AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಗಿರುವ ಬಿಗ್ ಬಾಸ್ ಸ್ಪರ್ಧಿಗಳನ್ನೇ ಇಟ್ಟುಕೊಂಡು ಹೊಸ ರಿಯಾಲಿಟಿ ಶೋ; ಸುದೀಪ್ ಕೊಟ್ಟರು ಹಿಂಟ್

ಬಿಗ್ ಬಾಸ್ ಕನ್ನಡದ ಮಾಜಿ ಮತ್ತು ಪ್ರಸ್ತುತ ಸ್ಪರ್ಧಿಗಳು ಕಲರ್ಸ್ ಕನ್ನಡದ ಹೊಸ ರಿಯಾಲಿಟಿ ಶೋ ‘ಬಾಯ್ಸ್ Vs ಗರ್ಲ್ಸ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಶೋದ ಲೋಗೋ ಅನುಪಮಾ ಗೌಡ ಅವರು ಅನಾವರಣಗೊಳಿಸಿದ್ದು, ಶನಿವಾರ ಮತ್ತು ಭಾನುವಾರ ಶೋ ನಡೆಯುವ ನಿರೀಕ್ಷೆಯಿದೆ. ಸುದೀಪ್ ಅವರು ಈ ಸ್ಪರ್ಧಿಗಳು ಕಲರ್ಸ್ ಕನ್ನಡಕ್ಕೆ ಬಹಳ ಮುಖ್ಯ ಎಂದು ಹೇಳಿದ್ದಾರೆ.

ಈಗಿರುವ ಬಿಗ್ ಬಾಸ್ ಸ್ಪರ್ಧಿಗಳನ್ನೇ ಇಟ್ಟುಕೊಂಡು ಹೊಸ ರಿಯಾಲಿಟಿ ಶೋ; ಸುದೀಪ್ ಕೊಟ್ಟರು ಹಿಂಟ್
ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jan 13, 2025 | 7:29 AM

Share

‘ಬಿಗ್ ಬಾಸ್​’ನಲ್ಲಿ ಅವಕಾಶ ಪಡೆದ ಸ್ಪರ್ಧಿಗಳು ನಂತರ ಕಲರ್ಸ್​ನ ಬೇರೆ ಬೇರೆ ಧಾರಾವಾಹಿ ಹಾಗೂ ರಿಯಾಲಿಟಿ ಶೋನಲ್ಲಿ ಕೆಲಸ ಮಾಡಿದ ಉದಾಹರಣೆ ಇದೆ. ಮಾಜಿ ಸ್ಪರ್ಧಿಗಳಾದ ದಿವ್ಯಾ ಉರುಡುಗ ಅವರು ‘ನಿನಗಾಗಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮಂಜು ಪಾವಗಡ ಅವರು ಧಾರಾವಾಹಿ ಹಾಗೂ ವಿವಿಧ ಶೋನಲ್ಲಿ ಕೆಲಸ ಮಾಡುತ್ತಿದ್ದಾರೆ. ದಿವ್ಯಾ ಸುರೇಶ್ ಅವರು ಕಲರ್ಸ್​ನ ಧಾರಾವಾಹಿಯಲ್ಲಿ ನಟಿಸಿದ್ದರು. ಅನುಪಮಾ ಗೌಡ ಅವರು ಅನೇಕ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಈಗ ಇರುವ ಸ್ಪರ್ಧಿಗಳನ್ನು ಇಟ್ಟುಕೊಂಡು ಹೊಸ ರಿಯಾಲಿಟಿ ಶೋ ನಡೆಸೋ ಸಾಧ್ಯತೆ ಇದೆ.

ಇತ್ತೀಚೆಗೆ ಬಿಗ್ ಬಾಸ್ ಮನೆಗೆ ನಟಿ, ನಿರೂಪಕಿ ಅನುಪಮಾ ಗೌಡ ಅತಿಥಿಯಾಗಿ ಬಂದಿದ್ದರು. ಅವರು ಹೊಸ ರಿಯಾಲಿಟಿ ಶೋ ಬಗ್ಗೆ ಹೇಳಿದರು. ಆ ರಿಯಾಲಿಟಿ ಶೋ ಹೆಸರು ‘ಬಾಯ್ಸ್ Vs ಗರ್ಲ್ಸ್​’. ಇದರ ಲೋಗೋನ ಅವರು ಅನಾವರಣ ಮಾಡಿದರು. ಬಿಗ್ ಬಾಸ್ ಮನೆಯ ಸ್ಪರ್ಧಿಗಳೇ ಇದರಲ್ಲಿ ಇರುತ್ತಾರೆ ಎಂಬ ಸೂಚನೆಯನ್ನು ಸುದೀಪ್ ನೀಡಿದ್ದಾರೆ. ಆದರೆ ಯಾವುದೂ ಸ್ಪಷ್ಟವಾಗಿ ಹೇಳಿಲ್ಲ.

‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋನ ಹಾಕಲಾಯಿತು. ಈ ಪ್ರೋಮೋನ ಬಿಗ್ ಬಾಸ್ ಸ್ಪರ್ಧಿಗಳನ್ನು ಇಟ್ಟುಕೊಂಡೇ ಶೂಟ್ ಮಾಡಲಾಗಿತ್ತು. ಈ ಪ್ರೋಮೋ ನೋಡಿದ ಬಳಿಕ ಸುದೀಪ್ ಅವರು ಒಂದು ಅಚ್ಚರಿಯವ ವಿಚಾರ ಹೇಳಿದ್ದಾರೆ. ‘ನಮ್ಮ ಕಂಟೆಸ್ಟಂಟ್ಸ್​ ಕಲರ್ಸ್ ಕನ್ನಡಕ್ಕೆ ನಿಂಬೆ ಹಣ್ಣು ಇದ್ದ ಹಾಗೆ. ಕೊನೆಯ ರಸ ಬರುವವರೆಗೂ ಹಿಂಡೋದೇ. ಆಲ್ ದಿ ಬೆಸ್ಟ್ ಫಾರ್ ಯುವರ್ ನ್ಯೂ ಶೋ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: ಬಿಗ್ ಬಾಸ್ ಬಿಟ್ಟರೂ ಸುದೀಪ್ ಬಿಡಲಿಲ್ಲ; ಭವ್ಯಾಗೆ ಸೂಕ್ತ ಶಿಕ್ಷೆ ಕೊಟ್ಟ ಕಿಚ್ಚ

ಈ ರೀತಿಯಾಲಿಟಿ ಶೋ ಶನಿವಾರ ಹಾಗೂ ಭಾನುವಾರ ಶೂಟ್ ಆಗಲಿದೆ. ಹೀಗಾಗಿ ಒಂದು ಅಥವಾ ಎರಡು ದಿನ ಇದರ ಶೂಟಿಂಗ್ ನಡೆಯುವ ಸಾಧ್ಯತೆ ಇದೆ. ಈ ಶೋನ ಬಗ್ಗೆ ಶೀಘ್ರವೇ ಹೆಚ್ಚಿನ ಮಾಹಿತಿ ರಿವೀಲ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!