ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಲ್ಲುತ್ತಿದೆ. ಇದು ಸ್ಪರ್ಧಿಗಳ ಜತೆಗೆ ವೀಕ್ಷಕರಿಗೂ ಬೇಸರ ಮೂಡಿಸಿದೆ. ಕೊರೊನಾ ಸಂದರ್ಭದಲ್ಲಿ ಮನರಂಜನೆ ಪಡೆಯೋಕೆ ಇದ್ದ ಒಂದು ರಿಯಾಲಿಟಿ ಶೋ ಕೂಡ ನಿಲ್ಲುತ್ತಿದೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಕನಸು ಕೊನೆಗೂ ನನಸಾಗಲೇ ಇಲ್ಲ.
ಬಿಗ್ ಬಾಸ್ ಸೀಸನ್ 8 ಯಶಸ್ವಿಯಾಗಿ 10 ವಾರ ಪೂರೈಸಿ 11ನೇ ವಾರಕ್ಕೆ ಕಾಲಿಟ್ಟಿತ್ತು. ಆದರೆ, ಕೊರೊನಾ ಕಾರಣದಿಂದ ಬಿಗ್ ಬಾಸ್ ಶೋ ನಿಲ್ಲುತ್ತಿದೆ. ಇಂದು ಕೊನೆಯ ಎಪಿಸೋಡ್ ಪ್ರಸಾರವಾಗುತ್ತಿದೆ. ಈ ಶೋ ಮುಗಿದ ನಂತರದಲ್ಲಿ ಕಲರ್ಸ್ ಕನ್ನಡ ವಾಹಿನಿ ಎಲ್ಲಾ ಸ್ಪರ್ಧಿಗಳನ್ನು ಅವರವರ ಮನೆಗೆ ತಲುಪಿಸುತ್ತಿದೆ. ಭಾರದ ಮನಸ್ಸಿನಿಂದಲೇ ಸ್ಪರ್ಧಿಗಳು ಮನೆಯಿಂದ ಹೊರ ಹೋಗುತ್ತಿದ್ದಾರೆ. ಅದರಲ್ಲೂ ಮಹಿಳಾ ಸ್ಪರ್ಧಿಗಳಲ್ಲಿ ಒಂದು ಕೊರಗು ಹಾಗೆಯೇ ಉಳಿದುಕೊಂಡಿದೆ.
ಬಿಗ್ ಬಾಸ್ ಮನೆ ಒಳಗೆ ಬಂದಾಗಿನಿಂದಲೂ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್ ಹಾಗೂ ವೈಷ್ಣವಿ ಗೌಡಗೆ ತಾವು ಮನೆಯ ಕ್ಯಾಪ್ಟನ್ ಆಗಬೇಕು ಎನ್ನುವ ಆಸೆ ಇತ್ತು. ಸೀಸನ್ 8 ಆರಂಭವಾದಾಗಿನಿಂದಲೂ ಟಾಸ್ಕ್ ಗೆದ್ದು ಪುರುಷರೇ ಮನೆಯ ಕ್ಯಾಪ್ಪನ್ ಆಗಿದ್ದಾರೆ. ಹೀಗಾಗಿ, ಒಮ್ಮೆಯಾದರೂ ಮಹಿಳೆಯರು ಕ್ಯಾಪ್ಟನ್ ಆಗಬೇಕು ಎನ್ನುವ ಆಸೆ ಅವರದ್ದಾಗಿತ್ತು.
ಅನೇಕ ಟಾಸ್ಕ್ಗಳಲ್ಲಿ ಮಹಿಳೆಯರು ಕ್ಯಾಪ್ಟನ್ ಆಗುವುದು ಕೂದಲೆಳೆ ಅಂತರದಲ್ಲಿ ತಪ್ಪಿ ಹೋಗಿತ್ತು. ದಿವ್ಯಾ ಸುರೇಶ್ ಅನೇಕ ಬಾರಿ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗಿದ್ದರೂ ಗೆಲ್ಲೋಕೆ ಸಾಧ್ಯವಾಗಿಲ್ಲ. 11ನೇ ವಾರವೂ ಶುಭಾ, ವೈಷ್ಣವಿ, ಶಮಂತ್ ಪ್ರಶಾಂತ್ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿದ್ದರು. ಈ ಬಾರಿ ಸುಲಭ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಪ್ರಶಾಂತ್ ಗೆದ್ದಿದ್ದರು. ಈ ವೇಳೆ ಶುಭಾ ಪೂಂಜಾ ಸಾಕಷ್ಟು ನೊಂದುಕೊಂಡಿದ್ದರು. ಸಿಕ್ಕ ಅವಕಾಶ ಕೈ ತಪ್ಪಿ ಹೋಯಿತಲ್ಲ ಎಂದು ಬೇಸರ ಮಾಡಿಕೊಂಡಿದ್ದರು. ಈಗ ಬಿಗ್ ಬಾಸ್ ಅರ್ಧಕ್ಕೆ ನಿಂತಿದ್ದರಿಂದ ಇವರ ಕನಸು ಪೂರ್ತಿ ಆಗುತ್ತಿಲ್ಲ.
ಇದನ್ನೂ ಓದಿ: ದೇವರು ಯಾಕೆ ಹೀಗೆ ಮಾಡ್ತಿದ್ದಾನೋ ಗೊತ್ತಿಲ್ಲ; ಬಿಗ್ ಬಾಸ್- 8 ನಿಂತಿದ್ದಕ್ಕೆ ಪ್ರಥಮ್ ಬೇಸರ
Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ನಡೆಯಿತು ಯಾರೂ ಊಹಿಸಿರದ 3 ವಿಚಿತ್ರ ಘಟನೆಗಳು