Bigg Boss Kannada: ಬಿಗ್​ ಬಾಸ್​ ಕನ್ನಡ ಸೀಸನ್​​ 8ರಲ್ಲಿ ನಡೆಯಿತು ಯಾರೂ ಊಹಿಸಿರದ 3 ವಿಚಿತ್ರ ಘಟನೆಗಳು

BBK8: ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲಿ ನಡೆಯದೇ ಇರುವ ಮೂರು ವಿಚಿತ್ರ ಘಟನೆಗಳಿಗೆ ಈ ಸೀಸನ್​ ಸಾಕ್ಷಿ ಆಯಿತು. ಅವು ಯಾವವು ಎಂಬುದಕ್ಕೆ ಇಲ್ಲಿದೆ ವಿವರ.

Bigg Boss Kannada: ಬಿಗ್​ ಬಾಸ್​ ಕನ್ನಡ ಸೀಸನ್​​ 8ರಲ್ಲಿ ನಡೆಯಿತು ಯಾರೂ ಊಹಿಸಿರದ 3 ವಿಚಿತ್ರ ಘಟನೆಗಳು
ಬಿಗ್​ ಬಾಸ್​ ಕನ್ನಡ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: May 09, 2021 | 3:22 PM

ಬಿಗ್​ ಬಾಸ್​ ಎಂದರೆ ಅಲ್ಲಿ ವಿವಾದಗಳು ಏಳೋದು ಸಾಮಾನ್ಯ. ಕನ್ನಡ ಬಿಗ್​ ಬಾಸ್​​ನ ಕಳೆದ ಏಳು ಸೀಸನ್​ಗಳಲ್ಲಿ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು. ಈ ಬಾರಿಯ ಕನ್ನಡ ಬಿಗ್​ ಬಾಸ್​ ಸೀಸನ್​-8ನಲ್ಲಿ ಕಾಂಟ್ರವರ್ಸಿಗಳು ಅಷ್ಟಾಗಿ ಕಾಣಿಸಿಲ್ಲ. ಆದರೆ, ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲಿ ನಡೆಯದೇ ಇರುವ ಮೂರು ವಿಚಿತ್ರ ಘಟನೆಗಳಿಗೆ ಈ ಸೀಸನ್​ ಸಾಕ್ಷಿ ಆಯಿತು. ಅವು ಯಾವವು ಎಂಬುದಕ್ಕೆ ಇಲ್ಲಿದೆ ವಿವರ.

 ಸ್ವಯಂ ನಿರ್ಗಮನ

ಬಿಗ್​ ಬಾಸ್​ ಸೇರಿದ ನಂತರ ಸ್ಪರ್ಧಿಗಳ ನಡುವೆ ಒಂದು ಬಾಂಡಿಂಗ್​ ಬೆಳೆಯುತ್ತದೆ. ಹೀಗಾಗಿ, ಎಲಿಮಿನೇಷನ್​ ಆದರೂ ಮನೆಯಿಂದ ಹೊರ ಹೋಗೋಕೆ ಸಂಕಟ ಪಡುತ್ತಾರೆ. ಆದರೆ, ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ವಯಂ ನಿರ್ಗಮನ ಆಗಿತ್ತು. ನಟಿ ವೈಜಯಂತಿ ಅಡಿಗ ವೈಲ್ಡ್​ ಕಾರ್ಡ್​ ಮೂಲಕ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದರು. ಮನೆ ಸೇರಿದ ಎರಡೇ ದಿನಕ್ಕೆ ಅವರಿಗೆ ಸಾಕಾಗಿತ್ತು. ಹೀಗಾಗಿ, ನನ್ನ ಹತ್ತಿರ ಇಲ್ಲಿರೋಕೆ ಆಗುತ್ತಿಲ್ಲ. ನಾನು ಬಿಗ್​ ಬಾಸ್​ ಮನೆಯಿಂದ ಹೊರ ಹೋಗುತ್ತೇನೆ ಎಂದು ಹೇಳಿದ್ದರು.

ವೈಜಯಂತಿ ಅಡಿಗ ಅವರ ಬೇಡಿಕೆ ಕಿಚ್ಚ ಸುದೀಪ್​ ಕಿವಿಗೂ ಬಿದ್ದಿತ್ತು. ಎಲಿಮಿನೇಷನ್​ ಸಮಯದಲ್ಲಿ ಮನೆಯಿಂದ ಹೊರ ಹೋಗುವ ಆಯ್ಕೆಯನ್ನು ವೈಜಯಂತಿ ಮುಂದಿಡಲಾಯಿತು. ಇದನ್ನು ಒಪ್ಪಿ ಅವರು ಹೊರ ನಡೆದರು. ಎಲಿಮಿನೇಟ್​ ಆಗಿದ್ದ ಶಮಂತ್​ ಮನೆಯಲ್ಲಿ ಮುಂದುವರಿದರು.

ಕಿಚ್ಚ ಸುದೀಪ್​ ಗೈರು

ಬಿಗ್​ ಬಾಸ್ ಯಶಸ್ವಿಯಾಗಿ​ ಏಳು ಸೀಸನ್​ ಪೂರ್ಣಗೊಳಿಸಿದೆ. ಎಂಟನೇ ಸೀಸನ್​ ಅರ್ಧಕ್ಕೆ ನಿಂತಿದೆ. ಕಳೆದ ಏಳೂ ಸೀಸನ್​ಗಳಲ್ಲಿ ಕಿಚ್ಚ ಸುದೀಪ್​ ವಾರಾಂತ್ಯದ ಪಂಚಾಯ್ತಿ ಮಿಸ್​ ಮಾಡಿಕೊಂಡವರೇ ಅಲ್ಲ. ಸಿನಿಮಾ ಶೂಟಿಂಗ್​​ಗಾಗಿ ಎಲ್ಲೇ ತೆರಳಿದ್ದರೂ ವೀಕೆಂಡ್​ನಲ್ಲಿ ಬೆಂಗಳೂರಿಗೆ ಬಂದು ಬಿಗ್​ ಬಾಸ್​ ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದರು.

ಆದರೆ, ಈ ಬಾರಿ ಹಾಗಾಗಿಲ್ಲ. ಸುದೀಪ್​ಗೆ ಅನಾರೋಗ್ಯ ಕಾಡಿದ್ದರಿಂದ ಎರಡು ವಾರ ಶೋಗೆ ಗೈರಾದರು. ಆ ವೇಳೆಗಾಗಲೇ ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹೆಚ್ಚಿತ್ತು. ಇದರಿಂದ ಕಲರ್ಸ್​ ಕನ್ನಡ ವಾಹಿನಿ ಈ ಸಂದರ್ಭದಲ್ಲಿ ಶೂಟಿಂಗ್​ ಸೂಕ್ತವಲ್ಲ ಎನ್ನುವ ನಿರ್ಧಾರಕ್ಕೆ ಬಂದಿತ್ತು. ಹೀಗಾಗಿ, ಕಳೆದ ವಾರವೂ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್​ ಪಾಲ್ಗೊಂಡಿಲ್ಲ.

 ಅರ್ಧಕ್ಕೆ ನಿಂತ ಬಿಗ್​ ಬಾಸ್​

ಬಿಗ್​ ಬಾಸ್​ ಏಳು ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಆದರೆ, ಎಂಟನೇ ಸೀಸನ್​ಗೆ ವಿಘ್ನ ಎದುರಾಗಿದೆ. ಕೊರೊನಾ ವೈರಸ್​ ಎರಡನೇ ಅಲೆ ಮಿತಿ ಮೀತಿ ಹರಡುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿದೆ. ಹೀಗಾಗಿ ಚಿತ್ರೀಕರಣ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣ ಆದ್ದರಿಂದ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲುತ್ತಿದೆ. ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲಿ ಈ ರೀತಿ ಘಟಿಸುತ್ತಿರುವುದು ಇದೇ ಮೊದಲು. ಕಳೆದ ವರ್ಷ ಕೊರೊನಾ ವೈರಸ್​ ಮೊದಲನೇ ಅಲೆಯಿಂದಾಗಿ ಮಲಯಾಳಂ ಬಿಗ್​ ಬಾಸ್​ ನಿಂತಿತ್ತು.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ರದ್ದು; ವಿನ್ನರ್​ ಯಾರು ಎಂದು ತೀರ್ಮಾನ ಮಾಡಿದ ಪ್ರೇಕ್ಷಕರು

ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಈಡೇರಿತು ರಘು ಗೌಡ ಆಸೆ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ