ಖ್ಯಾತ ನಟ ಆಮಿರ್ ಖಾನ್ (Aamir Khan) ಅವರು ಬಾಲಿವುಡ್ನ ಬಹುಬೇಡಿಕೆಯ ಕಲಾವಿದ. ಒಂದು ಕಾಲದಲ್ಲಿ ಅವರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿದ್ದವು. ಅವರ ನಟನೆಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಾಗಿದ್ದರೂ ಕೂಡ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವು ಸಿಕ್ಕಿಲ್ಲ. ಆಮಿರ್ ಖಾನ್ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾ ಹೀನಾಯವಾಗಿ ಸೋತಿತು. ಆ ಬಳಿಕ ಆಮಿರ್ ಖಾನ್ ಅವರು ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಸದ್ಯಕ್ಕೆ ಅವರು ದೀರ್ಘ ಬ್ರೇಕ್ ಪಡೆದುಕೊಂಡಿದ್ದಾರೆ. ಅದರ ನಡುವೆ ಅವರು ಧ್ಯಾನದತ್ತ ಆಸಕ್ತಿ ತೋರಿಸಿದ್ದಾರೆ. ನೇಪಾಳಕ್ಕೆ ತೆರಳಿ ಆಮಿರ್ ಖಾನ್ ಅವರು ಧ್ಯಾನ (Meditation) ಶಿಬಿರದಲ್ಲಿ ಭಾಗಿ ಆಗಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಆಮಿರ್ ಖಾನ್ ಅವರನ್ನು ಮಿಸ್ಟರ್ ಪರ್ಫೆಕ್ಟ್ ಎಂದು ಕರೆಯುತ್ತಾರೆ. ಹಾಗಿದ್ದರೂ ಕೂಡ ಕೆಲವೊಮ್ಮೆ ಅವರ ಲೆಕ್ಕಾಚಾರ ತಲೆ ಕೆಳಗಾಗುತ್ತದೆ. ಆಮಿರ್ ಖಾನ್ ನಟಿಸಿದ್ದ ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರವನ್ನು ಜನರು ಇಷ್ಟಪಡಲಿಲ್ಲ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಕೂಡ ಪ್ರೇಕ್ಷಕರಿಗೆ ಹಿಡಿಸಲಿಲ್ಲ. ಮುಂದೇನು ಮಾಡಬೇಕು ಎಂಬ ಬಗ್ಗೆ ಆಮಿರ್ ಖಾನ್ ಅವರು ಇನ್ನೂ ತೀರ್ಮಾನ ತೆಗೆದುಕೊಂಡಂತಿಲ್ಲ.
ಇದನ್ನೂ ಓದಿ: Ira Khan: 25ನೇ ವಸಂತಕ್ಕೆ ಕಾಲಿಟ್ಟ ಆಮಿರ್ ಖಾನ್ ಪುತ್ರಿ ಇರಾ ಖಾನ್; ಜನ್ಮದಿನದಂದು ಭಾವಿ ಪತಿಗೆ ಸಿಹಿ ಮುತ್ತು
ಸದ್ಯಕ್ಕೆ ಆಮಿರ್ ಖಾನ್ ಅವರು ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಬಾಲಿವುಡ್ನ ಸಮಾರಂಭಗಳು, ಸ್ನೇಹಿತರ ಮನೆಯಲ್ಲಿನ ಪಾರ್ಟಿ ಇತ್ಯಾದಿ ಇವೆಂಟ್ಗಳಲ್ಲಿ ಅವರು ಕಾಣಿಸಿಕೊಳ್ಳುತ್ತ ಕಾಲ ಕಳೆಯುತ್ತಿದ್ದಾರೆ. ಇದರ ನಡುವೆ ಅವರಿಗೆ ಧ್ಯಾನದ ಬಗ್ಗೆ ಆಸಕ್ತಿ ಮೂಡಿದೆ. ಹಾಗಾಗಿ ಮೇ 7ರ ಮುಂಜಾನೆ ಅವರು ನೇಪಾಳಕ್ಕೆ ತೆರಳಿದ್ದಾರೆ. ಅಲ್ಲಿ 10 ದಿನಗಳ ಕಾಲ ಅವರು ಧ್ಯಾನ ಶಿಬಿರದಲ್ಲಿ ಭಾಗಿ ಆಗಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಒಂದು ದಿನದ ಮಟ್ಟಿಗೆ ತಮ್ಮ ಪ್ರೀತಿಯ ವಸ್ತುವನ್ನು ಆಮಿರ್ ಖಾನ್ಗೆ ನೀಡಿದ ಸಲ್ಮಾನ್ ಖಾನ್
ಪ್ರತಿ ಬಾರಿ ಆಮಿರ್ ಖಾನ್ ಅವರ ಸಿನಿಮಾ ರಿಲೀಸ್ ಆಗುವಾಗಲೂ ಕೆಲವರು ಬಹಿಷ್ಕಾರಕ್ಕೆ ಮುಂದಾಗುತ್ತಾರೆ. ‘ಲಾಲ್ ಸಿಂಗ್ ಚಡ್ಡಾ’ ಬಿಡುಗಡೆ ಸಮಯದಲ್ಲೂ ಹಾಗೆಯೇ ಆಯಿತು. ಹಾಗಂತ ಈ ಚಿತ್ರದ ಬಿಡುಗಡೆಯನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ. ಆದರೆ ಪ್ರೇಕ್ಷಕರಿಗೆ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಇಷ್ಟ ಆಗಲಿಲ್ಲ. ಅದಕ್ಕೆ ಕಾರಣ ಹಲವು. ಇದು ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಆಗಿತ್ತು. ಮೂಲ ಸಿನಿಮಾವನ್ನು ಬಹುತೇಕರು ಅದಾಗಲೇ ನೋಡಿದ್ದರು. ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಅವಧಿ ಕೂಡ ದೀರ್ಘವಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ಸೋಲಬೇಕಾಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.