AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಈಡೇರಿತು ರಘು ಗೌಡ ಆಸೆ

ಬಿಗ್​ ಬಾಸ್​ ಮನೆಯಲ್ಲಿ ಉತ್ತಮ ಹಾಗೂ ಕಳಪೆ ಎನ್ನುವ ಪಟ್ಟವನ್ನು ಪ್ರತಿ ವಾರವೂ ನೀಡಲಾಗುತ್ತದೆ. ಉತ್ತಮ ಎನಿಸಿಕೊಂಡವರಿಗೆ ಪದಕ ಸಿಗುತ್ತದೆ. ಕಳಪೆ ಪಟ್ಟ ಪಡೆದುಕೊಂಡವರು ಕೈದಿಯಂತೆ ಒಂದು ದಿನ ಜೈಲಿನಲ್ಲಿ ಕಳೆಯಬೇಕು.

ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಈಡೇರಿತು ರಘು ಗೌಡ ಆಸೆ
ರಘು ಗೌಡ
ರಾಜೇಶ್ ದುಗ್ಗುಮನೆ
| Edited By: |

Updated on: May 09, 2021 | 2:31 PM

Share

ಬಿಗ್​ ಬಾಸ್​ ಮನೆ ಒಳಗೆ ಬಂದ ನಂತರದಲ್ಲಿ ಎಲ್ಲಾ ಸ್ಪರ್ಧಿಗಳು ಗೆಲ್ಲಬೇಕು ಎಂದು ಕನಸು ಇಟ್ಟುಕೊಂಡಿರುತ್ತಾರೆ. ಇದರ ಜತೆಗೆ ಪ್ರತೀ ಸ್ಪರ್ಧಿಗೆ ಒಂದಲ್ಲಾ ಒಂದು ಆಸೆ ಇದ್ದೇ ಇರುತ್ತದೆ. ದಿವ್ಯಾ ಸುರೇಶ್​ಗೆ ಕ್ಯಾಪ್ಟನ್​ ಆಗಬೇಕು ಎನ್ನುವ ಆಸೆ ಇತ್ತು. ಆದರೆ, ಆ ಆಸೆ ಕೊನೆಗೂ ಈಡೇರಲೇ ಇಲ್ಲ. ಈಗ ಮನೆಯವರೆಲ್ಲರೂ ಸೇರಿ ರಘು ಗೌಡ ಅವರ ಆಸೆಯನ್ನು ಈಡೇರಿಸಿದ್ದಾರೆ. ಅಷ್ಟಕ್ಕೂ ರಘು ಇಟ್ಟುಕೊಂಡಿದ್ದ ಆಸೆ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಮನೆಯಲ್ಲಿ ಉತ್ತಮ ಹಾಗೂ ಕಳಪೆ ಎನ್ನುವ ಪಟ್ಟವನ್ನು ಪ್ರತಿ ವಾರವೂ ನೀಡಲಾಗುತ್ತದೆ. ಉತ್ತಮ ಎನಿಸಿಕೊಂಡವರಿಗೆ ಪದಕ ಸಿಗುತ್ತದೆ. ಕಳಪೆ ಪಟ್ಟ ಪಡೆದುಕೊಂಡವರು ಕೈದಿಯಂತೆ ಒಂದು ದಿನ ಜೈಲಿನಲ್ಲಿ ಕಳೆಯಬೇಕು. ಪ್ರಶಾಂತ್​ ಸಂಬರಗಿ, ಶಮಂತ್​ ಸೇರಿ ಅನೇಕರು ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಆದರೆ, ರಘು ಗೌಡ ಒಮ್ಮೆಯೂ ಕಳಪೆ ಎನಿಸಿಕೊಂಡಿರಲಿಲ್ಲ.

ಆರಂಭದಲ್ಲಿ ತುಂಬಾನೇ ಸೈಲೆಂಟ್ ಇದ್ದ ರಘು ನಂತರ ಸುದೀಪ್​ ಕಿವಿಮಾತು ಹೇಳಿದ ನಂತರದಲ್ಲಿ ಬದಲಾಗಿದ್ದರು. ಮನೆಯಲ್ಲಿ ಸಾಕಷ್ಟು ಆ್ಯಕ್ಟಿವ್​ ಇದ್ದಿದ್ದರಿಂದ ಅವರಿಗೆ ಕಳಪೆ ಪಟ್ಟ ಸಿಕ್ಕಿರಲಿಲ್ಲ. ಹೀಗಾಗಿ, ಕೆಲ ವಾರಗಳ ಹಿಂದೆ ಪ್ರತಿಯೊಬ್ಬ ಸ್ಪರ್ಧಿಯ ಬಳಿಯೂ ಹೋಗಿ, ನನಗೆ ಕಳಪೆ ನೀಡಿ. ಜೈಲು ವಾಸ ಹೇಗಿರುತ್ತದೆ ಎಂದು ನೋಡಿಬರಬೇಕು ಎಂದು ಹೇಳಿದ್ದರು. ಅದು ಕೊನೆಯ ವಾರ ಈಡೇರಿದಂತಾಗಿದೆ.

ಬಿಗ್​ ಬಾಸ್​ ಕ್ಯಾಪ್ಟನ್ಸಿ ಟಾಸ್ಕ್​ ಒಂದನ್ನು ನೀಡಿದ್ದರು. ನಿಯಮದ ಪ್ರಕಾರ ಟಾಸ್ಕ್​ ಮುಗಿದ ಮೇಲೆ ಐಟಮ್​ಗಳನ್ನು ಯಾರೂ ಮುಟ್ಟುವಂತಿರಲಿಲ್ಲ. ಈ ಸೂಚನೆ ಗೊತ್ತಿದ್ದೂ ರಘು ಹೋಗಿ ಟಾಸ್ಕ್​ ಉಪಕರಣಗಳನ್ನು ಮುಟ್ಟಿದ್ದರು. ಹೀಗಾಗಿ, ಮನೆಯವರಿಗೆ ಟೀ-ಕಾಫಿ ನೀಡುವುದನ್ನು ನಿಲ್ಲಿಸಲಾಗಿತ್ತು. ಎಲ್ಲರೂ ಕಳಪೆ ಪಟ್ಟವನ್ನು ರಘು ಗೌಡ ಅವರಿಗೆ ನೀಡಿದ್ದರಿಂದ ಕೊನೆಯ ವಾರ ಅವರು ಜೈಲಿಗೆ ಹೋದರು. ಈ ಮೂಲಕ ಅವರ ಆಸೆ ಈಡೇರಿದೆ.

ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಇದರ ತಡೆಗೆ ಸರ್ಕಾರ ನಾನಾ ಕ್ರಮ ಕೈಗೊಂಡಿದೆ. ಅದೇ ರೀತಿ ಧಾರಾವಾಹಿ, ಸಿನಿಮಾ ಹಾಗೂ ರಿಯಾಲಿಟಿ ಶೋ ಶೂಟಿಂಗ್​ಗೆ ಸರ್ಕಾರ ಬ್ರೇಕ್​ ಹಾಕಿದೆ. ಪರಿಣಾಮ ಬಿಗ್​ ಬಾಸ್​ ಶೋ ಅರ್ಧಕ್ಕೆ ನಿಲ್ಲುತ್ತಿದೆ.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ರದ್ದಾಗಿದ್ದು ಯಾಕೆ? ಟ್ರೋಲ್​ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ

Kichcha Sudeep: ಬಿಗ್​ ಬಾಸ್​ ಸ್ಪರ್ಧಿ ಸೋನು ಪಾಟೀಲ್​ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ಕಿಚ್ಚ ಸುದೀಪ್​

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ