AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಟ್​ ಡ್ಯಾನ್ಸ್​ ಮೂಲಕ ಪಡ್ಡೆಗಳ ನಿದ್ದೆ ಕೆಡಿಸಿದ ಬಿಗ್​ ಬಾಸ್​ ಸ್ಪರ್ಧಿ ರಶ್ಮಿ

ಎಲ್ಲೆಲ್ಲೂ ಕೊರೊನಾ ಕಾಟ ಕೊಡುತ್ತಿದೆ. ಇಂಥ ಸಂದರ್ಭದಲ್ಲಿ ರಸ್ತೆಗೆ ಬಂದು ಡ್ಯಾನ್ಸ್​ ಮಾಡುವ ಬದಲು ಮನೆಯೊಳಗೆ ಇರಬೇಕು ಎಂಬುದಾಗಿಯೂ ಅನೇಕರು ರಶ್ಮಿಗೆ ಬುದ್ಧಿಮಾತು ಹೇಳಿದ್ದಾರೆ.

ಹಾಟ್​ ಡ್ಯಾನ್ಸ್​ ಮೂಲಕ ಪಡ್ಡೆಗಳ ನಿದ್ದೆ ಕೆಡಿಸಿದ ಬಿಗ್​ ಬಾಸ್​ ಸ್ಪರ್ಧಿ ರಶ್ಮಿ
ರಶ್ಮಿ ದೇಸಾಯಿ ವೈರಲ್​ ಡ್ಯಾನ್ಸ್​ ವಿಡಿಯೋ
ಮದನ್​ ಕುಮಾರ್​
| Edited By: |

Updated on: May 09, 2021 | 3:47 PM

Share

ದೇಶದ ಬಹುತೇಕ ಕಡೆಗಳಲ್ಲಿ ಲಾಕ್​ಡೌನ್​ ಜಾರಿ ಆಗಿದೆ. ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಶೂಟಿಂಗ್​ ನಿಂತಿದೆ. ಈ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಲು ಸೆಲೆಬ್ರಿಟಿಗಳೆಲ್ಲ ಸೋಶಿಯಲ್​ ಮೀಡಿಯಾ ಮೊರೆ ಹೋಗುತ್ತಿದ್ದಾರೆ. ಕಿರುತೆರೆಯ ಖ್ಯಾತ ನಟಿ, ಬಿಗ್​ ಬಾಸ್​ ಸ್ಪರ್ಧಿ ರಶ್ಮಿ ದೇಸಾಯಿ ಕೂಡ ಇನ್​ಸ್ಟಾಗ್ರಾಮ್​ನಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅದನ್ನು ಕಂಡು ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿದೆ.

ಬಾಲಿವುಡ್​ ಸಿನಿಮಾ ಮತ್ತು ಹಿಂದಿ ಕಿರುತೆರೆಯಲ್ಲಿ ನಟಿ ರಶ್ಮಿ ದೇಸಾಯಿ ಸಖತ್​ ಫೇಮಸ್​. ಹಿಂದಿ ಬಿಗ್​ ಬಾಸ್​ 13ರಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಿತು. ಆ ಸೀಸನ್​ನಲ್ಲಿ ಅವರು 3ನೇ ರನ್ನರ್​ ಅಪ್​ ಆಗಿದ್ದರು. ಪ್ರಸ್ತುತ ರಶ್ಮಿಗೆ ಇನ್​​ಸ್ಟಾಗ್ರಾಮ್​ನಲ್ಲಿ 42 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಇದ್ದಾರೆ. ಅವರೆಲ್ಲರಿಗಾಗಿ ರಶ್ಮಿ ಹಂಚಿಕೊಂಡಿರುವ ಒಂದು ವಿಡಿಯೋ ಈಗ ಸಖತ್​ ವೈರಲ್​ ಆಗಿದೆ. ಹಾಲಿವುಡ್​ನ ರ‍್ಯಾಪ್ ಸಿಂಗರ್​ ಕಾರ್ಡಿ ಬಿ ಅವರ ‘ಅಪ್’ ಹಾಡಿಗೆ ರಶ್ಮಿ ಸೂಪರ್​ ಆಗಿ ಹೆಜ್ಜೆ ಹಾಕಿದ್ದಾರೆ.

ಗ್ಲಾಮರಸ್​ ಆದಂತಹ ಕಾಸ್ಟ್ಯೂಮ್​ ಧರಿಸಿ ರಶ್ಮಿ ಡ್ಯಾನ್ಸ್​ ಮಾಡಿದ್ದಾರೆ. 20 ಲಕ್ಷಕ್ಕೂ ಅಧಿಕ ಬಾರಿ ಈ ವೀಕ್ಷಣೆ ​ಕಂಡಿದೆ. ಎರಡೂವರೆ ಲಕ್ಷಕ್ಕಿಂತಲೂ ಹೆಚ್ಚಿನ ಮಂದಿ ಇದನ್ನು ಲೈಕ್​ ಮಾಡಿದ್ದಾರೆ. ರ‍್ಯಾಪ್ ಸಿಂಗರ್​ ಕಾರ್ಡಿ ಬಿ ಅವರ ‘ಅಪ್’ ಹಾಡಿಗೆ ಯಾರು ಎಷ್ಟು ಚೆನ್ನಾಗಿ ಡ್ಯಾನ್​ ಮಾಡುತ್ತಾರೆ ಎಂಬ ಚಾಲೆಂಜ್​ ಸೋಶಿಯಲ್​ ಮೀಡಿಯಾದಲ್ಲಿ ಜೋರಾಗಿದೆ. ಸದ್ಯ ರಶ್ಮಿ ಮಾಡಿರುವ ಬಿಂದಾಸ್​ ಡಾನ್ಸ್​ಗೆ ಅವರ ಫ್ಯಾನ್ಸ್​ ಫಿದಾ ಆಗಿದ್ದಾರೆ.

ನಟನೆ ಮಾತ್ರವಲ್ಲದೆ ಭರತನಾಟ್ಯ ಮತ್ತು ಕಥಕ್​ನಲ್ಲಿ ರಶ್ಮಿ ಪರಿಣತಿ ಹೊಂದಿದ್ದಾರೆ. ಈ ಹಿಂದೆ ಅವರು ಡ್ಯಾನ್ಸ್​ ರಿಯಾಲಿಟಿ ಶೋಗಳನ್ನೂ ಭಾಗವಹಿಸಿದ್ದರು. ಹಾಗಾಗಿ ಅವರು ಇಷ್ಟ ಚೆನ್ನಾಗಿ ಡ್ಯಾನ್ಸ್​ ಮಾಡಬಲ್ಲರು. ಸದ್ಯ ಎಲ್ಲೆಲ್ಲೂ ಕೊರೊನಾ ಕಾಟ ಕೊಡುತ್ತಿದೆ. ಇಂಥ ಸಂದರ್ಭದಲ್ಲಿ ರಸ್ತೆಗೆ ಬಂದು ಡ್ಯಾನ್ಸ್​ ಮಾಡುವ ಬದಲು ಮನೆಯೊಳಗೆ ಇರಬೇಕು ಎಂಬುದಾಗಿಯೂ ಅನೇಕರು ರಶ್ಮಿಗೆ ಬುದ್ಧಿಮಾತು ಹೇಳಿದ್ದಾರೆ.

ಇದನ್ನೂ ಓದಿ:

Bigg Boss Kannada: ಬಿಗ್​ ಬಾಸ್​ ಕನ್ನಡ ಸೀಸನ್​​ 8ರಲ್ಲಿ ನಡೆಯಿತು ಯಾರೂ ಊಹಿಸಿರದ 3 ವಿಚಿತ್ರ ಘಟನೆಗಳು

ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಈಡೇರಿತು ರಘು ಗೌಡ ಆಸೆ

ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು