ಸಾಮಾಜಿಕ ಜಾಲತಾಣಗಳಿಂದಾಗಿ (Social Media) ಜನಪ್ರಿಯತೆ ಎಂಬುದು ಸುಲಭವಾಗಿಬಿಟ್ಟಿದೆ. ಮುಂಚೆ ಜನಪ್ರಿಯತೆ ಗಳಿಸಲು ನಿಜವಾಗಿಯೂ ಒಳ್ಳೆಯ ಕಲಾವಿದರಾಗಬೇಕಿರುತ್ತಿತ್ತು, ವಿದ್ಯಾವಂತರಾಗಬೇಕಿತ್ತು, ಆದರೆ ರೀಲ್ಸ್ಗಳು ಬಂದ ಮೇಲೆ ಚಿತ್ರ ವಿಚಿತ್ರವಾಗಿ ಆಡುವವರು ಸಹ ಸೆಲೆಬ್ರಿಟಿಗಳಾಗಿಬಿಡುತ್ತಿದ್ದಾರೆ. ಆದರೆ ಹಲವರು ತಮಗೆ ಒದಗಿಬಂದ ಈ ಅಚಾನಕ್ ಜನಪ್ರಿಯತೆಯನ್ನು ಸಂಭಾಳಿಸಲಾಗದೆ ಅಡ್ಡದಾರಿ ಹಿಡಿಯುತ್ತಿದ್ದಾರೆ. ಇದೇ ರೀತಿ ಹಠಾತ್ ಜನಪ್ರಿಯತೆ ಗಳಿಸಿ ಬಿಗ್ಬಾಸ್ಗೂ ಹೋಗಿ ಬಂದ ಯುವಕನೊಬ್ಬ ಈಗ ಮಾದಕ ವಸ್ತು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.
ಯೂಟ್ಯೂಬ್ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿ, ಬಳಿಕ ತೆಲುಗು ಬಿಗ್ಬಾಸ್ಗೆ ಹೋಗಿ ರನ್ನರ್ ಅಪ್ ಆದ ಷಣ್ಮುಕ್ ಜಸ್ವಂತ್ ಅನ್ನು ಮಾದಕ ವಸ್ತು ಬಳಕೆ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಷಣ್ಮುಕ್ ಜಸ್ವಂತ್ ಸಹೋದರನ್ನು ಯುವತಿಗೆ ಮೋಸ ಮಾಡಿದ ಪ್ರಕರಣದಲ್ಲಿ ಅದೇ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಪ್ರತಿಭಾವಂತ ಹುಡುಗಿಗೆ ಕೊಟ್ಟ ಮಾತು ಉಳಿಸಿಕೊಂಡ ವಿಜಯ್ ದೇವರಕೊಂಡ; ಷಣ್ಮುಖಪ್ರಿಯಾಗೆ ಸಿಕ್ತು ಚಾನ್ಸ್
ವೈದ್ಯೆ ಮೌನಿಕಾ ಎಂಬ ಮಹಿಳೆಗೆ ಮೋಸ ಮಾಡಿ ಇನ್ನೊಂದು ಮದುವೆಗೆ ಸಜ್ಜಾಗಿದ್ದ ಷಣ್ಮುಕ್ ಸಹೋದರ ಸಂಪತ್ ವಿನಯ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಯೂಟ್ಯೂಬರ್, ಮಾಜಿ ಬಿಗ್ಬಾಸ್ ಸ್ಪರ್ಧಿ ಷಣ್ಮುಖ್ ಅನ್ನು ಗಾಂಜಾ ಪ್ರಕರಣದಲ್ಲಿ ಬಂಧನಕ್ಕೆ ಒಳಪಡಿಸಿದ್ದಾರೆ. ಷಣ್ಮುಖ್, ಹಲವು ಕಿರು ವಿಡಿಯೋಗಳನ್ನು ಮಾಡಿ ಯೂಟ್ಯೂಬ್ನಲ್ಲಿ ಜನಪ್ರಿಯತೆ ಗಳಿಸಿದ್ದರು.
ವೈದ್ಯೆ ಮೌನಿಕಾ ನೀಡಿದ ದೂರು ಸ್ವೀಕರಿಸಿ ಆರೋಪಿ ಸಂಪತ್ ಅನ್ನು ವಿಚಾರಣೆ ಮಾಡಲು ಅವರ ನಿವಾಸಕ್ಕೆ ತೆರಳಿದ್ದಾಗ ಷಣ್ಮುಖ್ ಗಾಂಜಾ ಸೇವಿಸಿದ್ದು ತಿಳಿದು ಬಂದಿದೆ. ಕೂಡಲೇ ಷಣ್ಮುಖ್ ಅನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಷಣ್ಮುಖ್, ಬಿಗ್ಬಾಸ್ ತೆಲುಗು ಸೀಸನ್ 5ರಲ್ಲಿ ಭಾಗವಹಿಸಿದ್ದರು. ಫಿನಾಲೆ ವರೆಗೂ ಬಂದು ರನ್ನರ್ ಅಪ್ ಆಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ