ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ (Aamir Khan) ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಅದಕ್ಕೆ ಕಾರಣ ಆಮಿರ್ ಖಾನ್ ಪುತ್ರಿ ಇರಾ ಖಾನ್ ವಿವಾಹ. ಹೌದು, ಇಂದು (ಜನವರಿ 3) ಇರಾ ಖಾನ್ ಅವರು ಮದುವೆ ಆಗುತ್ತಿದ್ದಾರೆ. ಸೆಲೆಬ್ರಿಟಿಗಳ ಫಿಟ್ನೆಸ್ ಟ್ರೇನರ್ ಆಗಿ ಗುರುತಿಸಿಕೊಂಡಿರುವ ನೂಪುರ್ ಶಿಖಾರೆ (Nupur Shikhare) ಜೊತೆ ಇರಾ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮುಂಬೈನ ಖಾಸಗಿ ಹೋಟೆಲ್ನಲ್ಲಿ ಇರಾ ಖಾನ್ ಮದುವೆ (Ira Khan Wedding) ನಡೆಯುತ್ತಿದ್ದು, ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಪರಸ್ಪರ ಪ್ರೀತಿಸಿ ಇರಾ ಖಾನ್ ಮತ್ತು ನೂಪುರ್ ಶಿಖಾರೆ ಮದುವೆ ಆಗುತ್ತಿದ್ದಾರೆ.
ಇಂದು (ಜ.3) ಸಂಜೆ 7 ಗಂಟೆಗೆ ಮದುವೆ ನಡೆಯಲಿದೆ. ಒಂದು ವಾರ ಮುಂಚೆಯೇ ವಿವಾಹಪೂರ್ವ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು. ಅದರಲ್ಲಿ ಕುಟುಂಬದವರು ಮತ್ತು ಆಪ್ತರು ಭಾಗಿ ಆಗಿದ್ದರು. ಆ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿದ್ದವು. ಆಮಿರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತ ಅವರ ಪುತ್ರಿಯೇ ಇರಾ ಖಾನ್. ಮಗಳ ಮದುವೆಗಾಗಿ ಆಮಿರ್ ಖಾನ್ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ಪುತ್ರಿ ಇರಾ ಖಾನ್ ಮದುವೆಯಾಗುತ್ತಿರುವ ನೂಪುರ್ ಶಿಖರೆ ಯಾರು?
ಆಮಿರ್ ಖಾನ್ ಮತ್ತ ರೀನಾ ದತ್ತ ಅವರ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕೋರ್ಟ್ ಮ್ಯಾರೇಜ್ ಜೊತೆಗೆ ಮಹಾರಾಷ್ಟ್ರದ ಸಂಪ್ರದಾಯಿಕ ಶೈಲಿಯಲ್ಲಿ ಇರಾ ಖಾನ್ ಮದುವೆ ನಡೆಯುತ್ತಿದೆ. ದೇಶದ ಬೇರೆ ಬೇರೆ ನಗರಗಳಲ್ಲಿ ಇರುವ ಅವರ ಸಂಬಂಧಿಕರು ಮದುವೆ ಸಲುವಾಗಿ ಮುಂಬೈಗೆ ಆಗಮಿಸಿದ್ದಾರೆ. ಆಮಿರ್ ಖಾನ್ ಅವರ 2ನೇ ಮಾಜಿ ಪತ್ನಿ ಕಿರಣ್ ರಾವ್ ಕೂಡ ವಿವಾಹಪೂರ್ವ ಕಾರ್ಯಗಳಲ್ಲಿ ಹಾಜರಿ ಹಾಕಿದ್ದಾರೆ. ಈ ಕ್ಷಣದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.
ಮದುವೆ ಬಳಿಕ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲು ಪ್ಲ್ಯಾನ್ ಮಾಡಲಾಗಿದೆ ಎಂದು ವರದಿ ಆಗಿದೆ. ಆ ರಿಸೆಪ್ಷನ್ನಲ್ಲಿ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ. ಸ್ಟಾರ್ ಕಿಡ್ ಆಗಿದ್ದರೂ ಕೂಡ ಇರಾ ಖಾನ್ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿಲ್ಲ. ನಟಿ ಆಗಬೇಕು ಎಂಬ ಉತ್ಸಾಹ ಅವರಿಗೆ ಇಲ್ಲ. ಈ ಹಿಂದೆ ಅವರು ಖಿನ್ನತೆಗೆ ಒಳಾಗಾಗಿದ್ದರು. ಆ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.