ನಟ ಆಮಿರ್ ಖಾನ್ (Aamir Khan) ಅವರ ಮಗಳು ಇರಾ ಖಾನ್ ವೈವಾಹಿಕ ಜೀವನ ಆರಂಭಿಸಿದ್ದಾರೆ. ಬುಧವಾರ (ಜನವರಿ 3) ಸಂಜೆ ಮುಂಬೈನಲ್ಲಿ ಅವರ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆಯಿತು. ಫಿಟ್ನೆಸ್ ಟ್ರೇನರ್ ನೂಪುರ್ ಶಿಖಾರೆ ಜೊತೆ ಇರಾ ಖಾನ್ ಮದುವೆ (Ira Khan Wedding) ಆಗಿದ್ದಾರೆ. ಈ ಸಂಭ್ರಮದಲ್ಲಿ ಅನೇಕರು ಭಾಗಿ ಆಗಿದ್ದಾರೆ. ಆಮಿರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ (Kiran Rao) ಕೂಡ ಮದುವೆಗೆ ಹಾಜರಿ ಹಾಕಿದ್ದರು. ಈ ವೇಳೆ ಅವರ ಕೆನ್ನೆಗೆ ಆಮಿರ್ ಖಾನ್ ಕಿಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಆಮಿರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತ ಅವರ ಮಗಳು ಇರಾ ಖಾನ್. ಆಮಿರ್ ಖಾನ್ ಮತ್ತು ರೀನಾ ದತ್ತ ಅವರು 2002ರಲ್ಲಿ ವಿಚ್ಛೇದನ ಪಡೆದರು. ಆ ಬಳಿಕವೂ ಮಕ್ಕಳ ಆರೈಕೆ ಸಲುವಾಗಿ ಮಾಜಿ ಪತ್ನಿಗೆ ಆಮಿರ್ ಖಾನ್ ಸಾಥ್ ನೀಡಿದ್ದರು. ಈಗ ಮಗಳ ಮದುವೆಯನ್ನು ಮಾಡಿ ಖುಷಿಪಟ್ಟಿದ್ದಾರೆ. 2005ರಲ್ಲಿ ಆಮಿರ್ ಖಾನ್ ಅವರು ಕಿರಣ್ ರಾವ್ ಜೊತೆ ಮದುವೆ ಆಗಿದ್ದರು. 2021ರಲ್ಲಿ ಅವರಿಬ್ಬರು ಡಿವೋರ್ಸ್ ಪಡೆದರು.
ಇದನ್ನೂ ಓದಿ: ಅದ್ದೂರಿಯಾಗಿ ನಡೆದ ಇರಾ ಖಾನ್ ಮದುವೆ; ಅಂಬಾನಿ ಸೇರಿ ಹಲವು ಸೆಲೆಬ್ರಿಟಿಗಳು ಭಾಗಿ
ಕಿರಣ್ ರಾವ್ ಮತ್ತು ಆಮಿರ್ ಖಾನ್ ಅವರು ಡಿವೋರ್ಸ್ ಪಡೆದಿದ್ದರೂ ಕೂಡ ಅವರ ನಡುವಿನ ಬಾಂಧವ್ಯ ಹಾಗೆಯೇ ಉಳಿದಿದೆ. ಅದಕ್ಕೆ ಈ ವಿಡಿಯೋ ಸಾಕ್ಷಿ ಎಂಬಂತಿದೆ. ಸಾಮಾನ್ಯವಾಗಿ ವಿಚ್ಛೇದನ ಪಡೆದ ಬಳಿಕ ಮಾಜಿ ದಂಪತಿ ನಡುವೆ ಒಂದು ರೀತಿಯ ದ್ವೇಷ ಮನೆ ಮಾಡಿರುತ್ತದೆ. ಆದರೆ ಆಮಿರ್ ಖಾನ್-ಕಿರಣ್ ರಾವ್ ವಿಚಾರದಲ್ಲಿ ಆ ರೀತಿ ಆಗಿಲ್ಲ. ಅವರಿಬ್ಬರು ವಿಚ್ಛೇದನದ ನಂತರವೂ ಸ್ನೇಹಿತರಾಗಿ ಮುಂದುವರಿದಿದ್ದಾರೆ.
ಇರಾ ಖಾನ್-ನೂಪುರ್ ಶಿಖಾರೆ ಮದುವೆಯಲ್ಲಿ ಫ್ಯಾಮಿಲಿ ಜೊತೆ ಕ್ಯಾಮೆರಾಗೆ ಪೋಸ್ ನೀಡುವಾಗ ಮಾಜಿ ಪತ್ನಿ ಕಿರಣ್ ರಾವ್ ಕೆನ್ನೆಗೆ ಆಮಿರ್ ಖಾನ್ ಚುಂಬಿಸಿದ್ದಾರೆ. ಫ್ಯಾನ್ಸ್ ಪೇಜ್ಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸದ್ಯಕ್ಕೆ ಆಮಿರ್ ಖಾನ್ ಸಿಂಗಲ್ ಆಗಿದ್ದಾರೆ. ಸಿನಿಮಾ ಕೆಲಸಗಳಿಂದಲೂ ಅವರು ಬಿಡುವು ಪಡೆದುಕೊಂಡಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಸೋಲಿನ ನಂತರ ಅವರು ಬ್ರೇಕ್ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ