ಪತ್ನಿ ಹಾಗೂ ಗೆಳೆಯರೊಟ್ಟಿಗೆ ದರ್ಶನ್ ಪಾರ್ಟಿ, ಇಲ್ಲಿವೆ ರಂಗು-ರಂಗಿನ ಚಿತ್ರಗಳು
Darshan Thoogudeepa: ದರ್ಶನ್ ವಿರುದ್ಧ ನಾಲ್ಕು ದೂರುಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದೆ ತಮ್ಮ ಪತ್ನಿ ಹಾಗೂ ಗೆಳೆಯರೊಟ್ಟಿಗೆ ಪಾರ್ಟಿ ಮಾಡಿದ್ದಾರೆ. ಇಲ್ಲಿವೆ ಚಿತ್ರಗಳು.
Updated on:Feb 24, 2024 | 2:54 PM

ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿವಾದ ತಾರಕಕ್ಕೇರಿದೆ. ದರ್ಶನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ.

ಆದರೆ ನಟ ದರ್ಶನ್ ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಆರಾಮವಾಗಿ ಪತ್ನಿಯೊಟ್ಟಿಗೆ ತಮ್ಮ ಆಪ್ತ ಗೆಳೆಯರೊಟ್ಟಿಗೆ ಸಖತ್ ಆಗಿ ಪಾರ್ಟಿ ಮಾಡಿದ್ದಾರೆ.

ಪತ್ನಿ ವಿಜಯಲಕ್ಷ್ಮಿ ಜೊತೆಗೆ ಡ್ಯಾನ್ಸ್ ಫ್ಲೋರ್ ನಲ್ಲಿ ದರ್ಶನ್ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ವಿಜಯಲಕ್ಷ್ಮಿ ಸಹ ಪತಿಯೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದಾರೆ.

ದರ್ಶನ್ರ ಹಲವು ಗೆಳೆಯರು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಎಲ್ಲರೂ ಸೇರಿ ಕುಣಿದು ಕುಪ್ಪಳಿಸಿರುವ ಜೊತೆಗೆ ಗುಂಪಾಗಿ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.

ದರ್ಶನ್ ವಿರುದ್ಧ ಮಹಿಳಾಪರ ಸಂಘಟನೆ ಹಾಗೂ ಇತರೆ ಕೆಲವು ಸಂಘಟನೆಗಳು ದೂರುಗಳನ್ನು ದಾಖಲಿಸಿವೆ. ಆದರೆ ಅದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಆರಾಮವಾಗಿ ಪಾರ್ಟಿ ಮಾಡಿದ್ದಾರೆ.

ದರ್ಶನ್ ಪ್ರಸ್ತುತ ‘ಕಾಟೇರ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ‘ಕಾಟೇರ’ ಇತ್ತೀಚೆಗಷ್ಟೆ 50 ದಿನ ಪೂರೈಸಿದೆ. ಇದೀಗ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಪತ್ನಿಯೊಂದಿಗೆ ಪಾರ್ಟಿ ಮಾಡುವ ಮೂಲಕ ಕೆಲವು ದಿನಗಳ ಹಿಂದೆ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ನಡುವೆ ಎದ್ದಿದ್ದ ವಿವಾದಕ್ಕೂ ಪರೋಕ್ಷ ಉತ್ತರವನ್ನು ದರ್ಶನ್ ನೀಡಿದಂತಿದ್ದಾರೆ.
Published On - 2:50 pm, Sat, 24 February 24



















