ್ಟೇಟರ್​

ಸಂಭಾಷಣೆಗಳನ್ನು ಒಳಗೊಂಡ ಚಾಪ್ಲಿನ್​ ಅವರ ಮೊದಲ ಸಿನಿಮಾ ದಿ ಗ್ರೇಟ್​ ಡಿಕ್ಟೇಟರ್​. 1940ರಲ್ಲಿ ಈ ಸಿನಿಮಾ ಬಿಡುಗಡೆ ಆಯಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಸರ್ವಾಧಿಕಾರಿ ಹಿಟ್ಲರ್​ನ ಆಡಳಿತ ಮತ್ತು ವ್ಯಕ್ತಿತ್ವವನ್ನು ಟೀಕಿಸುವ ಉದ್ದೇಶದಿಂದ ಈ ಸಿನಿಮಾ ಮಾಡಲಾಯಿತು. ಯುದ್ಧದ ಭೀಕರತೆ, ಅಮಾಯಕರ ಸಾವು, ಸರ್ವಾಧಿಕಾರದ ಅಪಾಯ ಮುಂತಾದ ವಿಚಾರಗಳನ್ನು ಹಾಸ್ಯದ ಮೂಲಕ ಜನರಿಗೆ ಮನಮುಟ್ಟುವಂತೆ ಹೇಳುವ ಕಾರಣಕ್ಕಾಗಿ ಈ ಚಿತ್ರ ಇಂದಿಗೂ ಗ್ರೇಟ್​ ಎನಿಸಿಕೊಂಡಿದೆ.

ಇದನ್ನೂ ಓದಿ:

World Laughter Day 2021: ವಿಶ್ವ ನಗು ದಿನಕ್ಕೆ ಮೀಮ್ಸ್ ಮತ್ತು ವಿಡಿಯೋಗಳ ಕೊಡುಗೆ ಏನು?

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್