ಹೊಸ ಹೇರ್​ ಸ್ಟೈಲ್​ನಲ್ಲಿ ಕಾಣಿಸಿಕೊಂಡ ಆಮಿರ್​ ಖಾನ್​; ಅಭಿಮಾನಿಗಳಿಗೆ ಬೇರೆ ಚಿಂತೆ

ಆಪ್ತರ ಬರ್ತ್​ಡೇ ಪಾರ್ಟಿಗೆ ಆಮಿರ್ ಖಾನ್​ ಅವರು ಸಖತ್​ ಸಿಂಪಲ್​ ಆಗಿ ಬಂದಿದ್ದಾರೆ. ಅವರ ಮುಖದಲ್ಲಿ ಹೆಚ್ಚು ಉತ್ಸಾಹ ಕಾಣಿಸಿಲ್ಲ. ಫ್ಯಾಷನ್​ ಬಗ್ಗೆಯೂ ಅವರು ತಲೆ ಕೆಡಿಸಿಕೊಂಡಿಲ್ಲ. ಸ್ಥಳದಲ್ಲಿ ಇದ್ದ ಅಭಿಮಾನಿಗಳಿಗೆ ಕೈ ಕುಲುಕಿ ಅವರು ವಿಶ್​ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಹೊಸ ಹೇರ್​ ಸ್ಟೈಲ್​ನಲ್ಲಿ ಕಾಣಿಸಿಕೊಂಡ ಆಮಿರ್​ ಖಾನ್​; ಅಭಿಮಾನಿಗಳಿಗೆ ಬೇರೆ ಚಿಂತೆ
ಆಮಿರ್​ ಖಾನ್​

Updated on: Oct 05, 2023 | 3:50 PM

ಬಾಲಿವುಡ್​ ನಟ ಆಮಿರ್​ ಖಾನ್​ (Aamir Khan) ಅವರು ಈಗ ಮೊದಲಿನಂತಿಲ್ಲ. ಅವರು ಕೈ ಹಾಕಿದ ಪ್ರಾಜೆಕ್ಟ್​ಗಳು ಗೆಲ್ಲುತ್ತಿಲ್ಲ. ಆ ಕಾರಣದಿಂದ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಆಮಿರ್​ ಖಾನ್​ ಅನೌನ್ಸ್​ ಮಾಡಲಿರುವ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಹಾಗಾಗಿ ಅವರ ಪ್ರತಿ ನಡೆಯನ್ನೂ ಫ್ಯಾನ್ಸ್​ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈಗ ಆಮಿರ್​ ಖಾನ್​ ಅವರ ಹೇರ್​ ಸ್ಟೈಲ್​ (Aamir Khan Hairstyle) ಬದಲಾಗಿದೆ. ಅದನ್ನು ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಅವಿನಾಶ್​ ಗೋವಾರಿಕರ್​ ಬರ್ತ್​ಡೇ ಪಾರ್ಟಿಯಲ್ಲಿ ಆಮಿರ್​ ಖಾನ್​ ಕಾಣಿಸಿಕೊಂಡಿದ್ದಾರೆ. ಅವರ ವಿಡಿಯೋ (Aamir Khan Viral Video) ವೈರಲ್​ ಆಗಿದೆ.

ಅವಿನಾಶ್​ ಗೋವಾರಿಕರ್​ ಆಯೋಜಿಸಿದ್ದ ಬರ್ತ್​ಡೇ ಪಾರ್ಟಿಗೆ ಆಮಿರ್ ಖಾನ್​ ಅವರು ಸಖತ್​ ಸಿಂಪಲ್​ ಆಗಿ ಬಂದಿದ್ದಾರೆ. ಅವರ ಮುಖದಲ್ಲಿ ಹೆಚ್ಚು ಉತ್ಸಾಹ ಕಾಣಿಸಿಲ್ಲ. ಫ್ಯಾಷನ್​ ಬಗ್ಗೆಯೂ ಅವರು ತಲೆ ಕೆಡಿಸಿಕೊಂಡಿಲ್ಲ. ಸ್ಥಳದಲ್ಲಿ ಇದ್ದ ಅಭಿಮಾನಿಗಳಿಗೆ ಕೈ ಕುಲುಕಿ ಅವರು ಮುಂದೆ ಸಾಗಿದ್ದಾರೆ. ಆದಷ್ಟು ಬೇಗ ಆಮಿರ್​ ಖಾನ್​ ಅವರು ಹೊಸ ಸಿನಿಮಾ ಅನೌನ್ಸ್​ ಮಾಡಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಆ ಬಗ್ಗೆ ಅಪ್​ಡೇಟ್​ ತಿಳಿಯುವ ಹಂಬಲ ಉಂಟಾಗಿದೆ.

ಪ್ರತಿ ಸಿನಿಮಾಗೆ ಆಮಿರ್​ ಖಾನ್​ ಅವರು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಆ ಕಾರಣಕ್ಕಾಗಿಯೇ ಅವರನ್ನು ಮಿಸ್ಟರ್​ ಪರ್ಫೆಕ್ಟ್​ ಅಂತ ಅಭಿಮಾನಿಗಳು ಕರೆಯೋದು. ‘ಥಗ್ಸ್​ ಆಫ್​ ಹಿಂದೂಸ್ತಾನ್​’ ಹಾಗೂ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾಗಳ ಸೋಲಿನಿಂದ ಆಮಿರ್​ ಖಾನ್​ಗೆ ಸಖತ್​ ಹಿನ್ನಡೆ ಆಗಿದೆ. ಈ ಎರಡೂ ಚಿತ್ರಗಳ ಮೇಲೆ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸೋಲು ಅವರ ಹೆಗಲೇರಿತು. ಆ ಬಳಿಕ ಅವರು ಡಲ್​ ಆಗಿದ್ದಾರೆ ಎಂಬುದು ಅಭಿಮಾನಿಗಳ ಭಾವನೆ. ‘ಒಂದೆರಡು ಸಿನಿಮಾ ಸೋತರೆ ಏನಾಯಿತು? ಹೀಗೇಕೆ ಡಲ್​ ಆಗಿದ್ದೀರಿ’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಆಮಿರ್​ ಖಾನ್​ ಮಗಳು ಇರಾ ಖಾನ್​ ಮದುವೆ ತಯಾರಿ ಹೇಗಿದೆ?

ನಟನೆಯಿಂದ ಆಮಿರ್​ ಖಾನ್​ ಅವರು ಅಂತರ ಕಾಯ್ದುಕೊಂಡಿದ್ದರೂ ಕೂಡ ಸಿನಿಮಾ ಮೇಲಿನ ಆಸಕ್ತಿ ಕಳೆದುಕೊಂಡಿಲ್ಲ. ನಿರ್ಮಾಪಕನಾಗಿ ಅವರು ಸಕ್ರಿಯರಾಗಿದ್ದಾರೆ. ‘ಗದರ್ 2’ ಸಿನಿಮಾ ಮೂಲಕ ಸೂಪರ್​ ಸಕ್ಸಸ್​ ಕಂಡಿರುವ ಸನ್ನಿ ಡಿಯೋಲ್​ ನಟನೆಯ ಹೊಸ ಸಿನಿಮಾಗೆ ಆಮಿರ್​ ಖಾನ್​ ಬಂಡವಾಳ ಹೂಡಲಿದ್ದಾರೆ. ಈ ಸಿನಿಮಾಗೆ ‘ಲಾಹೋರ್​ 1947’ ಎಂದು ಶೀರ್ಷಿಕೆ ಇಡಲಾಗಿದೆ. ಇನ್ನು, ಆಮಿರ್​ ಖಾನ್​ ಮಗಳು ಇರಾ ಖಾನ್​ ಮದುವೆಗೂ ತಯಾರಿ ನಡೆಯುತ್ತಿದೆ. ಆ ಕೆಲಸಗಳಲ್ಲೂ ಅವರು ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us