ನಾಲ್ಕು ದಿನಕ್ಕೆ ‘ಮಾರ್ಕ್’, ‘45’ ಮಾಡಿದ ಕಲೆಕ್ಷನ್ ಎಷ್ಟು ಕೋಟಿ?
ಡಿಸೆಂಬರ್ 25ರಂದು ತೆರೆಕಂಡ ಕನ್ನಡ ಸಿನಿಮಾಗಳಾದ ‘ಮಾರ್ಕ್’ ಮತ್ತು ‘45’ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿವೆ. ಹೊಸ ವರ್ಷದ ರಜಾದಿನಗಳಲ್ಲಿ ಎರಡೂ ಚಿತ್ರಗಳ ಗಳಿಕೆ ಹೆಚ್ಚುವ ನಿರೀಕ್ಷೆ ಇದೆ. ‘ಮಾರ್ಕ್’ ಚಿತ್ರದಲ್ಲಿ ಸುದೀಪ್ ನಟಿಸಿದರೆ, ‘45’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ, ಉಪೇಂದ್ರ ಹಾಗೂ ಶಿವಣ್ಣ ನಟಿಸಿದ್ದಾರೆ.

ಕನ್ನಡ ಸಿನಿ ಪ್ರಿಯರಿಗೆ ಡಿಸೆಂಬರ್ ತಿಂಗಳು ಸುಗ್ಗಿಯ ಸಮಯ. ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಯಿತು. ಈ ಚಿತ್ರ ರಿಲೀಸ್ ಆದ ಎರಡು ವಾರಗಳ ಬಳಿಕ ‘45’ ಹಾಗೂ ‘ಮಾರ್ಕ್’ ಸಿನಿಮಾ (Mark Movie) ತೆರೆಗೆ (ಡಿಸೆಂಬರ್ 25) ಬಂದವು. ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿವೆ. ಈ ಚಿತ್ರಗಳ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಬಗ್ಗೆ ಇಲ್ಲಿದೆ ವಿವರ.
‘ಮಾರ್ಕ್’ ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರೆ. ಈ ಚಿತ್ರದಲ್ಲಿ ತಮಿಳಿನ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಈ ಸಿನಿಮಾ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿದೆ. ವಿಜಯ್ ಕಾರ್ತಿಕೇಯ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ‘ಮಾರ್ಕ್’ ಶೇಡ್ನಲ್ಲಿಯೇ ಮೂಡಿ ಬಂದಿದೆ ಎಂಬ ಮಾತಿದೆ. ಈ ಚಿತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಈ ಸಿನಿಮಾ ಕಲೆಕ್ಷನ್ ಬಗ್ಗೆ sacnilk ವರದಿ ಮಾಡಿದೆ. ಇದರ ವರದಿ ಪ್ರಕಾರ ಸಿನಿಮಾದ ಒಟ್ಟೂ ಕಲೆಕ್ಷನ್ 18.50 ಕೋಟಿ ರೂಪಾಯಿ ಆಗಿದೆ.
ಮೊದಲ ದಿನ ಈ ಚಿತ್ರ 8.6 ಕೋಟಿ ರೂಪಾಯಿ (sacnilk ವರದಿ ಪ್ರಕಾರ), ಎರಡು, ಮೂರು ಹಾಗೂ ನಾಲ್ಕನೇ ದಿನ ಸಿನಿಮಾ ಸರಾಸರಿ 3.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 18.5 ಕೋಟಿ ರೂಪಾಯಿ ಆಗಿದೆ. ಗ್ರಾಸ್ ಕಲೆಕ್ಷನ್ 22 ಕೋಟಿ ರೂಪಾಯಿ ಆಗಿದೆ.
ಇನ್ನು, ‘45’ ಸಿನಿಮಾಗೆ ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ, ಶಿವರಾಜ್ಕುಮಾರ್, ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾದ ಗ್ರಾಸ್ ಕಲೆಕ್ಷನ್ 15 ಕೋಟಿ ರೂಪಾಯಿ ಸಮೀಪಿಸಿದೆ ಎಂದು sacnilk ಹೇಳಿದೆ. ಈ ಚಿತ್ರ ಮೊದಲ ದಿನ 6 ಕೋಟಿ ರೂಪಾಯಿ ಅಷ್ಟು ಕಲೆಕ್ಷನ್ ಮಾಡಿತು. ನಂತರವೂ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಾ ಇದೆ.
ಇದನ್ನೂ ಓದಿ: ‘ಮಾರ್ಕ್’ ಚಿತ್ರದ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸಿಕ್ತು ಸ್ಪಷ್ಟನೆ
ಈ ಎರಡೂ ಸಿನಿಮಾಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಗಳಿಕೆ ಆಗುವ ನಿರೀಕ್ಷೆ ಇದೆ. ಹೊಸ ವರ್ಷದ ಸಮಯದಲ್ಲಿ ರಜೆ ಇರುತ್ತವೆ. ಇದು ಚಿತ್ರಕ್ಕೆ ಲಾಭ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




