ಬಾಲಿವುಡ್ ನಟ ಆಮಿರ್ ಖಾನ್ (Aamir Khan) ತಮ್ಮ ಅಭಿನಯದ ಹೊರತಾಗಿ ಉತ್ತಮ ನಡವಳಿಕೆಯಿಂದಲೂ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಾರೆ. ಇದೇ ಕಾರಣಕ್ಕೆ ಅವರಿಗೆ ಅಭಿಮಾನಿ ಬಳಗವೂ ಹೆಚ್ಚು. ವಿವಿದೆಡೆಯಿಂದ ಆಗಮಿಸುವ ಅಭಿಮಾನಿಗಳು ಅವರನ್ನು ಭೇಟಿಯಾಗಲು ಹಾತೊರೆಯುತ್ತಾರೆ. ಆಮಿರ್ ಅವಕಾಶವಾದಾಗ ಆಗಮಿಸಿದವರನ್ನು ಮಾತನಾಡಿಸುತ್ತಾರೆ. ಇತ್ತೀಚೆಗೆ ಅಂಥದ್ದೇ ಒಂದು ವಿಡಿಯೋ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರಲ್ಲಿ ಆಮಿರ್ ತಮ್ಮನ್ನು ಭೇಟಿಯಾಗಲು ಬಂದ ಅಭಿಮಾನಿಯ ಕೋರಿಕೆಯನ್ನು ಇದ್ದ ಸಣ್ಣ ಸಮಯಾವಕಾಶದಲ್ಲೇ ಆಲಿಸುತ್ತಾರೆ. ಅಲ್ಲದೇ ಆ ವ್ಯಕ್ತಿಯ ಫೋನ್ ನಂಬರ್ ಪಡೆದು ಕರೆ ಮಾಡುವುದಾಗಿಯೂ ಹೇಳುತ್ತಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ತಾವೇ ಕರೆ ಮಾಡುವುದಾಗಿ ಹೇಳಿದ ಆಮಿರ್ ನಡತೆಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.
ವಿಡಿಯೋದಲ್ಲಿ ಇರುವುದೇನು?
ಆಮಿರ್ ಖಾನ್ ಮುಂಬೈನಲ್ಲಿ ರೆಕಾರ್ಡಿಂಗ್ ಸ್ಟುಡಿಯೋವೊಂದಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಹೊರಬರುವಾಗ ಪಾಪರಾಜಿಗಳು ಆಮಿರ್ ಫೋಟೋ ಹಾಗೂ ವಿಡಿಯೋ ಸೆರೆಹಿಡಿದಿದ್ದಾರೆ. ಈ ನಡುವೆ ವ್ಯಕ್ತಿಯೋರ್ವ ಆಮಿರ್ ಕಾರನ್ನು ಹತ್ತುವ ಮುನ್ನ ಭೇಟಿಯಾಗಿ ತನ್ನ ಕೋರಿಕೆ ಹೇಳಿಕೊಂಡಿದ್ದಾನೆ. ಆತನ ಮಾತು ಮುಗಿಯುವವರೆಗೂ ಆಲಿಸಿದ ನಟ, ವ್ಯಕ್ತಿ ನೀಡಿದ ಫೋನ್ ನಂಬರ್ ಕೂಡ ಪಡೆದಿದ್ದಾರೆ. ನಂತರ ಹೊರಡುವಾಗ ತಾವು ಮರಳಿ ಕರೆ ಮಾಡುವುದಾಗಿ ಆಮಿರ್ ವಾಗ್ದಾನ ನೀಡಿದ್ದಾರೆ. ಇವಿಷ್ಟೂ ಘಟನೆಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ. ಆಮಿರ್ ಮರಾಠಿಯಲ್ಲಿ ಮಾತನಾಡಿದ್ದು ಹಲವರ ಮನಗೆದ್ದಿದೆ. ವಿಡಿಯೋ ನೋಡಿದ ಅಭಿಮಾನಿಗಳು ಆಮಿರ್ ನಡತೆಗೆ ಫಿದಾ ಆಗಿದ್ದಾರೆ. ‘ಇದು ಬಹಳ ವಿಶೇಷವಾಗಿದೆ’ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ:
ಹೊಸ ಘೋಷಣೆ ಮಾಡಿದ ಆಮಿರ್; ಏ.28ಕ್ಕೆ ಸರ್ಪ್ರೈಸ್ ನೀಡ್ತಾರಂತೆ ‘ದಂಗಲ್’ ನಟ:
ಆಮಿರ್ ಖಾನ್ ಸಾಮಾಜಿಕ ಜಾಲತಾಣಗಳಿಂದ ದೂರ ಸರಿದಿದ್ದಾರೆ. ಆದರೆ ತಮ್ಮ ನಿರ್ಮಾಣ ಸಂಸ್ಥೆಯ ಖಾತೆಯಾದ ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇದೀಗ ಆ ಖಾತೆಯ ಮೂಲಕ ಹೊಸ ಘೋಷಣೆ ಮಾಡಿದ್ದಾರೆ ಆಮಿರ್. ವಿಡಿಯೋದಲ್ಲಿ ನಟ ಕ್ರಿಕೆಟ್ ಆಡುತ್ತಿದ್ದು, ಆಟದ ನಡುವೆಯೇ ಕ್ಯಾಮೆರಾ ಬಳಿ ಆಗಮಿಸಿ ಏಪ್ರಿಲ್ 28ಕ್ಕೆ ಎಲ್ಲರಿಗೂ ಸರ್ಪ್ರೈಸ್ ನೀಡುತ್ತೇನೆ, ಹೊಸ ವಿಚಾರ ಹೇಳಲಿದ್ದೇನೆ ಎಂದಿದ್ದಾರೆ.
ಸದ್ಯ ಆಮಿರ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಕೆಲಸಗಳು ಭರದಿಂದ ಸಾಗಿವೆ. ಆಮಿರ್ ಅದೇ ಚಿತ್ರದ ಬಗ್ಗೆ ಹೊಸ ಘೋಷಣೆ ಮಾಡುತ್ತಾರಾ ಅಥವಾ ಕ್ರಿಕೆಟ್ ಕುರಿತ ಹೊಸ ಚಿತ್ರವನ್ನು ಘೋಷಿಸುತ್ತಾರಾ ಎಂಬ ಕುತೂಹಲ ಈಗ ಅಭಿಮಾನಿಗಳ ಮನದಲ್ಲಿ ಮೂಡಿದೆ.
ಆಮಿರ್ ಹಂಚಿಕೊಂಡ ಹೊಸ ವಿಡಿಯೋ:
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ್ದು ‘ಬಾಹುಬಲಿ’ಗಿಂತಲೂ ದೊಡ್ಡ ಗೆಲುವು: ಇದು ಆಮಿರ್ ಖಾನ್ ಫಾರ್ಮುಲಾ
ಹಿಂದಿ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂ. ಬಾಚಿದ ‘ಕೆಜಿಎಫ್ 2’: ಇನ್ನೂ ನಿಂತಿಲ್ಲ ರಾಕಿ ಭಾಯ್ ಆರ್ಭಟ
Published On - 2:12 pm, Sun, 24 April 22