AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾಗಳು ಸೋಲುತ್ತಿರುವುದೇಕೆ? ಚಿತ್ರರಂಗದ ಹುಳುಕು ತೆರೆದಿಟ್ಟ ಆಮಿರ್ ಖಾನ್

Aamir Khan: ನಟ ಆಮಿರ್ ಖಾನ್, ಸಿನಿಮಾ ಉದ್ಯಮದ ಮಾಡೆಲ್ ಅನ್ನು ಟೀಕೆ ಮಾಡುತ್ತಲೇ ಬಂದಿದ್ದಾರೆ. ಜನ ಚಿತ್ರಮಂದಿರಗಳಿಗೆ ಏಕೆ ಬರುತ್ತಿಲ್ಲ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ ಆಮಿರ್ ಖಾನ್. ಸಿನಿಮಾಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಆಮಿರ್ ಖಾನ್, ಸಿನಿಮಾದ ಬ್ಯುಸಿನೆಸ್ ಮಾಡೆಲ್ ಅನ್ನು ಬದಲಾಯಿಸುವ ಒತ್ತಾಯ ಮಾಡಿದ್ದಾರೆ.

ಸಿನಿಮಾಗಳು ಸೋಲುತ್ತಿರುವುದೇಕೆ? ಚಿತ್ರರಂಗದ ಹುಳುಕು ತೆರೆದಿಟ್ಟ ಆಮಿರ್ ಖಾನ್
Aamir Khan
ಮಂಜುನಾಥ ಸಿ.
|

Updated on: May 06, 2025 | 12:53 PM

Share

ಆಮಿರ್ ಖಾನ್ (Aamir Khan) ಅದ್ಭುತವಾದ ನಟ ಆಗಿರುವ ಜೊತೆಗೆ ಅದ್ಭುತ ಸಿನಿಮಾ ಪ್ರೇಮಿ. ಇತರೆ ಖಾನ್​ಗಳು ಕಮರ್ಶಿಯಲ್ ಸಿನಿಮಾ ಕೊಟ್ಟು ಬಾಕ್ಸ್ ಆಫೀಸ್ ಯಶಸ್ಸಿನ ಹಿಂದೆ ಓಡುತ್ತಿದ್ದರೆ ಆಮಿರ್ ಖಾನ್ ಮಾತ್ರ ಬಾಕ್ಸ್ ಆಫೀಸ್​ ಕಡೆಗೆ ತಿರುಗಿ ಸಹ ನೋಡುವುದಿಲ್ಲ, ಅವರ ಗುರಿ ಏನಿದ್ದರೂ ಒಳ್ಳೆಯ ಸಿನಿಮಾ ಕೊಡಬೇಕು, ಹೊಸ ಪ್ರಯೋಗಗಳನ್ನು ಮಾಡಬೇಕು ಎಂಬುದೇ ಆಗಿರುತ್ತದೆ. ಸಿನಿಮಾ ಬಗ್ಗೆ ಕಲೆಯಾಗಿ ಮಾತ್ರವಲ್ಲ ಒಂದು ಉದ್ಯಮವಾಗಿಯೂ ಭಿನ್ನ ರೀತಿಯ ಆಲೋಚನೆಗಳನ್ನೇ ಅವರು ಇರಿಸಿಕೊಂಡಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ನಡೆದ ವೇವ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಮಿರ್ ಖಾನ್, ಸಿನಿಮಾ ಉದ್ಯಮದ ಬಗ್ಗೆ ಚರ್ಚೆ ಮಾಡಿದರು. ಪಿವಿಆರ್ ಸಿನಿಮಾಸ್ ಮಾಲೀಕ ಅಜಯ್ ಬಿಜಲಿ, ಕೆಲ ನಿರ್ಮಾಪಕರು ಸಹ ಭಾಗಿ ಆಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಸಿನಿಮಾ ಉದ್ಯಮದ ಬಗ್ಗೆ ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ.

‘ನೂರಾ ನಲವತ್ತು ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಇರುವ ಸ್ಕ್ರೀನ್​ಗಳ ಸಂಖ್ಯೆ 10000 ಅಷ್ಟೆ. ಅದರಲ್ಲಿ 5000 ಕ್ಕೂ ಹೆಚ್ಚು ಚಿತ್ರಮಂದಿರಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿವೆ. ಇನ್ನುಳಿದ ಎಲ್ಲ ರಾಜ್ಯಗಳಿಗೂ ಸೇರಿ 5 ಸಾವಿರ ಚಿತ್ರಮಂದಿರಗಳು ಅಥವಾ ಸ್ಕ್ರೀನ್​ಗಳು ಇವೆ. ಎಷ್ಟೋ ಜಿಲ್ಲೆಗಳಲ್ಲಿ ಒಂದು ಚಿತ್ರಮಂದಿರ ಸಹ ಇಲ್ಲ. ಹೀಗಿದ್ದಮೇಲೆ ಪ್ರೇಕ್ಷಕ ಎಲ್ಲಿ ಸಿನಿಮಾ ನೋಡುತ್ತಾನೆ’ ಎಂದು ಆಮಿರ್ ಖಾನ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಆಮಿರ್ ಖಾನ್​ಗೆ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಹೆಸರು ಕೊಟ್ಟಿದ್ದು ಇದೇ ವ್ಯಕ್ತಿ

ಒಟಿಟಿಗಳ ವಿಷಯವನ್ನೂ ಪ್ರಸ್ತಾಪಿಸಿದ ಆಮಿರ್ ಖಾನ್, ‘ನಾನು ಒಂದು ಕಾರು ತಯಾರಿಸಿದ್ದೇನೆ. ಅದನ್ನು ಕೊಳ್ಳುವಂತೆ ಗ್ರಾಹಕರಿಗೆ ಹೇಳುತ್ತೇನೆ. ನೀವು ಇಂದು ನನ್ನ ಕಾರು ಖರೀದಿ ಮಾಡದೇ ಇದ್ದರೆ ಇನ್ನೊಂದು ವಾರ ಅಥವಾ ತಿಂಗಳಲ್ಲಿ ಅದೇ ಕಾರನ್ನು ನಾನು ನಿಮ್ಮ ಮನೆಗೆ ತೆಗೆದುಕೊಂಡು ಬಂದು ಕೊಡುತ್ತೇನೆ ಅದೂ ಉಚಿತವಾಗಿ ಎಂದು ಹೇಳಿದರೆ ಆ ಗ್ರಾಹಕ ಒಂದು ತಿಂಗಳು ಕಾದು ಮನೆಯಲ್ಲೇ ಉಚಿತವಾಗಿ ಡೆಲಿವರಿ ಪಡೆಯುತ್ತಾನೆ. ಸಿನಿಮಾಗಳ ಕತೆಯೂ ಇದೇ ಆಗಿದೆ. ಸಿನಿಮಾ ಬಿಡುಗಡೆ ಆದ ಒಂದು ವಾರ ಅಥವಾ ತಿಂಗಳ ಬಳಿಕ ಒಟಿಟಿಯಲ್ಲಿ ಅಥವಾ ಟಿವಿಯಲ್ಲಿ ಸುಲಭವಾಗಿ ನೋಡುವ ಅವಕಾಶ ಇರುವಾಗ ಆತ ಏಕೆ ಚಿತ್ರಮಂದಿರಕ್ಕೆ ಬರುತ್ತಾನೆ’ ಎಂದು ಆಮಿರ್ ಖಾನ್ ಪ್ರಶ್ನೆ ಮಾಡಿದ್ದಾರೆ.

‘ನಮ್ಮ ದೊಡ್ಡ ಬಾಕ್ಸ್ ಆಫೀಸ್ ಹಿಟ್ ಸಿನಿಮಾಗಳು ಸಹ ತಲುಪಿರುವುದು ಕೇವಲ 2% ಜನರಿಗೆ ಮಾತ್ರ. ಇನ್ನುಳಿದ 98% ಜನ ಸಿನಿಮಾ ನೋಡುತ್ತಿಲ್ಲ ಅಥವಾ ಬೇರೆ ಕಡೆ ನೋಡುತ್ತಿದ್ದಾರೆ’ ಎಂದ ಆಮಿರ್ ಖಾನ್, ‘ನಾವೇ ಸಿನಿಮಾಗಳನ್ನು ಮನೆಗೆ ಡೆಲಿವರಿ ಮಾಡುವ ಮೂಲಕ ಜನರಿಗೆ ಚಿತ್ರಮಂದಿರಕ್ಕೆ ಬರಬೇಡಿ ಎಂದು ಪರೋಕ್ಷವಾಗಿ ಹೇಳುತ್ತಿದ್ದೇವೆ. ಹೀಗಿರುವಾಗ ಅವರೇಕೆ ಚಿತ್ರಮಂದಿರಕ್ಕೆ ಬರುತ್ತಾರೆ’ ಎಂದಿದ್ದಾರೆ ಆಮಿರ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ