ಬಿಗ್​​ಬಾಸ್: ಕಾವ್ಯಾ ಬಿಟ್ಟು ಮೋನಿಕಾ ಹಿಂದೆ ಬಿದ್ದ ಗಿಲ್ಲಿ

Bigg Boss Kannada 12: ಗಿಲ್ಲಿ, ಬಿಗ್​​ಬಾಸ್ ಮನೆಗೆ ಬಂದಾಗಿನಿಂದಲೂ ಕಾವ್ಯಾ ಜೊತೆಗೆ ಒಳ್ಳೆಯ ಗೆಳೆತನ ಇರಿಸಿಕೊಂಡಿದ್ದಾರೆ. ಕಾವ್ಯಾರನ್ನು ಗೋಳು ಹೊಯ್ದುಕೊಳ್ಳುತ್ತಿರುತ್ತಾರೆ. ಕಾವ್ಯಾ ಹಿಂದೆ ಬಿದ್ದಿದ್ದಾರೆ. ಆದರೆ ಇದೀಗ ಒಮ್ಮೆಲೆ ಕಾವ್ಯಾ ಅನ್ನು ಬಿಟ್ಟು ಮೋನಿಕಾಗೆ ‘ಲವ್ ಯು’ ಎಂದಿದ್ದಾರೆ. ವಿಶೇಷವೆಂದರೆ ಮೋನಿಕಾ ಸಹ ಓಕೆ ಹೇಳಿಬಿಟ್ಟಿದ್ದಾರೆ! ಅಂದಹಾಗೆ ಯಾರು ಈ ಮೋನಿಕಾ?

ಬಿಗ್​​ಬಾಸ್: ಕಾವ್ಯಾ ಬಿಟ್ಟು ಮೋನಿಕಾ ಹಿಂದೆ ಬಿದ್ದ ಗಿಲ್ಲಿ
Gilli Nata

Updated on: Dec 28, 2025 | 11:03 PM

ಗಿಲ್ಲಿ ಬಿಗ್​​ಬಾಸ್ (Bigg Boss) ಕನ್ನಡದ ಪಕ್ಕಾ ಎಂಟರ್ಟೈನರ್ ಆಗಿದ್ದಾರೆ. ಯಾರೇ ಬರಲಿ, ಸನ್ನಿವೇಶ ಎಂಥಹುದ್ದೇ ಇರಲಿ ನಗಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ಅವರ ಕಾಮಿಡಿ ಎದುರಿಗಿದ್ದವರಿಗೆ ಅಪಹಾಸ್ಯ, ವ್ಯಂಗ್ಯ ಎನಿಸಿ ಸಿಟ್ಟು ಬರುವುದೂ ಉಂಟು ಆದರೆ ಅದನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳದೆ ನಗಿಸುತ್ತಲೇ ಇರುತ್ತಾರೆ. ಗಿಲ್ಲಿ, ಬಿಗ್​​ಬಾಸ್ ಮನೆಗೆ ಬಂದಾಗಿನಿಂದಲೂ ಕಾವ್ಯಾ ಜೊತೆಗೆ ಒಳ್ಳೆಯ ಗೆಳೆತನ ಇರಿಸಿಕೊಂಡಿದ್ದಾರೆ. ಕಾವ್ಯಾರನ್ನು ಗೋಳು ಹೊಯ್ದುಕೊಳ್ಳುತ್ತಿರುತ್ತಾರೆ. ಕಾವ್ಯಾ ಹಿಂದೆ ಬಿದ್ದಿದ್ದಾರೆ. ಆದರೆ ಇದೀಗ ಒಮ್ಮೆಲೆ ಕಾವ್ಯಾ ಅನ್ನು ಬಿಟ್ಟು ಮೋನಿಕಾಗೆ ‘ಲವ್ ಯು’ ಎಂದಿದ್ದಾರೆ. ವಿಶೇಷವೆಂದರೆ ಮೋನಿಕಾ ಸಹ ಓಕೆ ಹೇಳಿಬಿಟ್ಟಿದ್ದಾರೆ!

ಸುದೀಪ್ ಅವರು ಈ ವೀಕೆಂಡ್​​ನಲ್ಲಿ ಬಿಗ್​ಬಾಸ್ ಶೋಗೆ ಗೈರು ಹಾಜರಾಗಿದ್ದಾರೆ. ‘ಮಾರ್ಕ್’ ಸಿನಿಮಾದ ಪ್ರಚಾರದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಹಾಗಾಗಿ ಬಿಗ್​​ಬಾಸ್ ಮನೆಗೆ ಬೇರೆ ಅತಿಥಿಗಳು ಕೆಲವರು ಬಂದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ‘ಗೌರಿ ಕಲ್ಯಾಣ’ ಧಾರಾವಾಹಿ ಪಾತ್ರಧಾರಿಗಳು ಈ ವಾರ ಬಿಗ್​​ಬಾಸ್ ಮನೆಗೆ ಬಂದಿದ್ದರು. ಧಾರಾವಾಹಿಯ ಮುಖ್ಯ ಪಾತ್ರಗಳಾದ ತಾಯಿ, ಮೂವರು ಹೆಣ್ಣು ಮಕ್ಕಳು ಸಹ ಬಂದಿದ್ದರು.

ತಾಯಿ ಪಾತ್ರಧಾರಿಗೆ ತಮ್ಮ ಹೆಣ್ಣು ಮಕ್ಕಳನ್ನು ಶ್ರೀಮಂತ ಮನೆಗೆ ಸೊಸೆಯಾಗಿ ಕಳಿಸಬೇಕು ಎಂಬುದು ಆಸೆ, ಅದರಂತೆ ಬಿಗ್​​ಬಾಸ್​​ಗೆ ಬಂದಾಗಲೂ ಸಹ ‘ಗೌರಿ ಕಲ್ಯಾಣ’ ತಾಯಿ ಪಾತ್ರಧಾರಿ ದೀಪಿಕಾ ಅವರು ತಮ್ಮ ಹೆಣ್ಣು ಮಕ್ಕಳಿಗೆ ಗಂಡು ಹುಡುಕುವ ಪ್ರಯತ್ನ ಮಾಡಿದರು. ಈ ವೇಳೆ ಗಿಲ್ಲಿ, ತಾನು ಮಹಾನ್ ಶ್ರೀಮಂತ ಎಂದು ಫೋಸು ಕೊಡುತ್ತಾ, ತನಗೆ ಸಾಕಷ್ಟು ಆಸ್ತಿ ಇದೆ, ತನಗೆ ಮಲ್ಲೇಶ್ವರದಲ್ಲಿ ಎರಡು ಮನೆ ಇದೆ ನಿಮ್ಮ ಮಗಳನ್ನು ನನಗೆ ಕೊಡಿ ಎಂದರು. ಆದರೆ ತಾಯಿ ಪಾತ್ರಧಾರಿ ದೀಪಿಕಾ ಶರಣ್, ‘ನಿಮ್ಮಲ್ಲಿ ಎಲ್ಲ ಇದೆ ಆದರೆ ಬಾಚಣಿಗೆಯೇ ಇಲ್ಲ’ ಎಂದು, ಗಿಲ್ಲಿ ತಲೆ ಬಾಚಿಲ್ಲವೆಂದು ಪರೋಕ್ಷವಾಗಿ ಹೇಳಿದರು. ಆಗ ಗಿಲ್ಲಿ, ‘ಕೆಜಿಎಫ್’ ಸಿನಿಮಾ ನೆನಪಿಸಿ ಮೋನಿಕಾ ಪಾತ್ರಧಾರಿಯ ಕೈ ಹಿಡಿದು ತಲೆ ಬಾಚಿಸಿಕೊಂಡಿದ್ದು ನಗು ತರಿಸಿತು.

ಇದನ್ನೂ ಓದಿ:ಕಾವ್ಯಾ ಅಪ್ಪ-ಅಮ್ಮನಿಗೂ ಇಷ್ಟವಾದ ಗಿಲ್ಲಿ ನಟ; ಸಿಕ್ತು ವಿಶೇಷ ಉಡುಗೊರೆ

ಹಣದಿಂದ ಅಲ್ಲದಿದ್ದರೂ ತಮ್ಮ ಮಾತುಗಳಿಂದ ಮೋನಿಕಾ ಅನ್ನು ಇಂಪ್ರೆಸ್ ಮಾಡಲು ಮುಂದಾದ ಗಿಲ್ಲಿ, ‘ಮೋನಿಕಾ, ನಿನಗೆ ಬೇಡ ಆತಂಕ’ ಎಂದು ಕವನವನ್ನೇ ಕಟ್ಟಿ ಹೇಳಿದರು. ಗಿಲ್ಲಿಯ ಕವನಕ್ಕೆ ಮೋನಿಕಾ ಫಿದಾ ಸಹ ಆಗಿ ಬಿಟ್ಟರು. ಗಿಲ್ಲಿ ಸಹ ‘ಮೋನಿಕಾ ಐ ಲವ್ ಯೂ’ ಎಂದು ಹೇಳಿಬಿಟ್ಟಿರು, ಮೋನಿಕಾ ಸಹ ಒಪ್ಪಿ ಬಿಟ್ಟಿದ್ದರು, ಆದರೆ ತಾಯಿ ಅಡ್ಡ ಬಂದು ಬಿಟ್ಟರು. ಇದನ್ನೆಲ್ಲ ನೋಡುತ್ತಿದ್ದ ಮನೆ ಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ