Bigg Boss Kannada Elimination: ಈ ವಾರ ಬಿಗ್​ ಬಾಸ್​​ ಮನೆಯಿಂದ ಹೊರಹೋಗುತ್ತಿರುವ ಸ್ಪರ್ಧಿ ಯಾರು?

ಕಳೆದ ಬಾರಿ ನೇರವಾಗಿ ನಾಮಿನೇಟ್​ ಆಗಿದ್ದ ನಿರ್ಮಲಾ ಈ ಬಾರಿಯೂ ಅತಿ ಹೆಚ್ಚು ಮತ ಪಡೆದು ನಾಮಿನೇಟ್​ ಸಾಲಿನಲ್ಲಿದ್ದಾರೆ. ಭಿನ್ನಾಭಿಪ್ರಾಯ, ಎಲ್ಲರ ಜತೆ ಹೊಂದುಕೊಳ್ಳುತ್ತಿಲ್ಲ, ಅವರು ತೆಗೆದುಕೊಳ್ಳುವ ನಿರ್ಧಾರ ಸರಿ ಇರುವುದಿಲ್ಲ ಎಂದು ಮನೆಯ ಸದಸ್ಯರು ಕಾರಣ ನೀಡಿದ್ದರು.

Bigg Boss Kannada Elimination: ಈ ವಾರ ಬಿಗ್​ ಬಾಸ್​​ ಮನೆಯಿಂದ ಹೊರಹೋಗುತ್ತಿರುವ ಸ್ಪರ್ಧಿ ಯಾರು?
ಸುದೀಪ್​

Updated on: Mar 13, 2021 | 7:55 PM

ಕನ್ನಡ ಬಿಗ್​ ಬಾಸ್​ ಎಂಟನೇ ಸೀಸನ್​ನ ಮೊದಲೇ ವಾರದಲ್ಲಿ ಧನುಶ್ರೀ ನಾಮಿನೇಟ್​ ಆಗಿ ಮನೆಯಿಂದ ಹೊರಹೋಗಿದ್ದರು. ಈಗ ಎರಡನೇ ವಾರದ ಎಲಿಮಿನೇಷನ್​ಗೆ ಕ್ಷಣಗಣನೆ ಆರಂಭವಾಗಿದೆ. ಎರಡನೇ ವಾರದಲ್ಲಿ ಎಲಿಮಿನೇಷನ್​ಗೆ ಎಂಟು ಜನರು ನಾಮಿನೇಟ್​ ಆಗಿದ್ದಾರೆ. ಇವರಲ್ಲಿ ಯಾರು ಮನೆಯಿಂದ ಹೊರಹೋಗುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಕಳೆದ ಬಾರಿ ನೇರವಾಗಿ ನಾಮಿನೇಟ್​ ಆಗಿದ್ದ ನಿರ್ಮಲಾ ಈ ಬಾರಿಯೂ ಅತಿ ಹೆಚ್ಚು ಮತ ಪಡೆದು ನಾಮಿನೇಟ್​ ಸಾಲಿನಲ್ಲಿದ್ದಾರೆ. ಭಿನ್ನಾಭಿಪ್ರಾಯ, ಎಲ್ಲರ ಜತೆ ಹೊಂದುಕೊಳ್ಳುತ್ತಿಲ್ಲ, ಅವರು ತೆಗೆದುಕೊಳ್ಳುವ ನಿರ್ಧಾರ ಸರಿ ಇರುವುದಿಲ್ಲ, ಅವರಿಂದ ಮನೆಯ ವಾತಾವರಣ ಬದಲಾಗಿದೆ ಎಂದು ಮನೆಯ ಸದಸ್ಯರು ಕಾರಣ ನೀಡಿದ್ದರು. ಪ್ರಶಾಂತ್​ ಸಂಬರಗಿ ಕೂಡ ಈ ಬಾರಿ ನಾಮಿನೇಟ್​ ಆದರು. ಪ್ರಶಾಂತ್​ ಡಾಮಿನೇಟ್​ ಮಾಡುತ್ತಾರೆ. ಎಲ್ಲರನ್ನೂ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಮಾತನಾಡುತ್ತಾರೆ ಎನ್ನುವ ಕಾರಣ ನೀಡಿ ಅವರನ್ನು ಮನೆಯ ಸದಸ್ಯರು ನಾಮಿನೇಟ್​ ಮಾಡಿದ್ದರು. ಎಲ್ಲರ ಜತೆ ಸರಿಯಾಗಿ ಬೆರೆಯುತ್ತಿಲ್ಲ, ಒಂಟಿಯಾಗಿ ಇರುತ್ತಾರೆ ಎನ್ನುವ ಕಾರಣ ನೀಡಿ ದಿವ್ಯಾ ಸುರೇಶ್​ ನಾಮಿನೇಟ್​ ಆಗಿದ್ದರು. ಇವರ ಜತೆಗೆ ಗೀತಾ, ನಿಧಿ ಸುಬ್ಬಯ್ಯ, ವಿಶ್ವನಾಥ್, ಶುಭಾ ಪೂಂಜಾ ​ ಮತ್ತು ಚಂದ್ರಕಲಾ ಅವರ ಮೇಲೂ ಈ ಬಾರಿಯ ನಾಮಿನೇಟ್​ ಕತ್ತಿ ತೂಗಾಡುತ್ತಿದೆ.

ನಾಮಿನೇಟ್​ ಸಾಲಿನಲ್ಲಿರುವವರ ಸಣ್ಣ ವಿಮರ್ಷೆ ಮಾಡಿದರೆ ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮೆಲ್ನೋಟಕ್ಕೆ ಸೇಫ್​ ಆಗಿರುವ ಹಾಗೆ ಕಾಣುತ್ತಿದ್ದಾರೆ. ಏಕೆಂದರೆ, ಈ ನಾಲ್ಕೂ ಜನರು ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ. ದಿವ್ಯಾ-ಶುಭಾ ಪ್ರೇಕ್ಷಕರನ್ನು ಹೆಚ್ಚು ಎಂಟರ್​ಟೇನ್​ ಮಾಡುತ್ತಿದ್ದಾರೆ. ಪ್ರಶಾಂತ್​ ಸ್ಪೋರ್ಟಿವ್​ ಆಗಿ ಆಡುತ್ತಿದ್ದಾರೆ. ಈ ಕಾರಣಕ್ಕೆ ಈ ನಾಲ್ವರು ಸೇಫ್​ ಆಗುವ ಸಾಧ್ಯತೆ ಹೆಚ್ಚು.

ನಿರ್ಮಲಾ, ಗೀತಾ ಬಗ್ಗೆ ದೂರುಗಳು ತುಂಬಾನೇ ಇದೆ. ಗೀತಾ ಮೊಸಳೆ ಕಣ್ಣೀರು ಸುರಿಸುತ್ತಾರೆ ಎನ್ನುವ ಮಾತಿದೆ. ನಿರ್ಮಲಾ ವಿರುದ್ಧ ಮನೆ ಸದಸ್ಯರೇ ತಿರುಗಿ ಬಿದ್ದಿದ್ದಾರೆ. ವಿಶ್ವ ತುಂಬಾನೇ ಸಣ್ಣವನಾಗಿದ್ದರಿಂದ ಈ ಮೂವರಿಗೆ ಕಷ್ಟವಿದೆ ಎನ್ನಲಾಗುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ.

ಇದನ್ನೂ ಓದಿ: BBK8: ಬಿಗ್​ ಬಾಸ್​ 8 ವಿನ್ನರ್​ ರಾಜೀವ್​, ರನ್ನರ್​ ಅಪ್​ ಮಂಜು; ಹೀಗೆ ಭವಿಷ್ಯ ನುಡಿದವರಾರು?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us