68ನೇ ಫಿಲ್ಮ್ಫೇರ್ (Filmfare 2023) ಪ್ರಶಸ್ತಿ ವಿತರಣೆ ಸಮಾರಂಭ ಇಂದು (ಏಪ್ರಿಲ್ 28) ಅದ್ಧೂರಿಯಾಗಿ ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ನಡೆಯುತ್ತಿದ್ದು, ಕಳೆದ ವರ್ಷ ಬಿಡುಗಡೆ ಆದ ಅತ್ಯುತ್ತಮ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಬ್ರಹ್ಮಾಸ್ತ್ರ (Brahmastra), ದಿ ಕಾಶ್ಮೀರ್ ಫೈಲ್ಸ್ (The Kashmir Files), ಗಂಗೂಬಾಯಿ ಕಾಠಿಯಾವಾಡಿ (Gangubai Kathiawadi) ಸೇರಿದಂತೆ ಹಲವು ಸಿನಿಮಾಗಳು ಪ್ರಶಸ್ತಿ ರೇಸ್ನಲ್ಲಿದ್ದವು. ಆ ಪೈಕಿ ಪ್ರಶಸ್ತಿ ಗೆದ್ದವರ ಪಟ್ಟಿ ಇಲ್ಲಿದೆ.
ಅತ್ಯುತ್ತಮ ಸಿನಿಮಾ: ಗಂಗೂಬಾಯಿ ಕಾಠಿಯಾವಾಡಿ
ಅತ್ಯುತ್ತಮ ನಿರ್ದೇಶಕ: ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ನಟ: ರಾಜ್ಕುಮಾರ್ ರಾವ್ (ಬದಾಯಿ ದೋ)
ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್ (ಜುಗ್ಜುಗ್ ಜಿಯೋ)
ಅತ್ಯುತ್ತಮ ಹೊಸ ನಟ- ಅಂಕುಶ್ ಗೇಡಮ್ (ಝುಂಡ್)
ಅತ್ಯುತ್ತಮ ಹೊಸ ನಾಯಕಿ- ಆಂಡ್ರಿಯಾ ಕೆವಿಚೂಸಾ (ಅನೇಕ್)
ಅತ್ಯುತ್ತಮ ಹೊಸ ನಿರ್ದೇಶಕ- ಜಸ್ಪಾಲ್, ರಾಜೀವ್ (ವದ್)
ಅತ್ಯುತ್ತಮ ಸಂಗೀತ ಆಲ್ಬಂ- ಪ್ರೀತಂ (ಬ್ರಹ್ಮಾಸ್ತ್ರ)
ಅತ್ಯುತ್ತಮ ಗೀತ ಸಾಹಿತ್ಯ- ಅಮಿತ್ ಭಟ್ಟಾಚಾರ್ಯ (ತೇರೆ ಹವಾಲೆ-ಲಾಲ್ ಸಿಂಗ್ ಛಡ್ಡ್ಡ)
ಅತ್ಯುತ್ತಮ ಗಾಯಕ- ಅರಿಜಿತ್ ಸಿಂಗ್ (ಕೇಸರಿಯಾ-ಬ್ರಹ್ಮಾಸ್ತ್ರ)
ಅತ್ಯುತ್ತಮ ಗಾಯಕಿ- ಕವಿತಾ ಸೇಠ್ (ರಂಗಿಸರಯ್-ಜುಗ್ಜುಗ್ ಜಿಯೊ)
ಅತ್ಯುತ್ತಮ ಆಕ್ಷನ್- ಪರ್ವೇಜ್ ಸರೈ (ವಿಕ್ರಂ ವೇದ)
ಅತ್ಯುತ್ತಮ ಹಿನ್ನೆಲೆ ಸಂಗೀತ- ಸಂಚಿತ್ ಬಲ್ಹಾರಾ, ಅಂಕಿತ್ ಬಲ್ಹಾರಾ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ಕೊರಿಯಾಗ್ರಫಿ- ಕೃತಿ ಮಹೇಶ್ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ಸಿನಿಮಾಟೊಗ್ರಫಿ- ಸುದೀಪ್ ಚಟರ್ಜಿ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ವಸ್ತ್ರವಿನ್ಯಾಸ- ಶೀಥಲ್ ಇಕ್ಬಾಲ್ ಶರ್ಮಾ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್- ಸುಬ್ರತಾ, ಅಮಿತ್ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ಎಡಿಟಿಂಗ್- ನಿನದ್ ಖಾನೋಲ್ಕರ್ (ಆಕ್ಷನ್ ಹೀರೋ)
ಅತ್ಯುತ್ತಮ ಶಬ್ದ ವಿನ್ಯಾಸ- ಬಿಶ್ವದೀಪ್ ದೀಪಕ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ವಿಎಫ್ಎಕ್ಸ್- ಡಿನೆಜ್, ರೆಡ್ಫೈನ್ (ಬ್ರಹ್ಮಾಸ್ತ್ರ)
ಜೀವಮಾನ ಶ್ರೇಷ್ಠ ಸಾಧನೆ- ಪ್ರೇಮ್ ಚೋಪ್ರಾ
ಆರ್ಡಿ ಬರ್ಮನ್, ಯುವ ಸಂಗೀತಗಾರ ಪ್ರಶಸ್ತಿ- ಜಾಹ್ನವಿ ಶ್ರೀಮಂಕರ್ (ಗಂಗೂಬಾಯಿ ಕಾಠಿಯಾವಾಡಿ)
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:46 pm, Thu, 27 April 23