Ragad Rashmi: ಹಳ್ಳಿ ಪವರ್ ಶೋ ವಿನ್ನರ್ ಆದ ರಗಡ್ ರಶ್ಮಿ; ಸಿಕ್ಕ ಹಣ ಎಷ್ಟು?
Ragad Rashmi: ಜೀ ಪವರ್‌ನ 'ಹಳ್ಳಿ ಪವರ್' ಶೋ ಫಿನಾಲೆ ಮುಕ್ತಾಯವಾಗಿದೆ. ರಗಡ್ ರಶ್ಮಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ ದೊಡ್ಡ ಬಹುಮಾನ ಮೊತ್ತ ಸಿಕ್ಕಿದೆ. ಘಾಟಿ ಗಾನವಿ ಮೊದಲ ರನ್ನರ್ ಅಪ್, ಸೋನಿಯಾ ಎರಡನೇ ರನ್ನರ್ ಅಪ್ ಆದರು. ಆಗಸ್ಟ್‌ನಲ್ಲಿ ಆರಂಭವಾದ ಶೋ ಬೆಳಗಾವಿ ಕಿತ್ತೂರಿನಲ್ಲಿ ಹಳ್ಳಿಯ ಜೀವನ ಅನುಭವಿಸುವ ಥೀಮ್ ಆಧರಿಸಿತ್ತು. ಅಕುಲ್ ಬಾಲಾಜಿ ಕಾರ್ಯಕ್ರಮ ನಡೆಸಿಕೊಟ್ಟರು.

ಜೀ ಪವರ್ನಲ್ಲಿ ಪ್ರಸಾರ ಕಾಣುತ್ತಾ ಇದ್ದ, ‘ಹಳ್ಳಿ ಪವರ್’ ಶೋ (Halli Power) ಈಗ ಪೂರ್ಣಗೊಂಡಿದೆ. ಡಿಸೆಂಬರ್ 28ರಂದು ಶೋನ ಫಿನಾಲೆ ಪ್ರಸಾರ ಆಗಿದೆ. ಈ ವೇಳೆ ಅಕುಲ್ ಬಾಲಾಜಿ ಅವರು ವಿನ್ನರ್ನ ಘೋಷಣೆ ಮಾಡಿದರು. ಬೆಂಗಳೂರಿನ ರಗಡ್ ರಶ್ಮಿ ಅವರು ವಿನ್ನರ್ ಎಂದು ಘೋಷಿಸಲಾಯಿತು. ಟಾಸ್ಕ್ನಲ್ಲಿ ಮೊದಲಿನಿಂದಲೂ ಟಫ್ ಫೈಟ್ ಕೊಡುತ್ತಾ ಬರುತ್ತಿದ್ದ ಅವರು ಈಗ ಗೆಲುವು ಕಂಡಿದ್ದಾರೆ. ಆಕರ್ಷಕ ಟ್ರೋಫಿ, ಹಣ ಹಾಗೂ ಅಪಾರ ಜನಪ್ರಿಯತೆ ಮೂಲಕ ಅವರು ‘ಹಳ್ಳಿ ಪವರ್’ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ.
‘ಹಳ್ಳಿ ಪವರ್’ ಶೋ ಆಗಸ್ಟ್ ಕೊನೆಯಲ್ಲಿ ಪ್ರಸಾರ ಆರಂಭಿಸಿತು. ನಗರದಿಂದ ಹಳ್ಳಿಗೆ ಬಂದು ಅಲ್ಲಿಯ ಜೀವನ ಅನುಭವಿಸುವ ಥೀಮ್ನಲ್ಲಿ ರಿಯಾಲಿಟಿ ಶೋ ಮೂಡಿಬಂದಿತ್ತು. ಬೆಳಗಾವಿಯ ಕಿತ್ತೂರಿನಲ್ಲಿ ಈ ಶೋ ನಡೆಯಿತು. ಈ ಶೋ ಸಾಕಷ್ಟು ಜನಪ್ರಿಯತೆ ಪಡೆಯಿತು. ಒಳ್ಳೆಯ ಟಿಆರ್ಪಿ ಕೂಡ ಪಡೆಯಿತು. ಸಾಕಷ್ಟು ಮಂದಿ ಶೋನಲ್ಲಿ ಭಾಗವಹಿಸಿದ್ದರು. ಕೊನೆಗೆ ರಶ್ಮಿ ವಿನ್ನರ್ ಆದರೆ, ಘಾಟಿ ಗಾನವಿ ಅವರು ಮೊದಲ ರನ್ನರ್ ಅಪ್ ಆದರು.
ಈ ಶೋನಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಸೋನಿಯಾ ಹೊರಹೊಮ್ಮಿದ್ದಾರೆ. ಅವರಿಗೆ 5 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಕ್ಕಿದೆ. ಸೆಕೆಂಡ್ ರನ್ನರ್ ಅಪ್ ಘಾಟಿ ಗಾನವಿ ಅವರಿಗೆ 7 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಇನ್ನು, ವಿನ್ನರ್ ರಗಡ್ ರಶ್ಮಿ ಅವರಿಗೆ ಆಕರ್ಷಕ ಟ್ರೋಫಿ ಜೊತೆ 10 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಕ್ಕಿದೆ. ಇದನ್ನು ಅವರು ಖುಷಿಯಿಂದ ಸ್ವೀಕರಿಸಿದರು.
View this post on Instagram
ಆ ಬಳಿಕ ಮಾತನಾಡಿದ ರಶ್ಮಿ, ‘ನಿಮ್ಮ ಪ್ರೀತಿ ಇಲ್ಲಿಗೆ ತಂದು ನಿಲ್ಲಿಸಿದೆ. ನಾನು ಹರಿಸಿದ ಬೆವರು, ರಕ್ತಕ್ಕೆ ಎಲ್ಲದಕ್ಕೂ ಪ್ರತಿಫಲ ಸಿಕ್ಕಿದೆ. ಅನ್ನ ಹಾಕಿದೀರಿ, ಆಶ್ರಯ ಕೊಟ್ಟಿದೀರಿ. ವೋಟ್ ಹಾಕಿ ಗೆಲ್ಲಿಸಿದ್ದಕ್ಕೆ ಧನ್ಯವಾದ. ಅಕುಲ್ ಅವರೇ ನೀವು ಸಾಕಷ್ಟು ಮೋಟಿವೇಷನ್ ಕೊಟ್ಟಿದೀರಾ. ಈ ಕಲ್ಲು ಶಿಲೆ ಆಗಿದೆ’ ಎಂದರು. ರಶ್ಮಿ ಅವರು ತುಂಬಾನೇ ಟಫ್ ಕಾಂಪಿಟೇಟರ್ ಆಗಿದ್ದರು. ಅವರು ಬಿಗ್ ಬಾಸ್ಗೆ ಬರಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: ‘ಹಳ್ಳಿ ಪವರ್’ ಅಲ್ಲಿ ಶಾಕಿಂಗ್ ಘಟನೆ: ಸ್ಪರ್ಧಿಗಳ ಮೈಮೇಲೆ ಬಂತು ದೇವರು
ಹಳ್ಳಿ ಪವರ್ನಲ್ಲಿ ಅನೇಕರು ಗಾಯಗೊಂಡು ಹೊರಕ್ಕೆ ಹೋಗಿದ್ದರು. ಕೆಲವರನ್ನು ವೈಲ್ಡ್ ಕಾರ್ಡ್ ಮೂಲಕವೂ ತರಲಾಯಿತು.ಅಕುಲ್ ಬಾಲಾಜಿ ಅವರು ಶೋನ ನಡೆಸಿಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Mon, 29 December 25




