ಕಾವ್ಯಾಗೆ ಅಭಿಮಾನಿಯ ಪತ್ರ: ಚಂದನ್-ನಿವೇದಿತಾ, ರಕ್ಷಿತ್-ರಶ್ಮಿಕಾ ಉದಾಹರಣೆ
Bigg Boss Kannada 12: ಬಿಗ್ಬಾಸ್ ಮನೆಯಲ್ಲಿದ್ದಾಗ ಗಿಲ್ಲಿಯ ನೆರಳು, ಗಿಲ್ಲಿಯಿಂದ ಮಿಂಚುತ್ತಿರುವ ಸ್ಪರ್ಧಿ ಎಂದೆಲ್ಲ ಟೀಕೆಗೆ ಒಳಗಾಗಿದ್ದ ಕಾವ್ಯಾಗೆ, ಈಗ ಹೊರ ಬಂದ ಮೇಲೆ ತಮ್ಮ ವ್ಯಕ್ತಿತ್ವಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವಿದೆ ಎಂಬುದು ಗೊತ್ತಾಗಿದೆ. ಇದೀಗ ನಟಿ ಕಾವ್ಯಾ, ಅಭಿಮಾನಿಯೊಬ್ಬ ತಮಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿದಿದ್ದು ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. ಗಿಲ್ಲಿ ನಟನಿಗೆ ಭಾರಿ ಜನಪ್ರಿಯತೆ ಶೋನಿಂದಾಗಿ ದೊರೆತಿದೆ. ಗಿಲ್ಲಿಗೆ ಮಾತ್ರವೇ ಅಲ್ಲದೆ ಫೈನಲಿಸ್ಟ್ಗಳಾಗಿದ್ದ ಕಾವ್ಯಾ, ರಘು, ಅಶ್ವಿನಿ ಇನ್ನೂ ಹಲವರಿಗೆ ಈ ಶೋನಿಂದ ಭಾರಿ ಜನಪ್ರಿಯತೆ ದೊರೆತಿದೆ. ಕಾವ್ಯಾ ಸಹ ಈಗ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಗಿಲ್ಲಿಯ ನೆರಳು, ಗಿಲ್ಲಿಯಿಂದ ಮಿಂಚುತ್ತಿರುವ ಸ್ಪರ್ಧಿ ಎಂದೆಲ್ಲ ಟೀಕೆಗೆ ಒಳಗಾಗಿದ್ದ ಕಾವ್ಯಾಗೆ, ಈಗ ಹೊರ ಬಂದ ಮೇಲೆ ತಮ್ಮ ವ್ಯಕ್ತಿತ್ವಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವಿದೆ ಎಂಬುದು ಗೊತ್ತಾಗಿದೆ. ಇದೀಗ ನಟಿ ಕಾವ್ಯಾ, ಅಭಿಮಾನಿಯೊಬ್ಬ ತಮಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಭಿಮಾನಿಯೊಬ್ಬ, ಕಾವ್ಯಾರ ಬಿಗ್ಬಾಸ್ ಆಟವನ್ನು ವಿಶ್ಲೇಷಿಸುವ ಜೊತೆಗೆ, ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಜೊತೆಗೆ ಪತ್ರದ ಕೊನೆಯಲ್ಲಿ ಕೆಲವು ಎಚ್ಚರಿಕೆಗಳನ್ನು ಸಹ ನೀಡಿದ್ದಾರೆ. ವಿಶೇಷವಾಗಿ ಕಾವ್ಯಾ ಅವರಿಗೆ ಚಂದನ್ ನಿವೇದಿತಾ ಮತ್ತು ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರ ಉದಾಹರಣೆಗಳನ್ನು ನೀಡುತ್ತಾ ಎಚ್ಚರದಿಂದ ಮುಂದಿನ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದಾರೆ.
ಕಾವ್ಯಾ ಮತ್ತು ಗಿಲ್ಲಿ ಪರಸ್ಪರ ವಿವಾಹ ಆಗಬೇಕು ಎಂದು ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದು, ಕಾವ್ಯಾ ಮತ್ತು ಗಿಲ್ಲಿ ಇಬ್ಬರೂ ಇದನ್ನು ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಅಭಿಮಾನಿ ನೀಡಿದ ಎಚ್ಚರಿಕೆಯನ್ನು ವಿಶೇಷವಾಗಿ ನಟಿ ಕಾವ್ಯಾ ಹಂಚಿಕೊಂಡಿದ್ದಾರೆ ಅನಿಸುತ್ತದೆ.
ಇದನ್ನೂ ಓದಿ:ಗಿಲ್ಲಿ ನಟನಿಗೆ ಬಿಗ್ ಬಾಸ್ನಿಂದ ಕಾರು ಸಿಗೋದು ಯಾವಾಗ? ಕೊನೆಗೂ ಸಿಕ್ತು ಉತ್ತರ
‘ಅಭಿಪ್ರಾಯ ಜನಗಳದ್ದೇ ಆಗಿರಬಹುದು ಆದರೆ ನಿರ್ಧಾರ ನಿಮ್ಮದಾಗಿರಲಿ, ಜೊತೆಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾದವರನ್ನು ನೋಡಿದ್ದೇವೆ, ಹಾಗೆಯೇ ಅರಮನೆಯ ಸಂಭ್ರಮದಲ್ಲಿ ಮದುವೆ ಆದವರು ಬಳಿಕ ಕೋರ್ಟ್ನಲ್ಲಿ ದೂರಾಗಿದ್ದನ್ನು ನೋಡಿದ್ದೇವೆ. ಜೊತೆಯಾಗಿ, ದೂರಾಗಿ ಬಳಿಕ ನ್ಯಾಷನಲ್ ಕ್ರಶ್ ಆದವರನ್ನು ನೋಡಿದ್ದೇವೆ. ನೀವು ಮನರಂಜನೆ ನೀಡುತ್ತಿರುವವರೆಗೆ ಮಾತ್ರ ಜನ ನಿಮ್ಮನ್ನು ನೆನಪಿಟ್ಟುಕೊಳ್ಳುತ್ತಾರೆ. ಸಮಯ ಸರಿದಂತೆ ಸಾಧನೆ ನಿಲ್ಲದಂತೆ ಬೆಳೆಯುತ್ತಿರಿ’ ಎಂದಿದ್ದಾರೆ ಆ ಅನಾಮಿಕ ಅಭಿಮಾನಿ.
ಆ ಮೂಲಕ ಕಾವ್ಯಾ ಅವರು ಗಿಲ್ಲಿಯಿಂದ ಅಂತರ ಕಾಯ್ದುಕೊಂಡು ವೈಯಕ್ತಿಕ ಬೆಳವಣಿಗೆ ಮೇಲೆ ಗಮನ ಹರಿಸಬೇಕು ಎಂಬ ಮೌಲಿಕ ಸಲಹೆಯನ್ನು ಅಭಿಮಾನಿ ನೀಡಿದ್ದಾರೆ. ಕಾವ್ಯಾ ಸಹ ಬಿಗ್ಬಾಸ್ ಬಳಿಕ ನೀಡಿದ ಸಂದರ್ಶನಗಳಲ್ಲಿ ಗಿಲ್ಲಿ ಜೊತೆಗೆ ಗೆಳೆತನಕ್ಕೆ ಮಿಗಲಾದುದು ಏನೂ ಇಲ್ಲ ಎಂದು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




