ಬಾಲಿವುಡ್ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಹಾಲಿವುಡ್ ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಿಯಾಂಕಾ ಅವರ ಪತಿ ನಿಕ್ ಜೋನಾಸ್ ಕೂಡಾ ತಮ್ಮದೇ ಕೆಲಸಗಳಲ್ಲಿದ್ದಿದ್ದರಿಂದ ಈ ಜೋಡಿ ಕೆಲ ಕಾಲ ಅನಿವಾರ್ಯವಾಗಿ ದೂರವಾಗಿದ್ದರು. ಈಗ ಲಂಡನ್ನಲ್ಲಿ ಈ ಜೋಡಿ ಖುಷಿಯಿಂದ ರಜೆಯ ದಿನಗಳನ್ನು ಕಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇತ್ತೀಚೆಗೆ ಪ್ರಿಯಾಂಕಾ ತಮ್ಮ ಪತಿಯೊಂದಿಗೆ ಲಂಡನ್ನ ಹೊಟೆಲ್ ಒಂದರಲ್ಲಿ ಊಟಕ್ಕೆ ತೆರಳಿದ್ದು, ಅಲ್ಲಿ ಖುಷಿಯಿಂದ ಕಳೆಯುತ್ತಿರುವ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದನ್ನು ಅವರ ಅಭಿಮಾನಿ ಪೇಜ್ ಒಂದು ಹಂಚಿಕೊಂಡಿದ್ದು, ವೈರಲ್ ಆಗಿದೆ.
ವಿಡಿಯೊದಲ್ಲಿ ಹೊಟೆಲ್ ಒಂದರಲ್ಲಿ ಕುಳಿತು, ಊಟ ಮಾಡುತ್ತಾ ಜೋಡಿ ಹರಟುತ್ತಿದೆ. ಆಗ ಪ್ರಿಯಾಂಕಾ ನಿಕ್ ಅವರನ್ನು ಮುದ್ದು ಮಾಡುತ್ತಾ ಕಿಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಕೂಡಾ ಜೊತೆಯಲ್ಲಿದ್ದಾರೆ. ತಾರಾ ದಂಪತಿಯ ಈ ವಿಡಿಯೊ ಅಭಿಮಾನಿಗಳಿಗೆ ಖುಷಿ ನೀಡಿದ್ದು, ತಮ್ಮ ನೆಚ್ಚಿನ ಜೋಡಿ ಖುಷಿಯಿಂದ ದಿನ ಕಳೆಯುತ್ತಿರುವುದನ್ನು ನೋಡಿ ಪುಳಕಿತಗೊಂಡಿದ್ದಾರೆ.
ಫ್ಯಾನ್ಸ್ ಹಂಚಿಕೊಂಡ ವಿಡಿಯೊ ಇಲ್ಲಿದೆ:
ಈ ಮೊದಲು ನಿಕ್ ಜೋನಾಸ್ ಲಾಸ್ ಏಂಜಲೀಸ್ನಲ್ಲಿದ್ದರೆ, ಪ್ರಿಯಾಂಕಾ ಲಂಡನ್ನಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಪ್ರಿಯಾಂಕಾ ಕೈಯಲ್ಲಿ ಹಲವು ಹಾಲಿವುಡ್ ಚಿತ್ರಗಳಿದ್ದು, ಖ್ಯಾತ ತಾರೆಗಳೊಂದಿಗೆ ಅವರು ತೆರೆ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ:
‘ಬಿಗ್ ಬಾಸ್ ಸೀಸನ್ 9’ ಆರಂಭ ಯಾವಾಗ? ಪರಮೇಶ್ವರ್ ಗುಂಡ್ಕಲ್ ಕೊಟ್ರು ಉತ್ತರ
Kareena Kapoor: ಕೊವಿಡ್ ಮೂರನೆ ಅಲೆ ಭೀತಿ; ಪತಿ ಸೈಫ್ ಮತ್ತು ಮಕ್ಕಳೊಂದಿಗೆ ಮಾಲ್ಡೀವ್ಸ್ಗೆ ಹಾರಿದ ಕರೀನಾ
(A fan shares a Video Of Priyanka chopra with her husband Nick Jonas in a restaurant at London)