AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಪ್ಟನ್​ ಆದ ಮರುದಿನವೇ ಚಕ್ರವರ್ತಿಗೆ ದ್ರೋಹ ಬಗೆದ ರಘು; ಮಾಡಿದ ಸಹಾಯ ಇಷ್ಟು ಬೇಗ ಮರೆತೋಯ್ತಾ?

ಕ್ಯಾಪ್ಟನ್​ ಆದ ನಂತರ ರಘು ಹಾಗೂ ಚಕ್ರವರ್ತಿ ಚಂದ್ರಚೂಡ್​ ನಡುವೆ ಘನಘೋರ ಜಗಳವೊಂದು ನಡೆದಿದೆ. ಕಲರ್ಸ್​ ಕನ್ನಡ ವಾಹಿನಿ ಇಂದು ಪ್ರೋಮೋ ಒಂದನ್ನು ಹಂಚಿಕೊಂಡಿದೆ.

ಕ್ಯಾಪ್ಟನ್​ ಆದ ಮರುದಿನವೇ ಚಕ್ರವರ್ತಿಗೆ ದ್ರೋಹ ಬಗೆದ ರಘು; ಮಾಡಿದ ಸಹಾಯ ಇಷ್ಟು ಬೇಗ ಮರೆತೋಯ್ತಾ?
ರಘು ಗೌಡ-ಚಕ್ರವರ್ತಿ ಚಂದ್ರಚೂಡ್
ರಾಜೇಶ್ ದುಗ್ಗುಮನೆ
|

Updated on: Apr 26, 2021 | 7:17 PM

Share

ಬಿಗ್​ ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಒಬ್ಬರಿಗೊಬ್ಬರು ಆಟ್ಯಾಚ್​ ಆಗಿದ್ದಂತೆ ತೋರಿಸಿಕೊಳ್ಳುತ್ತಾರೆ. ಆದರೆ, ಕಷ್ಟದ ಸಮಯ ಬಂದರೆ ಹಿಂದುಮುಂದು ನೋಡದೆ ನಂಬಿದವರನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಾರೆ. ಈ ರೀತಿಯ ಘಟನೆಗಳು ಬಿಗ್​ ಬಾಸ್​ ಮನೆಯಲ್ಲಿ ಅನೇಕ ಬಾರಿ ನಡೆದಿವೆ. ಈಗ ಇಂತಹುದೇ ಘಟನೆ ಮತ್ತೆ ಮರುಕಳಿಸಿದೆ. ಕ್ಯಾಪ್ಟನ್​ ಆದ ಬೆನ್ನಲ್ಲೇ ರಘು ಗೌಡ ದ್ರೋಹ ಬಗೆದ ಆರೋಪ ಕೇಳಿ ಬಂದಿದೆ.

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಎಂಟು ವಾರ ಪೂರೈಸಿ 9ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಈ ವಾರ ರಘು ಗೌಡ ಕ್ಯಾಪ್ಟನ್​. ಅವರ ನೇತೃತ್ವದಲ್ಲಿ ಮನೆ ಸಾಗಲಿದೆ. ಅವರು ಕ್ಯಾಪ್ಟನ್​ ಆಗೋಕೆ ಪ್ರಶಾಂತ್​ ಸಂಬರಗಿ, ಅರವಿಂದ್​, ಚಕ್ರವರ್ತಿ ಚಂದ್ರಚೂಡ್​ ಕೂಡ ಕಾರಣರು.

ಕ್ಯಾಪ್ಟನ್ಸಿ ಟಾಸ್ಕ್​​ ವೇಳೆ ಮನೆಯ ಅನೇಕ ಸದಸ್ಯರು ರಘುಗೆ ಸಹಾಯ ಮಾಡಿದ್ದರು. ಟಾಸ್ಕ್​ ಮುಗಿದು ಕ್ಯಾಪ್ಟನ್​ ಆದ ನಂತರ ರಘು ಬಗ್ಗೆ ಮಾತನಾಡಿದ್ದ ಪ್ರಶಾಂತ್​ ಸಂಬರಗಿ, ಆತ ಕೃತಜ್ಞನಾಗಿರುತ್ತಾನೋ ಅಥವಾ ಕೃತಘ್ನನಾಗುತ್ತಾನೋ ಎನ್ನುವುದನ್ನು ನೋಡಬೇಕು ಎಂದಿದ್ದರು. ರಘು ಅವರನ್ನು ತಮ್ಮತ್ತ ಸೆಳೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ಪ್ರಶಾಂತ್​ ಹಾಗೂ ಚಕ್ರವರ್ತಿ ಸಹಾಯ ಮಾಡಿದ್ದರು ಎಂಬುದು ಸ್ಪಷ್ಟವಾಗಿದೆ.

ಕ್ಯಾಪ್ಟನ್​ ಆದ ನಂತರ ರಘು ಹಾಗೂ ಚಕ್ರವರ್ತಿ ಚಂದ್ರಚೂಡ್​ ನಡುವೆ ಘನಘೋರ ಜಗಳವೊಂದು ನಡೆದಿದೆ. ಕಲರ್ಸ್​ ಕನ್ನಡ ವಾಹಿನಿ ಇಂದು ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ, ನನಗೆ ಕ್ಯಾಪ್ಟನ್​ ಬೆಳಗ್ಗೆ ಸಕ್ಕರೆ ಕಡಿಮೆ ಹಾಕ್ಕೊಳ್ಳಿ ಎಂದರು. ನನಗೆ ಅವಮಾನ ಆಯ್ತು ಎಂದಿದ್ದಾರೆ ಚಕ್ರವರ್ತಿ. ಆಗ ಉತ್ತರಿಸಿದ ರಘು, ನೀವು ಅನಾವಶ್ಯಕ ಜಗಳ ಮಾಡ್ತೀರಾ. ಕೆಲವೊಂದು ವಿಚಾರಗಳನ್ನು ಜಗಳ ಮಾಡಬೇಕು ಎನ್ನುವ ಕಾರಣಕ್ಕೆ ಎತ್ತಿ ಎತ್ತಿ ಹೇಳ್ತೀರಾ ಎಂದರು.

ದಯವಿಟ್ಟು ನನ್ನನ್ನು ಟಾರ್ಗೆಟ್ ಮಾಡಬೇಡಿ ಎಂದು ಚಕ್ರವರ್ತಿ ಮನವಿ ಮಾಡಿಕೊಂಡರು. ಇದಕ್ಕೆ ಕಟುವಾಗೇ ಉತ್ತರಿಸಿದ ರಘು, ಟಾರ್ಗೆಟ್​ ಮಾಡ್ತೀರಾ ಎಂಬುದನ್ನು ಪದೇಪದೇ ಒತ್ತಿ ಹೇಳಿ ಅದನ್ನು ತಲೆಯಲ್ಲಿ ತುಂಬಿಸುತ್ತಿದ್ದೀರಾ ಎಂದರು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.

ರಘು ಕ್ಯಾಪ್ಟನ್​ ಆಗೋಕೆ ನಾನು ಕಾರಣ ಎಂಬುದು ಚಕ್ರವರ್ತಿ ತಲೆಯಲ್ಲಿದೆ. ಈಗ ಕ್ಯಾಪ್ಟನ್​ ಆದ ಎರಡೇ ದಿನಕ್ಕೆ ಜಗಳ ನಡೆದಿರುವುದು ಚಕ್ರವರ್ತಿಗೆ ಬೇಸರ ಮೂಡಿಸಿದೆ. ರಘು ನನಗೆ ದ್ರೋಹ ಬಗೆದಿದ್ದಾರೆ ಎನ್ನುವುದು ಅವರ ತಲೆಯಲ್ಲಿ ಮೂಡಿದ್ದರೂ ಮೂಡಿರಬಹುದು.

ಇದನ್ನೂ ಓದಿ: ವೈಷ್ಣವಿ ಜತೆ ರಘು ಗೌಡ ಕ್ಲೋಸ್​ ಆಗಿರೋ ಬಗ್ಗೆ ಅವರ ಪತ್ನಿ ವಿದ್ಯಾಶ್ರೀ ಹೇಳಿದ್ದೇನು?

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಭಾರತ ಪ್ರಜಾತಂತ್ರದ ತಾಯಿ: ಬ್ಲೂಮ್​ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ