‘ಅನಿಮಲ್ ಪಾರ್ಕ್’ ಚಿತ್ರೀಕರಣ ಯಾವಾಗ: ಬಾಯ್ಬಿಟ್ಟ ರಣ್ಬೀರ್ ಕಪೂರ್
Animal park movie: ‘ಅನಿಮಲ್’ ಸಿನಿಮಾವನ್ನು ‘ಹಿಂಸಾತ್ಮಕ’, ‘ಪುರುಷ ಅಹಂಕಾರ’ ತುಂಬಿದ ಸಿನಿಮಾ, ‘ಮಹಿಳಾ ಪೀಡಕ’ತನದ ವೈಭವೀಕರಣ ಎಂದೆಲ್ಲ ವಿಮರ್ಶಕರು ಟೀಕೆ ಮಾಡಿದ್ದರು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ, ಜೊತೆಗೆ ‘ಅನಿಮಲ್’ ಸಿನಿಮಾದ ಸೀಕ್ವೆಲ್ ಮಾಡುವುದಾಗಿ ಘೋಷಣೆ ಮಾಡಿದರು. ಇದೀಗ ರಣ್ಬೀರ್ ಕಪೂರ್ ‘ಅನಿಮಲ್’ ಸೀಕ್ವೆಲ್ನ ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ.

ರಣ್ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಯಶಸ್ವಿ ಆದ ಜೊತೆಗೆ ಪರ ವಿರೋಧ ಚರ್ಚೆಯನ್ನೂ ಸಹ ಹುಟ್ಟುಹಾಕಿತ್ತು. ‘ಅನಿಮಲ್’ ಸಿನಿಮಾವನ್ನು ‘ಹಿಂಸಾತ್ಮಕ’, ‘ಪುರುಷ ಅಹಂಕಾರ’ ತುಂಬಿದ ಸಿನಿಮಾ, ‘ಮಹಿಳಾ ಪೀಡಕ’ತನದ ವೈಭವೀಕರಣ ಎಂದೆಲ್ಲ ವಿಮರ್ಶಕರು ಟೀಕೆ ಮಾಡಿದ್ದರು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ, ಜೊತೆಗೆ ‘ಅನಿಮಲ್’ ಸಿನಿಮಾದ ಸೀಕ್ವೆಲ್ ಮಾಡುವುದಾಗಿ ಘೋಷಣೆ ಮಾಡಿದರು. ಇದೀಗ ರಣ್ಬೀರ್ ಕಪೂರ್ ‘ಅನಿಮಲ್’ ಸೀಕ್ವೆಲ್ನ ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಟ ರಣ್ಬೀರ್ ಕಪೂರ್, ‘ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪ್ರಸ್ತುತ ಬೇರೊಂದು ಸಿನಿಮಾನಲ್ಲಿ ತೊಡಗಿಸಿಕೊಂಡಿದ್ದು ಆ ಸಿನಿಮಾ ಮುಗಿದ ಬಳಿಕ ‘ಅನಿಮಲ್ ಪಾರ್ಕ್’ ಸಿನಿಮಾ ಪ್ರಾರಂಭ ಆಗಲಿದೆ. ಸಿನಿಮಾದ ಚಿತ್ರೀಕರಣ ಬಹುಷಃ 2027ರಲ್ಲಿ ಪ್ರಾರಂಭ ಆಗಬಹುದು’ ಎಂದಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಪ್ರಸ್ತುತ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ರಣ್ಬೀರ್ ಕಪೂರ್ ಜೊತೆಗೆ ‘ಅನಿಮಲ್ ಪಾರ್ಕ್’ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ‘ಅನಿಮಲ್’ ಸಿನಿಮಾದ ಅಂತ್ಯದಲ್ಲಿಯೇ ‘ಅನಿಮಲ್ ಪಾರ್ಕ್’ ಸಿನಿಮಾದ ಸುಳಿವು ನೀಡಿರುವ ಸಂದೀಪ್ ರೆಡ್ಡಿ ವಂಗಾ, ‘ಅನಿಮಲ್’ ಸಿನಿಮಾಕ್ಕಿಂತಲೂ ‘ಅನಿಮಲ್ ಪಾರ್ಕ್’ ಹೆಚ್ಚು ವೈಯಲೆಂಟ್ ಆಗಿರಲಿದೆ ಎಂದು ಈಗಾಗಲೇ ಹೇಳಿದ್ದಾರೆ.
ಇದನ್ನೂ ಓದಿ:ಆಮಿರ್ ಖಾನ್ ಮನೆಯಲ್ಲಿ ‘ಸಿತಾರೆ’ಗಳು, ರಣ್ಬೀರ್ ಕಪೂರ್ ಸಹ
ರಣ್ಬೀರ್ ಕಪೂರ್ ಪ್ರಸ್ತುತ ‘ರಾಮಾಯಣ’ ಸಿನಿಮಾನಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿರುವ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ. ‘ರಾಮಾಯಣ’ ಸಿನಿಮಾದ ಮೊದಲ ಭಾಗ ನವೆಂಬರ್ 06ಕ್ಕೆ ಬಿಡುಗಡೆ ಆಗಲಿದೆ. ಅದಾದ ಬಳಿಕ 2027ರ ಫೆಬ್ರವರಿ ತಿಂಗಳಲ್ಲಿ ‘ಲವ್ ಆಂಡ್ ವಾರ್’ ಸಿನಿಮಾ ಬಿಡುಗಡೆ ಆಗಲಿದೆ. 2027ರಲ್ಲಿ ರಣ್ಬೀರ್ ಕಪೂರ್, ‘ಬ್ರಹ್ಮಾಸ್ತ್ರ 2’ ಮತ್ತು ‘ಅನಿಮಲ್ ಪಾರ್ಕ್’ ಸಿನಿಮಾಗಳಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




