ಕಾವ್ಯಾ ಅಪ್ಪ-ಅಮ್ಮನಿಗೂ ಇಷ್ಟವಾದ ಗಿಲ್ಲಿ ನಟ; ಸಿಕ್ತು ವಿಶೇಷ ಉಡುಗೊರೆ
ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಬಂದಿರುವ ಕಾವ್ಯಾ ಪೋಷಕರಿಗೆ ಗಿಲ್ಲಿ ನಟ ಬಹಳ ಇಷ್ಟ ಆಗಿದ್ದಾರೆ. ಹಾಗಾಗಿ ಗಿಲ್ಲಿಗೆ ಕಾವ್ಯಾ ತಂದೆ ಸದಾನಂದ್ ಅವರು ಒಂದು ವಿಶೇಷವಾದ ಉಡುಗೊರೆ ನೀಡಿದ್ದಾರೆ. ಕಾವ್ಯಾ ಫ್ಯಾಮಿಲಿಯಿಂದ ಸ್ಪೆಷಲ್ ಗಿಫ್ಟ್ ಸಿಕ್ಕಿದ್ದಕ್ಕಾಗಿ ಗಿಲ್ಲಿ ನಟ ಅವರು ಖುಷಿಯಿಂದ ಕುಣಿದಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ (Gilli Nata) ಅವರು ಎಲ್ಲರ ಫೇವರಿಟ್ ಆಗಿದ್ದಾರೆ. ವೀಕ್ಷಕರಿಗೆ ಮಾತ್ರವಲ್ಲದೇ ಸ್ಪರ್ಧಿಗಳ ಕುಟುಂಬದವರಿಗೂ ಗಿಲ್ಲಿ ನಟ ಎಂದರೆ ಇಷ್ಟ. ಈಗಾಗಲೇ ಬಿಗ್ ಬಾಸ್ (BBK 12) ಮನೆಯೊಳಗೆ ಬಂದು ಹೋಗಿರುವ ಫ್ಯಾಮಿಲಿ ಸದಸ್ಯರು ಈ ಮಾತನ್ನು ಹೇಳಿದ್ದಾರೆ. ವಿಶೇಷವಾಗಿ ಕಾವ್ಯಾ ಶೈವ (Kavya Shaiva) ಅವರ ತಂದೆ-ತಾಯಿಗೂ ಗಿಲ್ಲಿ ಇಷ್ಟ ಆಗಿದ್ದಾರೆ. ಅದಕ್ಕಾಗಿ ಒಂದು ವಿಶೇಷ ಗಿಫ್ಟ್ ನೀಡಿದ್ದಾರೆ. ಕಾವ್ಯಾ ತಂದೆ ಸದಾನಂದ್ ಅವರು ಬೆಳ್ಳಿ ಬ್ರಾಸ್ಲೆಟ್ ತಂದು ಗಿಲ್ಲಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಗಿಲ್ಲಿ ಅವರಿಗೆ ಸಖತ್ ಖುಷಿ ಆಗಿದೆ.
ಈ ಮೊದಲು ಬಿಗ್ ಬಾಸ್ ಮನೆಗೆ ಕಾವ್ಯ ತಮ್ಮ ಕಾರ್ತಿಕ್ ಮತ್ತು ತಾಯಿ ಸಾವಿತ್ರಿ ಅವರು ಬಂದಿದ್ದರು. ಆಗ ಅವರು ಬಿಗ್ ಬಾಸ್ ಮನೆಯ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದರು. ಅದಕ್ಕಾಗಿ ಅವರನ್ನು ಕೂಡಲೇ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಅವರು ಬೇಸರ ಮಾಡಿಕೊಂಡು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದು ಸ್ವತಃ ಬಿಗ್ ಬಾಸ್ಗೂ ಇಷ್ಟ ಆಗಿಲ್ಲ. ಹಾಗಾಗಿ ಇನ್ನೊಂದು ಚಾನ್ಸ್ ನೀಡಲಾಗಿದೆ.
ಈ ಬಾರಿ ಕಾವ್ಯಾ ಅವರ ತಾಯಿ ಸಾವಿತ್ರಿ ಹಾಗೂ ತಂದೆ ಸದಾನಂದ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಗಿಲ್ಲಿ ಬಗ್ಗೆ ಅವರು ಮನಸಾರೆ ಮಾತನಾಡಿದ್ದಾರೆ. ಗಿಲ್ಲಿ ಯಾವಾಗಲೂ ರಘು ಅವರ ಕೈಯಲ್ಲಿ ಇರುವ ಬ್ರಾಸ್ಲೆಟ್ ತೆಗೆದುಕೊಳ್ಳುತ್ತಾ ಇರುತ್ತಾರೆ. ಅದು ಗಿಲ್ಲಿಗೆ ಇಷ್ಟ ಎಂಬುದು ಕಾವ್ಯಾ ಫ್ಯಾಮಿಲಿಗೆ ಗೊತ್ತಾಗಿದೆ. ಹಾಗಾಗಿ ಗಿಲ್ಲಿಗೋಸ್ಕರ ಹೊಸ ಬ್ರಾಸ್ಲೆಟ್ ತಂದುಕೊಟ್ಟಿದ್ದಾರೆ.
ಕಾವ್ಯಾ ತಂದೆ ನೀಡಿದ ಉಡುಗೊರೆಯನ್ನು ಗಿಲ್ಲಿ ಖುಷಿಯಿಂದ ಸ್ವೀಕರಿಸಿದ್ದಾರೆ. ಗಿಫ್ಟ್ ಸಿಕ್ಕ ಕೂಡಲೇ ಅವರು ಕುಣಿದಾಡಿದ್ದಾರೆ. ಅವರ ಖುಷಿಯನ್ನು ಕಂಡು ಇಡೀ ಬಿಗ್ ಬಾಸ್ ಮನೆಯ ಸದಸ್ಯರ ಮುಖದಲ್ಲಿ ನಗು ಅರಳಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ಬರಲಿದೆ. ಈ ಸಂದರ್ಭದಲ್ಲಿ ಗಿಲ್ಲಿ ನಟ ಅವರು ಎಲ್ಲರ ಪ್ರೀತಿ ಗಳಿಸುತ್ತಿದ್ದಾರೆ. ಅವರೇ ವಿನ್ ಆಗುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯ.
ಇದನ್ನೂ ಓದಿ: ಕಾವ್ಯಾ ಜತೆ ಮದುವೆ ಬಗ್ಗೆ ಮನಸಾರೆ ಮಾತಾಡಿದ ಗಿಲ್ಲಿ: ಆ ಕಡೆಯಿಂದ ಬಂದ ಉತ್ತರ ಏನು?
ಬಿಗ್ ಬಾಸ್ ಶೋ ಆರಂಭ ಆದಾಗಿನಿಂದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ನಡುವೆ ಒಂದು ಗೆಳೆತನ ಬೆಳೆದಿದೆ. ಈವರೆಗೂ ಆ ಸ್ನೇಹ ಮುರಿದು ಬಿದ್ದಿಲ್ಲ. ಗಿಲ್ಲಿ ಇರುವುದರಿಂದಲೇ ಕಾವ್ಯಾ ಹೈಲೈಟ್ ಆಗುತ್ತಿದ್ದಾರೆ ಎಂಬ ಟೀಕೆ ಅನೇಕ ಬಾರಿ ಕೇಳಿಬಂದಿದೆ. ಆದರೆ ಆ ಮಾತನ್ನು ಗಿಲ್ಲಿ ನಟ ಅವರು ತೆಗೆದು ಹಾಕುತ್ತಿದ್ದಾರೆ. ಯಾರೆಲ್ಲ ಫಿನಾಲೆಗೆ ಬರುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




