ಬಿಗ್ ಬಾಸ್ ಮನೆಯಿಂದ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗೋಕೆ ಆ ಒಂದು ಮಾತು ಕಾರಣವಾಯ್ತು

ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿತ್ತು.

ಬಿಗ್ ಬಾಸ್ ಮನೆಯಿಂದ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗೋಕೆ ಆ ಒಂದು ಮಾತು ಕಾರಣವಾಯ್ತು
ನಿಧಿ ಸುಬ್ಬಯ್ಯ
Edited By:

Updated on: Jul 04, 2021 | 10:30 PM

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ನ ಮೊದಲ ಎಲಿಮಿನೇಷನ್​ ಈ ವಾರ ನಡೆದಿದೆ. ನಿಧಿ ಸುಬ್ಬಯ್ಯ ಬಿಗ್​ ಬಾಸ್​ ಮನೆಯಿಂದ ಹೊರ ಹೋಗಿದ್ದಾರೆ. ಈ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ಅವರ ಜರ್ನಿ ಕೊನೆಯಾಗಿದೆ.

ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿತ್ತು. ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಹೆಚ್ಚು ವೋಟ್​ ಪಡೆದು ಸೇಫ್​ ಆದರು.

ನಿಧಿ ಸುಬ್ಬಯ್ಯ ಇಂದು ಎಲಿಮಿನೇಷನ್​ ಆಗೋಕೆ ಕಾರಣ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆದ ಆಕ್ರೋಶ. ನಿಧಿಗೆ ಅರವಿಂದ್ ಮುಚ್ಕೊಂಡಿರಿ ಎಂದು ಹೇಳಿದ್ದರು. ಅರವಿಂದ್​ ಕ್ರೀಡೆಯಲ್ಲಿ ಅಷ್ಟೊಂದು ಸಾಧನೆ ಮಾಡಿದ್ದರೂ, ಕಪ್​ ಗೆದ್ದಿಲ್ಲ ಎಂದು ನಿಧಿ ಹಂಗಿಸಿದ್ದರು. ಈ ಮೂಲಕ ಅವರಿಗೆ ಅವಮಾನ ಮಾಡಿದ್ದರು. ಈ ಬಗ್ಗೆ ನಿಧಿ ಕ್ಷಮೆ ಕೇಳಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು.

ಹೀಗೆ ಹೇಳಿದ ಆ ಒಂದು ಮಾತು ನಿಧಿಗೆ ಸಾಕಷ್ಟು ಹಾನಿ ಉಂಟು ಮಾಡಿದೆ. ಈ ಬಾರಿ ಕಡಿಮೆ ವೋಟ್​ ಬರೋಕೆ ಇದು ಪ್ರಮುಖ ಕಾರಣವಾಗಿದೆ. ಹೀಗಾಗಿ, ಅವರು ಈ ವಾರ ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ. ಅವರು ಹೊರ ಹೋದ ನಂತರದಲ್ಲಿ ಈ ಬಗ್ಗೆ ಕ್ಷಮೆ ಕೇಳುತ್ತಾರಾ ಎಂಬುದು ಸದ್ಯದ ಕುತೂಹಲ.

ಕಳೆದ ವಾರ ಯಾವುದೇ ಎಲಿಮಿನೇಷನ್​ ಇರಲಿಲ್ಲ. ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬಂದು ಕೆಲವೇ ದಿನ ಕಳೆದಿದ್ದವು. ಹೀಗಾಗಿ, ಯಾರು ಹೇಗೆ ಪರ್ಫಾರ್ಮೆನ್ಸ್ ಮಾಡುತ್ತಾರೆ ಅನ್ನೋದು ಇನ್ನು ಸ್ಪಷ್ಟವಾಗಿ ತಿಳಿದಿರಲಿಲ್ಲ. ಈ ಕಾರಣಕ್ಕೆ ಎಲಿಮಿನೇಷನ್ ನಡೆದಿರಲಿಲ್ಲ. ಆದರೆ, ನಾಮಿನೇಷನ್​ ಪಟ್ಟಿ ಈ ವಾರಕ್ಕೆ ಹಾಗೆಯೇ ಮುಂದುವರಿದಿತ್ತು.

ಇದನ್ನೂ ಓದಿ: ಪ್ರಿಯಾಂಕಾ ಕೋಪಕ್ಕೆ ಬೆಚ್ಚಿದ ಬಿಗ್​ ಬಾಸ್​ ಮಂದಿ; ಚಂದ್ರಚೂಡ್​ಗೆ ಖಡಕ್​ ವಾರ್ನಿಂಗ್​

Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

Published On - 9:53 pm, Sun, 4 July 21