ನಟ ಆಮಿರ್ ಖಾನ್ ಅವರು ಕಿರಣ್ ರಾವ್ (Kiran Rao) ಜೊತೆಗಿನ ದಾಂಪತ್ಯಕ್ಕೆ 2021ರಲ್ಲಿ ಅಂತ್ಯ ಹಾಡಿದರು. ವಿಚ್ಛೇದನ ನೀಡಿದ ಬಳಿಕ ಅವರ ಬಗ್ಗೆ ಅನೇಕ ಬಗೆಯ ಗಾಸಿಪ್ಗಳು ಹಬ್ಬಿದ್ದುಂಟು. ಅವರು ನಟಿ ಫಾತಿಮಾ ಸಹಾ ಶೇಖ್ ಜೊತೆ ಹೆಚ್ಚು ಆಪ್ತವಾಗಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರಿಬ್ಬರ ನಡುವೆ ಇರುವಂತಹ ಸಂಬಂಧ ಎಂಥದ್ದು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆಮಿರ್ ಖಾನ್ (Aamir Khan) ಮತ್ತು ಫಾತಿಮಾ ಸನಾ ಶೇಖ್ ಅವರು ಮದುವೆ ಆಗಬಹುದು ಎಂಬ ಗುಮಾನಿ ಕೂಡ ಅನೇಕರಿಗೆ ಇದೆ. ಆ ಗುಮಾನಿ ಹೆಚ್ಚಾಗುವ ರೀತಿಯಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಆಮಿರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ಒಟ್ಟಾಗಿ ಆಟ ಆಡಿದ್ದಾರೆ. ಆ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಆಮಿರ್ ಖಾನ್ ಅಥವಾ ಫಾತಿಮಾ ಸನಾ ಶೇಖ್ (Fatima Sana Shaikh) ಅವರು ಪ್ರತಿಕ್ರಿಯೆ ನೀಡಬಹುದು ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ.
ಆಮಿರ್ ಖಾನ್ ಕುಟುಂಬದ ಜೊತೆ ಫಾತಿಮಾ ಸನಾ ಶೇಖ್ ಅವರು ಹೆಚ್ಚು ಆಪ್ತವಾಗಿದ್ದಾರೆ. ಆಮಿರ್ ಖಾನ್ ಪುತ್ರಿ ಇರಾ ಖಾನ್ ಜೊತೆ ಫಾತಿಮಾಗೆ ಸ್ನೇಹ ಇದೆ. ಈ ಹಿಂದೆ ‘ದಂಗಲ್’ ಮತ್ತು ‘ಥಗ್ಸ್ ಆಫ್ ಹಿಂದೂಸ್ತಾನ್’ ಸಿನಿಮಾದಲ್ಲಿ ಆಮಿರ್ ಖಾನ್ ಮತ್ತು ಫತಿಮಾ ಸನಾ ಶೇಖ್ ಅವರು ಜೊತೆಯಾಗಿ ನಟಿಸಿದ್ದರು. ಆ ಬಳಿಕ ಇಬ್ಬರ ನಡುವೆ ಆಪ್ತತೆ ಹೆಚ್ಚಾಯಿತು.
ಫಾತಿಮಾ ಸನಾ ಶೇಖ್ ಮತ್ತು ಆಮಿರ್ ಖಾನ್ ಮದುವೆ ಆಗಬಹುದು ಎಂಬ ಗಾಸಿಪ್ ಕೇಳಿಬಂದಿದ್ದು ಇದೇ ಮೊದಲೇನೂ ಅಲ್ಲ. ಆದರೆ ಅಂಥ ರಿಪೋರ್ಟ್ಗಳು ಪ್ರಕಟ ಆದಾಗ ಫಾತಿಮಾ ಸಖತ್ ಡಿಸ್ಟರ್ಬ್ ಆಗಿದ್ದರಂತೆ. ಆದರೆ ಪದೇ ಪದೇ ಅಂಥದ್ದೇ ಗಾಸಿಪ್ ಕೇಳಿಬಂದ ಬಳಿಕ ಅವರು ಇದನ್ನೆಲ್ಲ ನಿರ್ಲಕ್ಷಿಸಲು ಆರಂಭಿಸಿದರು.
ಇದನ್ನೂ ಓದಿ: Aamir Khan: ನೇಪಾಳಕ್ಕೆ ತೆರಳಿ ಧ್ಯಾನ ಮಾಡುತ್ತಿರುವ ಆಮಿರ್ ಖಾನ್; ಸೋಲಿನ ಸುಳಿಯಿಂದ ಹೊರಬಾರದ ನಟ
‘ದಂಗಲ್’ ಸಿನಿಮಾದಲ್ಲಿ ಆಮಿರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ಅವರು ತಂದೆ-ಮಗಳ ಪಾತ್ರದಲ್ಲಿ ನಟಿಸಿದ್ದರು. ಆದರೆ ಅವರಿಬ್ಬರು ಮದುವೆ ಆಗುತ್ತಾರೆ ಎಂಬ ಗಾಸಿಪ್ ಹಬ್ಬಿದಾದ ಅಭಿಮಾನಿಗಳಿಗೆ ಅಚ್ಚರಿ ಆಗಿತ್ತು. ಸಿನಿಮಾ ವಿಚಾರಕ್ಕೆ ಬರುವುದಾದರೆ, ಆಮಿರ್ ಖಾನ್ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ‘ಲಾಲ್ ಸಿಂಗ್ ಚಡ್ಡಾ’ ಸೋತ ನಂತರ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.